ಶ್ರಾವಣ ಶನಿವಾರಗಳಂದು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧ
ಮೈಸೂರು

ಶ್ರಾವಣ ಶನಿವಾರಗಳಂದು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧ

July 22, 2020

ಮೈಸೂರು, ಜು.21(ಆರ್‍ಕೆ)-ಕೊರೊನಾ ವೈರಸ್ ಹರಡು ವುದನ್ನು ನಿಯಂತ್ರಿಸುವ ಸಲುವಾಗಿ ಮೈಸೂರಿನ ಒಂಟಿ ಕೊಪ್ಪಲು ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಶನಿವಾರಗಳಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಸಂಬಂಧ ಇಂದು ಆದೇಶ ಹೊರಡಿಸಿ ರುವ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಶ್ರಾವಣ ಶನಿವಾರಗಳಾದ ಜು.24ರ ಸಂಜೆ 6ರಿಂದ ಜು.26ರ ಮುಂಜಾನೆ 5 ಗಂಟೆವರೆಗೆ, ಜು.31ರ ಸಂಜೆ 6ರಿಂದ ಆ.2ರ ಮುಂಜಾನೆ 5 ಗಂಟೆವರೆಗೆ, ಆ.7ರ ಸಂಜೆ 6ರಿಂದ ಆ.9ರ ಮುಂಜಾನೆ 5 ಗಂಟೆವರೆಗೆ ಹಾಗೂ ಆ.14ರ ಸಂಜೆ 6ರಿಂದ ಆ.16ರ ಮುಂಜಾನೆ 5 ಗಂಟೆವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.

Translate »