ಕೃಷ್ಣರಾಜ ಕ್ಷೇತ್ರ `ಕೋವಿಡ್-19 ಸಾವಿಲ್ಲದ ಕ್ಷೇತ್ರ’ವಾಗಿಸಲು ಸಂಕಲ್ಪ
ಮೈಸೂರು

ಕೃಷ್ಣರಾಜ ಕ್ಷೇತ್ರ `ಕೋವಿಡ್-19 ಸಾವಿಲ್ಲದ ಕ್ಷೇತ್ರ’ವಾಗಿಸಲು ಸಂಕಲ್ಪ

July 22, 2020

ಮೈಸೂರು, ಜು.21(ಆರ್‍ಕೆಬಿ)- ಕಾಡಾ ಕಚೇರಿ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಕೋವಿಡ್ ಟಾಸ್ಕ್‍ಫೋರ್ಸ್ ಸಭೆ ನಡೆಸಿದ ಶಾಸಕ ಎಸ್.ಎ.ರಾಮದಾಸ್, ಕೃಷ್ಣರಾಜ ಕ್ಷೇತ್ರವನ್ನು `ಕೋವಿಡ್-19 ಸಾವಿಲ್ಲದ ಕ್ಷೇತ್ರ’ವಾಗಿಸಲು ಶ್ರಮಿ ಸುವ ನಿರ್ಣಯ ಕೈಗೊಂಡರು.

ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಲಯ ಕಚೇರಿ ಗಳ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಅಧಿಕಾರಿ ಗಳು, ಸಹಾಯಕ ಇಂಜಿನಿಯರ್‍ಗಳನ್ನು ಪಟ್ಟಿ ಮಾಡಿ ಕಾರ್ಯ ನಿರ್ವಹಿಸಲಾಗುವುದು. ಪ್ರತಿ ವಲಯಕ್ಕೆ ಇಬ್ಬರು ಪೊಲೀಸ್ ಕಾನ್‍ಸ್ಟೇಬಲ್‍ಗಳನ್ನು ಕೋವಿಡ್ ನಿರ್ವಹಣೆಗೆ ಮೀಸಲಿಡುವುದು, ಸದ್ಯದ ಪರಿಸ್ಥಿತಿ ಯಲ್ಲಿ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿರುವ 112 ಕಂಟೈನ್ ಮೆಂಟ್ ವಲಯಗಳಲ್ಲಿ 24 ಗಂಟೆಗಳ ಕಾಲ ಬಂದೋ ಬಸ್ತ್‍ಗಾಗಿ ಹೋಮ್‍ಗಾಡ್ರ್ಸ್, ಪೊಲೀಸ್ ಕಾನ್‍ಸ್ಟೇಬಲ್ ಗಳನ್ನು ನೇಮಿಸುವುದು, ಪ್ರತ್ಯೇಕವಾಗಿ ತೊಣಚಿ ಕೊಪ್ಪಲು ಆರ್‍ಟಿಟಿಸಿ ಆವರಣ, ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಬಾಡಿಗಾರ್ಡ್ ಹಾಗೂ ಶಾರದಾ ವಿಲಾಸ ಶಾಲೆ ಎದುರಿನ ಮಕ್ಕಳಕೂಟ ಕಡೆ ಹಾಗೂ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದ ಎಲ್ಲ ದಿನಗಳಲ್ಲೂ ಕೋವಿಡ್ ಪರೀಕ್ಷಾ ಕೇಂದ್ರ ಪ್ರಾರಂಭಿಸಲು ನಿರ್ಧರಿಸಲಾಯಿತು.

ಕ್ಷೇತ್ರ ವ್ಯಾಪ್ತಿಯ 12 ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಹೆಚ್‍ಸಿ)ಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಗಳು ಮತ್ತು ಎರಡು ಹೆರಿಗೆ ಆಸ್ಪತ್ರೆಗಳನ್ನು ಹೊರತುಪಡಿಸಿ ಏಳು ಪಿಹೆಚ್‍ಸಿಗಳಿಂದ ಪ್ರತೀ ವಲಯಕ್ಕೆ ಇಬ್ಬರಂತೆ ಎಂಟು ಮಂದಿ ವೈದ್ಯರನ್ನು ನಿಯೋಜಿಸಲು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಲಾಯಿತು.

ತೊಣಚಿಕೊಪ್ಪಲಿನ ಆರ್‍ಟಿಟಿಸಿ ಸೆಂಟರ್‍ನ ಆವ ರಣದಲ್ಲಿ ನೂತನವಾಗಿ ಫೆಸಿಲಿಟಿ ಸೆಂಟರ್ ಪ್ರಾರಂಭಿ ಸಲು ಚಿಂತನೆ ನಡೆಸಲಾಗುತ್ತಿದೆ. ಈ ಎಲ್ಲಾ ತೀರ್ಮಾನ ಗಳನ್ನು ಸಂಘ ಸಂಸ್ಥೆಗಳ ಮುಖ್ಯಸ್ಥರು, ವಲಯ ಕಚೇರಿಯ ಉಪ ಆಯುಕ್ತರು, ಆರೋಗ್ಯ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಾಲೂಕು ಆರೋಗ್ಯಾ ಧಿಕಾರಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಯಿತು

Translate »