ಮೈಸೂರು, ಜು.21(ಎಂಟಿವೈ)- ಸಹಾಯಕ ಪ್ರಾಧ್ಯಾ ಪಕರ ನೇಮಕ ಅಧಿಸೂಚನೆ ರದ್ದುಗೊಳಿಸಬೇಕು, ಅತಿಥಿ ಉಪನ್ಯಾಸಕರಿಗೆ ಹರಿಯಾಣ, ಪಶ್ಚಿಮ ಬಂಗಾಳ ಮಾದರಿ ಯಲ್ಲಿ ಸೇವಾ ಭದ್ರತೆ ಒದಗಿಸಬೇಕು ಹಾಗೂ ಲಾಕ್‍ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದೇ ಪರಿಗಣಿಸಿ ಪೂರ್ಣ ವೇತನ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿತು. ವಿವಿಧ ಕಾಲೇಜುಗಳ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.
ಅತಿಥಿ ಉಪನ್ಯಾಸಕರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂ ತಾಗಿದೆ. 15-20 ವರ್ಷಗಳಿಂದ ನಮ್ಮನ್ನು ಬಳಸಿಕೊಂಡು ಈಗ ನಿರ್ಜೀವ ವಸ್ತುಗಳನ್ನಾಗಿಸಿ ಬೀದಿಗೆ ಬಿಸಾಡು ವಂತೆ ಸರ್ಕಾರ ವರ್ತಿಸುತ್ತಿದೆ. ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡದೇ ರಾಜ್ಯ ಸರ್ಕಾರ ಸಹಾಯಕ ಪ್ರಾಧ್ಯಾ ಪಕ ಹುದ್ದೆಗೆ ಅಧಿಸೂಚನೆ ಹೊರಡಿಸಿ ನಮಗೆ ಸಾಮೂ ಹಿಕ ನಿವೃತ್ತಿ ಘೋಷಿಸುತ್ತಿದೆ. ಇದೆಲ್ಲದರಿಂದ ನಮಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು. ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೆ.ಮಹದೇವಯ್ಯ, ಉಪಾಧ್ಯಕ್ಷೆ ಸುಮಿತ್ರ, ಎನ್.ಮಹೇಶ್, ನಾಗಾರ್ಜುನ್, ಪ್ರಧಾನ ಕಾರ್ಯದರ್ಶಿ ಹನುಮಂತೇಶ್, ಕೆ.ಪ್ರಕಾಶ್, ಜೆ.ಮಹೇಶ್ ಇತರರು ಪ್ರತಿಭಟನೆಯಲ್ಲಿದ್ದರು