ದೇಶದಲ್ಲಿ ಸಂಸ್ಕøತ, ಸಂಸ್ಕøತಿ ಮೇಲೆ  ಭಾರೀ ಆಕ್ರಮಣವಾಗುತ್ತಿದೆ
ಮೈಸೂರು

ದೇಶದಲ್ಲಿ ಸಂಸ್ಕøತ, ಸಂಸ್ಕøತಿ ಮೇಲೆ ಭಾರೀ ಆಕ್ರಮಣವಾಗುತ್ತಿದೆ

October 26, 2021

ಮೈಸೂರು, ಅ.25 (ಎಸ್‍ಪಿಎನ್)- ನಮ್ಮ ನೆರೆಯ ಬಾಂಗ್ಲಾದೇಶ ಹಾಗೂ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಹಲ್ಲೆಗಳು ನಡೆದು ಅವರ ಜೀವ ನವೇ ನರಕವಾಗುತ್ತಿದೆ. ಈ ದೌರ್ಜನ್ಯವನ್ನು ನಾವು ಸಹಿಸಿಕೊಳ್ಳುವುದು ಅನಿವಾರ್ಯವೇ? ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದರು.

ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ರುವ ಶ್ರೀ ಕೃಷ್ಣಧಾಮದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಭಕ್ತ ವೃಂದದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ನಮ್ಮ ದೇಶದಲ್ಲಿ ಸಂಸ್ಕøತ ಮತ್ತು ಸಂಸ್ಕøತಿ ಮೇಲೆ ದೊಡ್ಡ ಮಟ್ಟದ ಆಕ್ರಮಣ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಸ್ಕøತದಲ್ಲಿ ರಾಮಾಯಣ, ಮಹಾ ಭಾರತ, ವೇದ, ಉಪನಿಷತ್ತು ರಚಿತವಾಗಿವೆ. ಇವು ಭಾರತದ ಸಂಸ್ಕøತಿಯೂ ಹೌದು. ಇದನ್ನು ಅರಿತಿರುವ ಹಿಂದೂ ವಿರೋಧಿ ಗಳು, ಸಂಸ್ಕøತ ಮಾತನಾಡುವ ಬ್ರಾಹ್ಮಣ ರನ್ನು ನಾಶ ಮಾಡಿದರೆ, ಸಮಗ್ರ ಹಿಂದೂ ಪರಂಪರೆ, ಸಂಸ್ಕøತಿ ನಾಶ ಮಾಡಿದಂತೆ ಎಂದು ಭಾವಿಸಿದ್ದಾರೆ ಎಂದು ಕೆಲ ಘಟನೆಗಳನ್ನು ವಿವರಿಸಿದರು.

ಬ್ರಾಹ್ಮಣರು ಶಾಂತಿ ಪ್ರಿಯರು, ಸೌಮ್ಯ ಸ್ವಭಾವದವರು. ಮೇಲಾಗಿ ಭಾರತದಲ್ಲಿ ಶೇ.2ರಷ್ಟು ಜನಸಂಖ್ಯೆ ಹೊಂದಿರುವ ಬ್ರಾಹ್ಮ ಣರು ಇತರೆ ಸಮುದಾಯಗಳನ್ನು ಸಮಗ್ರ, ಸಮಾನ ದೃಷ್ಟಿಯಿಂದ ನೋಡುತ್ತಿದ್ದಾರೆಯೇ ಹೊರತು ಆಕ್ರಮಣ ನಡೆಸುವ ಮಾತು ಎಲ್ಲಿ?. ನಮ್ಮ ದೇಶದಲ್ಲಿ ಹಿಂದೂಗಳನ್ನು ಅಸಹಿಷ್ಣುಗಳು ಎಂದು ಬಿಂಬಿಸಲಾಗುತ್ತಿದೆ. ಈ ಮಾತು ಎಷ್ಟು ಸತ್ಯ ಎಂದು ಪ್ರಶ್ನಿಸಿದರು.

ಪ್ರಸ್ತುತ ಬ್ರಾಹ್ಮಣರೇ ಜಾತಿ ಕಾಲಂನಲ್ಲಿ `ಬ್ರಾಹ್ಮಣ’ ಎಂದು ನಮೂದಿಸಲು ನಾಲ್ಕೈದು ಬಾರಿ ಚಿಂತಿಸುತ್ತಾರೆ. ವಿಪ್ರ ಸಮುದಾಯ ಎಲ್ಲರನ್ನು ಪ್ರೀತಿಸುವ, ಸಮಾಜ. ಮೇಲಾಗಿ ಕ್ಷತ್ರಿಯ ಸಮಾಜದ ಶ್ರೀ ಕೃಷ್ಣ, ಶ್ರೀ ರಾಮ ರನ್ನು ದೇವರೆಂದು ಪೂಜಿಸುತ್ತಿದೆ. ಇದನ್ನು ಸಹಿತ ಕೆಲವರು ವಿಪ್ರರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಕೆಲವರು ಅಧಿಕಾರಕ್ಕಾಗಿ ಇಲ್ಲಿನ ಹಿಂದೂ ಗಳನ್ನು ವಿಭಜಿಸುವ ಕಾರ್ಯಕ್ಕೆ ಮುಂದಾ ಗಿದ್ದಾರೆ. ಉದಾಹರಣೆಗೆ ಪಶ್ಚಿಮ ಬಂಗಾಳ ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಪರಿಸ್ಥಿತಿ ಎಷ್ಟು ಕಷ್ಟಕರವಾಗಿದೆ ಎಂಬುದನ್ನು ದೇಶದ ಸಮಸ್ತ ಹಿಂದೂಗಳು ತಿಳಿದುಕೊಳ್ಳಬೇಕು ಎಂದ ಶ್ರೀಗಳು, ಈ ದೇಶದಲ್ಲಿ ವಿವಿಧ ಕ್ಷೇತ್ರ ದಲ್ಲಿ ಬ್ರಾಹ್ಮಣರಿಗೆ ಮೀಸಲಾತಿ, ಪ್ರತಿಭೆ ಗಳಿಗೆ ಪುರಸ್ಕಾರವಿಲ್ಲ. ಹಾಗಾಗಿ ಬೌದ್ಧಿಕ ವಾಗಿ ಬೆಳೆದ ಯುವಕರು ಉನ್ನತ ವ್ಯಾಸಂಗ ಮತ್ತು ಹುದ್ದೆಗಳನ್ನು ಹುಡುಕಿಕೊಂಡು ವಿದೇಶಿಗಳಿಗೆ ಹೋಗುತ್ತಿದ್ದಾರೆ. ಇದು ನಮ್ಮ ದೇಶದ ಪ್ರಗತಿಗೆ ಹಿನ್ನಡೆಯಲ್ಲವೇ? ಎಂದು ಪ್ರಶ್ನಿಸಿದರು.
ದೊಡ್ಡ ದೊಡ್ಡ ಸಿನಿಮಾ ನಟರು ಹಿಂದೂ ಯುವತಿಯರನ್ನು ಮದುವೆಯಾಗುತ್ತಾರೆ. 10-15 ವರ್ಷ ಸಂಸಾರ ನಡೆಸಿದ ನಂತರ ಅವರಿಗೆ ವಿಚ್ಛೇದÀನ ನೀಡಿ ಮನೆಯಿಂದ ಹೊರ ಹಾಕುತ್ತಿದ್ದಾರೆ. ಹೀಗೆ ಹೊರ ಬಂದ ಮಹಿಳೆಯರು ಮುಂದಿನ ಜೀವನ ಕಟ್ಟಿ ಕೊಳ್ಳಲು ಏನು ಮಾಡಬೇಕು? ಎಂದು ಪ್ರಶ್ನಿ ಸಿದ ಶ್ರೀಗಳು, ಈ ನಡೆಯಿಂದ ಹಿಂದೂ ಯುವಕ ಮದುವೆಯಾಗಲು ಕನ್ಯಾ ಮಣಿಗಳೇ ಸಿಗುತ್ತಿಲ್ಲ ಎಂದು ಹೇಳಿದರು.
ಈ ಅಂಶ ಬಹುಸಂಖ್ಯಾತ ಹಿಂದೂ ಗಳ ಜನಸಂಖ್ಯೆ ಕುಸಿತಕ್ಕೂ ಕಾರಣವಾಗ ಬಹುದು. ಯುವಜನರಲ್ಲಿ ಇಂತಹ ಮನ ಸ್ಥಿತಿ ಹೋಗಬೇಕಾದರೆ, ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಬೇಕು. ಅದಕ್ಕಾಗಿ ಯಾದರೂ ವೇದ, ಉಪನಿಷತ್ತುಗಳನ್ನು ಇಂದಿನ ಪೀಳಿಗೆಗೆ ಕಲಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಈ ವೇಳೆ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ್, ವಿಪ್ರ ಮುಖಂಡ ಕೆ.ರಘುರಾಂ ವಾಜ ಪೇಯಿ, ಅನಿಲ್ ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್, ಗೋಪಾಲ ರಾವ್, ಕಾಂಗ್ರೆಸ್ ಮುಖಂಡರಾದ ಎನ್.ಎಂ. ನವೀನ್‍ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ವಿನಯ್ ಕಣಗಾಲ್, ಕಡಕೊಳ ಜಗದೀಶ್, ರಾಕೇಶ್ ಭಟ್, ರಂಗನಾಥ್, ಜಯಸಿಂಹ ಶ್ರೀಧರ್, ಸೌಭಾಗ್ಯ ಮೂರ್ತಿ, ಲತಾ ಮೋಹನ್, ಜ್ಯೋತಿ, ಲತಾ ಬಾಲಕೃಷ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »