ಎರಡನೇ ಹಂತದ ಲಾಕ್‍ಡೌನ್‍ನಲ್ಲಿ ಹಲವು ನಿರ್ಬಂಧಗಳ ಸಡಿಲ ಸಂಭವ
ಮೈಸೂರು

ಎರಡನೇ ಹಂತದ ಲಾಕ್‍ಡೌನ್‍ನಲ್ಲಿ ಹಲವು ನಿರ್ಬಂಧಗಳ ಸಡಿಲ ಸಂಭವ

April 13, 2020

ನವದೆಹಲಿ,ಏ.12- ಲಾಕ್‍ಡೌನ್ ಏ.30ರವರೆಗೆ ವಿಸ್ತರಣೆ ಖಚಿತ ವಾಗುತ್ತಿದ್ದಂತೆ ಸೋಂಕಿನ ತೀವ್ರತೆ ಆಧ ರಿಸಿ ಜಿಲ್ಲೆಗಳನ್ನು ಮೂರು ವಲಯ ಗಳಾಗಿ ವಿಂಗಡಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದೆ. ದೇಶದ ಆರ್ಥಿಕತೆ ಚೇತರಿಕೆಯತ್ತ ಗಮನ ಹರಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಇರುವಂತಹ ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧಗಳ ಸಡಿಲಿಕೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ಜಿಲ್ಲೆಗಳನ್ನು ವಿಂಗಡಿಸಲು ಸರಕಾರ ಸಿದ್ಧತೆ ಆರಂಭಿಸಿದೆ. ಕೊರೊನಾ ತೀವ್ರತೆ ಕಡಿಮೆ ಇರುವ ಪ್ರದೇಶಗಳಲ್ಲಿ ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಿಸಲು ನಿರ್ಧರಿಸಿದೆ.

ನಿರ್ಬಂಧದ ಪ್ರಮಾಣ: ಹಸಿರು ವಲಯದಲ್ಲಿ ಕೆಲವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಿರ್ಬಂಧಗಳನ್ನು ಸಡಿಲಿಸಲಾಗು ತ್ತದೆ. ಹಳದಿ ವಲಯದ ಜಿಲ್ಲೆಗಳಲ್ಲಿ ಸೀಮಿತ ವಾಹನ ಸಂಚಾ ರಕ್ಕೆ ಅನುಮತಿ, ಕೃಷಿ ಉತ್ಪನ್ನಗಳ ಮಾರಾಟ, ಚಟುವಟಿಕೆಗೆ ಅವಕಾಶ ನೀಡಿದರೆ, ಕೆಂಪು ವಲಯದ ಜಿಲ್ಲೆಗಳನ್ನು ಇನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗುತ್ತದೆ. ಆಹಾರ ಸಂಸ್ಕರಣೆ, ವಿಮಾನ ಯಾನ, ಔಷಧ ತಯಾರಿಕೆ ಮತ್ತು ಮಾರಾಟ, ಸಣ್ಣ ಕೈಗಾರಿಕೆ ಗಳು, ಸರಕಾರಿ ನಿರ್ಮಾಣಗಳಿಗೆ ಲಾಕ್‍ಡೌನ್‍ನ ಎರಡನೇ ಹಂತದಲ್ಲಿ ವಿನಾಯಿತಿ ನೀಡಿ ಹಸಿರು ಮತ್ತು ಕಿತ್ತಳೆ ಬಣ್ಣದ ಝೋನ್‍ಗಳಲ್ಲಿ ನಿರ್ಬಂಧಗಳನ್ನು ಸಡಿಲಿಸುವ ಸಾಧ್ಯತೆ ಇದೆ. ಆದರೆ ಈ ಕ್ಷೇತ್ರಗಳಲ್ಲಿ ಕೂಡ ಕನಿಷ್ಠ 1 ತಿಂಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗುವುದು. ಮಾಸ್ಕ್ ಧರಿಸು ವುದು, ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಮೂಲಕ ಆಯಾಯ ಕ್ಷೇತ್ರಗಳಲ್ಲಿ ಕೆಲಸ ಮುಂದುವರಿಸುವಂತೆ ಸಂಬಂಧಪಟ್ಟ ಸಚಿವಾಲಯಗಳು ಸೂಚಿಸಲಿವೆ ಎಂದು ಹೇಳಲಾಗುತ್ತಿದೆ.

ಈವರೆಗೆ ಕೊರೊನಾ ಸೋಂಕು ಪತ್ತೆಯಾಗದ ಜಿಲ್ಲೆಗಳು ಹಸಿರು ವಲಯದಲ್ಲಿವೆ. ಕಿತ್ತಳೆ ವಲಯದಲ್ಲಿ 15ಕ್ಕಿಂತ ಕಡಿಮೆ ಸೋಂಕಿತರಿರುವ ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಗಣ ನೀಯ ಹೆಚ್ಚಳವಾಗದ ಜಿಲ್ಲೆಗಳಿವೆ. ಕೆಂಪು ವಲಯದಲ್ಲಿ 15ಕ್ಕಿಂತ ಹೆಚ್ಚು ಸೋಂಕಿತರಿರುವ ಹಾಗೂ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿರುವ ಜಿಲ್ಲೆಗಳು ಬರುತ್ತವೆ.

ಕೃಷಿಯತ್ತ ಚಿತ್ತ: ಕಲರ್ ಕೋಡ್ ಆಧರಿಸಿ ಜಿಲ್ಲೆಗಳನ್ನು ವಿಂಗಡಿಸಿ ನಿರ್ಬಂಧ ಸಡಿಲಿಸಲು ಸರಕಾರ ಮುಂದಾಗಲು ಕಾರಣ ಮುಂಗಾರು ಆರಂಭ ಇನ್ನೆರಡು ತಿಂಗಳಲ್ಲಿ ಆರಂಭಗೊಳ್ಳುತ್ತಿದ್ದು, ಅದರೊಂದಿಗೆ ದೇಶಾದ್ಯಂತ ಕೃಷಿ ಚಟುವಟಿಕೆಗಳು ಪ್ರಾರಂಭವಾಗ ಲಿವೆ. ಈ ವೇಳೆ ವಲಸೆ ಕಾರ್ಮಿಕರಿಗೆ ಕೂಡ ಸ್ವಲ್ಪ ಪ್ರಮಾಣದಲ್ಲಿ ಇತರ ಕೆಲಸಗಳು ದೊರೆತು ನಿತ್ಯ ಜೀವನ ಸಾಗಣೆಗೆ ಅನು ಕೂಲವಾಗಲಿದೆ ಎನ್ನುವುದು ಸರಕಾರದ ಲೆಕ್ಕಾಚಾರ.

ಏಪ್ರಿಲ್ 14ಕ್ಕೆ ಘೋಷಣೆ: ಎರಡನೇ ಹಂತದ ಲಾಕ್‍ಡೌನ್‍ನ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರ ಸಂಜೆ ಅಥವಾ ಮಾರನೇ ದಿನ ಘೋಷಣೆ ಮಾಡುವ ಸಾಧ್ಯತೆಯಿದೆ. 14ರಂದು ಹಿರಿಯ
ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಪ್ರಧಾನಿ ಮೋದಿ ಎರಡನೇ ಹಂತದ ಲಾಕ್ ಡೌನ್ ನಿಯಮಾವಳಿಗಳನ್ನು ಅವರು ಘೋಷಿಸಲಿದ್ದಾರೆ ಎನ್ನಲಾಗಿದೆ.

ಡೇಂಜರ್ ಝೋನ್‍ನಲ್ಲಿ ದೇಶದ 364 ಜಿಲ್ಲೆಗಳು: ದೇಶದ 364 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಮಾ.29ರಂದು 160 ಜಿಲ್ಲೆಗಳಲ್ಲಷ್ಟೇ ಸೋಂಕು ಪತ್ತೆಯಾ ಗಿತ್ತು. ಕಳೆದ 10 ದಿನಗಳಲ್ಲಿ 120 ಜಿಲ್ಲೆಗಳಿಗೆ ವ್ಯಾಪಿಸಿದೆ. ದೇಶದಲ್ಲಿ 736 ಜಿಲ್ಲೆಗಳಿದ್ದು, ಬಹುತೇಕ ಅರ್ಧದಷ್ಟು ಜಿಲ್ಲೆಗಳಿಗೆ ಕೊರೊನಾ ಮಹಾಮಾರಿ ವ್ಯಾಪಿಸಿದಂತಾಗಿದೆ.

Translate »