ಎಂಎಸ್‍ಐಎಲ್ ಮಳಿಗೆಯಲ್ಲಿ ಏ.15ರಿಂದ ಮದ್ಯ ಮಾರಾಟಕ್ಕೆ ಚಿಂತನೆ!
ಮೈಸೂರು

ಎಂಎಸ್‍ಐಎಲ್ ಮಳಿಗೆಯಲ್ಲಿ ಏ.15ರಿಂದ ಮದ್ಯ ಮಾರಾಟಕ್ಕೆ ಚಿಂತನೆ!

April 13, 2020

ಮೈಸೂರು, ಏ.12(ಎಸ್‍ಬಿಡಿ)- ಏಪ್ರಿಲ್ 30ರವರೆಗೂ ಲಾಕ್‍ಡೌನ್ ವಿಸ್ತರಿಸಲು ನಿರ್ಧರಿಸಿ, ಕೆಲ ನಿರ್ಬಂಧಗಳಡಿ ಏ.15ರಿಂದ ಮದ್ಯ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ ಎನ್ನು ವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಆರ್ಥಿಕವಾಗಿ ಸದೃಢವಾಗಿರುವ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ರಾಷ್ಟ್ರಗಳೇ ಕೊರೊನಾ ನಿಯಂತ್ರಿಸು ವಲ್ಲಿ ಸೋತಿವೆ. ಅಲ್ಲಿನ ಸರ್ಕಾರಗಳು ದಿಕ್ಕುತೋಚದ ಸ್ಥಿತಿಯಲ್ಲಿ ಕೈಕಟ್ಟಿ ಕುಳಿತಿವೆ. ಭಾರತದಲ್ಲಿ ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತು, ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಕೊರೊನಾ ಸೋಂಕಿನ ವೇಗ ತಗ್ಗಿದೆ. ಮುಖ್ಯವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದರಿಂದ ಜನರ ಜೀವ ರಕ್ಷಣೆ ಸಾಧ್ಯವಾಗಿದೆ. ಆದರೂ ಸೋಂಕು ನಿಯಂತ್ರಣ ಆಗದಿರುವ ಕಾರಣ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯ. ಇದಕ್ಕೆ ಜನರೂ ಸಿದ್ಧರಾಗಿದ್ದಾರೆ.

ಹೀಗಿರುವಾಗ ರಾಜ್ಯದಲ್ಲಿ ಏ.15ರಿಂದ ಎಂಎಸ್‍ಐಎಲ್ ಕೇಂದ್ರಗಳ ಮೂಲಕ ಮದ್ಯ ಮಾರಾಟಕ್ಕೆ ಚಿಂತನೆ ನಡೆಸಿರು ವುದು ಆತಂಕಕಾರಿ ನಡೆಯಾಗಿದೆ. ಸಂಪೂರ್ಣ ಲಾಕ್‍ಡೌನ್ ಇರುವಾಗಲೇ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ. ನಿಗದಿತ ದರಕ್ಕಿಂತ ಮೂರು-ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಅಲ್ಲಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಒಂದಷ್ಟು ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಪೆÇಲೀಸರ ಕಣ್ತಪ್ಪಿಸಿ, ಅಕ್ರಮ ಮಾರಾಟ ಮುಂದುವರೆದಿದೆ. ಇನ್ನು ಅಧಿಕೃತವಾಗಿ ಮಾರಾಟಕ್ಕೆ ಅವ ಕಾಶ ನೀಡಿದರೆ ಅಕ್ರಮಕ್ಕೆ ಕಡಿವಾಣ ಹಾಕುವುದು ಅಸಾಧ್ಯ.

ಏನೇ ನಿರ್ಬಂಧ ವಿಧಿಸಿ, ಮಾರಾಟಕ್ಕೆ ಅವಕಾಶ ನೀಡಿ ದರೂ ಅದರಿಂದ ಅಪಾಯವೇ. ಸಂದರ್ಭವನ್ನು ದುರ್ಬಳಕೆ  ಮಾಡಿಕೊಳ್ಳುವವರು ಹೆಚ್ಚಿದ್ದಾರೆ. ಎಂಎಸ್‍ಐಎಲ್‍ನಿಂದ ಹೇಗೋ ಹೆಚ್ಚು ಪ್ರಮಾಣದ ಮದ್ಯ ಖರೀದಿಸಿ, ನಂತರ ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಾರೆ. ಅಲ್ಲದೆ ಎಂಎಸ್‍ಐಎಲ್ ಬಳಿ ಮದ್ಯಪ್ರಿಯರ ದಂಡೇ ಜಮಾಯಿಸು ತ್ತದೆ. ಸಾಮಾಜಿಕ ಅಂತರದ ಮಾತಿರಲಿ ಅವರ ನೂಕು ನುಗ್ಗಲು  ನಿಯಂತ್ರಿಸುವುದೇ ಅಸಾಧ್ಯವಾಗುತ್ತದೆ. ಕೊಳ್ಳಲು ಗಲಾಟೆ, ಗದ್ದಲ, ಹೊಡೆದಾಟ ಸಾಮಾನ್ಯವಾಗಿಬಿಡುತ್ತದೆ. ಮದ್ಯ ಮಾರಾಟಕ್ಕೂ ಪೆÇಲೀಸರ ಬಳಸಿಕೊಳ್ಳುವ ದುಸ್ಥಿತಿ ಎದುರಾಗುತ್ತದೆ. ಮದ್ಯ ಸೇವಿಸಿದ ಬಹುತೇಕರಿಗೆ ತಮ್ಮ ಮೇಲೆ ತಮಗೇ ಹಿಡಿತ ಇರುವುದಿಲ್ಲ. ಇನ್ನು ಸಮಾಜದ ಬಗ್ಗೆ ಯಾವ ಕಾಳಜಿ ತೋರಲು ಸಾಧ್ಯ. ಲಾಕ್‍ಡೌನ್‍ನಿಂದ ಆರ್ಥಿಕ ವ್ಯವಸ್ಥೆ ಅಯೋಮಯವಾಗಿದೆ. ಸರ್ಕಾರದ ಆದಾಯದ ಮೂಲಗಳೆಲ್ಲಾ ತಾತ್ಕಾಲಿಕವಾಗಿ ಮುಚ್ಚಿವೆ. ಹಾಗಾಗಿ ಹೆಚ್ಚು ಆದಾಯ ಬರುವ ಮದ್ಯ ಮಾರಾಟಕ್ಕೆ ಮುಂದಾಗಿರಬಹುದು. ಆದರೆ ಇದು ಸರಿಯಾದ ಕ್ರಮವಲ್ಲ. ಇಪ್ಪತ್ತು ದಿನಗಳಿಂದ ಅದೆಷ್ಟೋ ಕುಟುಂಬಗಳು ನೆಮ್ಮದಿಯಾಗಿವೆ. ದುಡಿಮೆ, ಹಣ ಇಲ್ಲದಿದ್ದರೂ ಗೃಹಿಣಿಯರು ಗಂಡನ ಕಿರುಕುಳ, ಉಪಟಳ ದಿಂದ ಮುಕ್ತವಾಗಿದ್ದಾರೆ. ಕುಡಿದು ಬಂದು ಅದೇನು ರಾದ್ಧಾಂತ ಮಾಡುತ್ತಾರೋ ಎಂಬ ದುಗುಡದಿಂದ ದೂರ ವಿದ್ದಾರೆ. ಈಗ ಏಕಾಏಕಿ ಮದ್ಯ ಮಾರಾಟ ಆರಂಭಿಸಿದರೆ ಅದೆಷ್ಟೋ ಕುಟುಂಬಗಳ ಸ್ಥಿತಿ

ಶೋಚನೀಯವಾಗುತ್ತದೆ. ಮನೆಯಲ್ಲಿರುವ ಪುಡಿಗಾಸು ಸಹ ಮದ್ಯದಂಗಡಿಯ ಗಲ್ಲ ಸೇರುತ್ತದೆ. ಮತ್ತೆ ಕೌಟುಂಬಿಕ ಕಲಹ ಶುರುವಾಗುತ್ತವೆ. ಸರ್ಕಾರದಿಂದ ನೀಡಿರುವ ಪಡಿತರ, ದಾನಿಗಳು ನೀಡಿದ ಅಗತ್ಯ ವಸ್ತುಗಳನ್ನು ಮಾರಿ, ಕುಡಿಯುವ ಪ್ರಸಂಗವೂ ನಡೆಯುತ್ತವೆ. ಈಗಲೇ ಸಂಕಷ್ಟದಲ್ಲಿರುವ ಕುಟುಂಬಗಳು ಬೀದಿಗೆ ಬೀಳುತ್ತವೆ. ಮದ್ಯವ್ಯಸನಿಗಳಿಗೆ ಕೊರೊನಾ ಬಗ್ಗೆ ಭಯವೇ ಇಲ್ಲದಂತಾಗಿ ಮನಸ್ಸೋ ಇಚ್ಛೆ ವರ್ತಿಸಬಹುದು. ಕೊರೊನಾ ವಿರುದ್ಧದ ಹೋರಾಟದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೆÇಲೀಸರಿಗೆ ಕುಡುಕರ ನಿಯಂತ್ರಣ ತಲೆನೋವಾಗುತ್ತದೆ. ಒಟ್ಟಾರೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ, ಲಾಕ್‍ಡೌನ್ ಮುಂದುವರೆಸುವುದು ನಿಷ್ಪ್ರಯೋಜಕ. ಬಡ ಕುಟುಂಬಗಳ ಬೀದಿಗೆಳೆದು ಸಂಪನ್ಮೂಲ ಸಂಗ್ರಹಿಸುವ ಚಿಂತನೆಗೆ ಸರ್ಕಾರ ಮುಂದಾಗಬಾರದು. ಈಗಾಗಲೇ ಮದ್ಯ ಮಾರಾಟಕ್ಕೆ ಅವಕಾಶ ಕೋರಿ ಮನೋ ವೈದ್ಯರೊಬ್ಬರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿ, ವೈದ್ಯರು ಮದ್ಯದ ಬಗ್ಗೆ ಆಸಕ್ತಿ ತೋರಿದ್ದಕ್ಕೆ ವಿಷಾದ ವ್ಯಕ್ತಪಡಿಸಿದೆ. ಈವರೆಗೆ ಮಾದರಿ ಕ್ರಮಗಳ ಮೂಲಕ ದೇಶದ ಗಮನ ಸೆಳೆದಿರುವ ರಾಜ್ಯ ಸರ್ಕಾರ, ಮದ್ಯ ಮಾರಾಟ ವಿಚಾರದಲ್ಲಿ ಎಡವಿ, ಅಪಹಾಸ್ಯಕ್ಕೆ ಈಡಾಗಬಾರದು. ಅಬಕಾರಿ ಇಲಾಖೆ ಪ್ರಸ್ತಾವನೆಯನ್ನು ಪರಿಗಣಿಸಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

 

 

Translate »