ಜಗತ್ತಿನ ಮಹಾನ್ ಕವಿಗಳಿಗಿಂತ ಒಂದು ಗುಲಗಂಜಿಯಷ್ಟು ಹೆಚ್ಚು ತೂಗುವ ಕುವೆಂಪು
ಮೈಸೂರು

ಜಗತ್ತಿನ ಮಹಾನ್ ಕವಿಗಳಿಗಿಂತ ಒಂದು ಗುಲಗಂಜಿಯಷ್ಟು ಹೆಚ್ಚು ತೂಗುವ ಕುವೆಂಪು

December 30, 2020

ಮೈಸೂರು, ಡಿ.29(ಆರ್‍ಕೆಬಿ)- ಕುವೆಂಪು ಕನ್ನಡದ ಟಾಲ್‍ಸ್ಟಾಯ್, ರಸೆಲ್, ಷೇಕ್ಸ್‍ಪಿಯರ್, ವಡ್ರ್ಸ್ ವರ್ತ್, ಕುವೆಂಪು ಅವರ ಕಾವ್ಯ, ಕೃತಿಗಳನ್ನು ವ್ಯಾಖ್ಯಾನಿ ಸಿದರೆ ಈ ಮಹಾನ್ ಕವಿಗಳಿಗಿಂತ ಕುವೆಂಪು ಒಂದು ಗುಲಗಂಜಿಯಾದರೂ ಹೆಚ್ಚು ತೂಗುತ್ತಾರೆ ಎಂದು ವಿದ್ವಾಂಸ ಪೆÇ್ರ.ಎನ್.ಬೋರಲಿಂಗಯ್ಯ ತಿಳಿಸಿದರು.

ಮೈಸೂರು ವಿವಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಂಗಳವಾರ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇಂದ್ರೆ, ಮಾಸ್ತಿ, ಡಿವಿಜಿ, ಕಾರಂ ತರು, ತೀನಂಶ್ರೀ ಸೇರಿದಂತೆ ಮಹಾನ್ ಚೇತನಗಳಿಗಿಂತ ಕುವೆಂಪು ಭಿನ್ನ. ಏಕೆಂದರೆ ಕುವೆಂಪು ಅವರು ಪರಮ ಹಂಸರ ಸಂಸ್ಕೃತಿ ಪಾಲಿಸುತ್ತಿದ್ದರು. ಅವರ ಸಪ್ತಸೂತ್ರದಲ್ಲಿ ‘ಮನುಷ್ಯ ಜಾತಿ ತಾನೊಂದು ವಲಂ’ ಎನ್ನುವ ಪಂಪನ ಸೂತ್ರವನ್ನು ನಿರೂಪಕವಾಗಿ ಸ್ವೀಕರಿಸಿ ಎಂದು ಹೇಳಿದ ರಲ್ಲದೆ, ವರ್ಣಾಶ್ರಮ, ವರ್ಣವ್ಯವಸ್ಥೆಯನ್ನು ತಿದ್ದುವುದು ಅಲ್ಲ, ಅದನ್ನು ತಿರಸ್ಕರಿಸಬೇಕು ಎಂದಿದ್ದವರು ಎಂದರು.
ಕುವೆಂಪು ಅವರ ಆದರ್ಶ ಜೀವನ ನಡೆಸಿದರೆ ಕೊರೊನಾ ದಂತಹ ವೈರಸ್‍ಗಳು ಬರುವುದಿಲ್ಲ. ಅವರ ದಾಂಪತ್ಯ ಜೀವನ ವನ್ನು ಪರಮಹಂಸ-ಶಾರದಾ ಮಾತೆ ದಂಪತಿಗಳಿಗೆ ಹೋಲಿಕೆ ಮಾಡಬಹುದು. ಕುವೆಂಪು ರಾಮಾಯಣ ದರ್ಶನಂನ ರಾಮ-ಸೀತೆಗೆ ಹೋಲಿಕೆ ಮಾಡಬಹುದು ಎಂದರು.

ಒಕ್ಕಲಿಗರ ಮಠದಲ್ಲಿ ಕುವೆಂಪು ಭಾವಚಿತ್ರವಿಲ್ಲ: ವೀರ ಶೈವ-ಲಿಂಗಾಯತರು ಬಸವಣ್ಣನವರ ವಚನ ಸಾಹಿತ್ಯ ವನ್ನು, ಬ್ರಾಹ್ಮಣರು ವೇದ ಉಪನಿಷತ್ ಅನ್ನು ಪ್ರಚುರ ಪಡಿಸಿ, ಎಲ್ಲರಿಗೂ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅದೇ ರೀತಿ ಒಕ್ಕಲಿಗರು ಕುವೆಂಪು ಅವರ ವಿಚಾರಧಾರೆ ಮತ್ತು ವೈಚಾರಿಕತೆಯನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡಬೇಕಿದೆ. ಆದರೆ ಒಕ್ಕಲಿಗರು ಕಟ್ಟಿಕೊಂಡಿರುವ ಮಠ ದಲ್ಲಿ ಕುವೆಂಪು ಅವರ ಒಂದೂ ಭಾವಚಿತ್ರವಿಲ್ಲ. ರಾಜ ಕಾರಣಿಗಳು ಸರಿಯಿಲ್ಲ. ಕುವೆಂಪು ಅವರ ಹೆಸರನ್ನು ಸರಿ ಯಾಗಿ ಉಚ್ಛರಿಸಲು ಬಾರದ ಮುಖ್ಯಮಂತ್ರಿಯೊಬ್ಬರು ಕುವೆಂಪು ಅವರ ಜನ್ಮದಿನವನ್ನು ವರ್ಷಪೂರ್ತಿ ಆಚರಿಸಿ ಎಂದು ಆದೇಶ ಹೊರಡಿಸಿ, ಕುವೆಂಪು ಜಪ ಮಾಡಿ ಎಂದರು. ಕುವೆಂಪು ಜಪ ಬೇಕಿಲ್ಲ. ಕುವೆಂಪು ಅವರನ್ನು ಅನುಸರಿಸಿ, ಅವರಂತೆ ನಡೆದುಕೊಂಡು ಹೋಗಬೇಕಷ್ಟೆ ಎಂದರು. ವರ್ಣ ವ್ಯವಸ್ಥೆ ವಿರುದ್ಧ, ಜಾತಿ ನಿರ್ಮೂ ಲನೆಗಾಗಿ ಅಂಬೇಡ್ಕರ್‍ರಂತೆ ಕುವೆಂಪು ಸಹ ದುಡಿದರು. ಆದರೆ ಅಂಬೇಡ್ಕರ್ ವೇದ ಉಪನಿಷತ್‍ಗಳಲ್ಲಿ ಏನು ಇಲ್ಲ. ಅವನ್ನು ಸುಟ್ಟುಹಾಕಿ ಎನ್ನುತ್ತಾರೆ. ಇದಕ್ಕೆ ಭಿನ್ನವಾಗಿ ನಿಲ್ಲುವ ಕುವೆಂಪು, ವೇದ ಉಪನಿಷತ್‍ಗೆ ಮೆತ್ತಿಕೊಂಡಿರುವ ಎಣ್ಣೆ ಜಿಡ್ಡನ್ನು ಶುಚಿಗೊಳಿಸಿದರೆ ಅವು ಚಿನ್ನ ಎನ್ನುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಎಂ. ಜಿ.ಮಂಜುನಾಥ್, ನಿವೃತ್ತ ನಿರ್ದೇಶಕರಾದ ಪ್ರೊ.ಬಿ.ಪಿ. ಸಿದ್ದಾಶ್ರಮ, ಪ್ರೊ.ನಂಜಯ್ಯ ಹೊಂಗನೂರು ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕುಲಪತಿಗಳು ಮಾನಸಗಂಗೋತ್ರಿಯ ಮುಖ್ಯ ದ್ವಾರದಲ್ಲಿರುವ ಕುವೆಂಪು ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

 

 

 

Translate »