ಜಗತ್ತಿಗೆ ಕನ್ನಡದ ಹಿರಿಮೆ ಸಾರಿದ ಮಹಾನ್ ಚೇತನ 
ಮೈಸೂರು

ಜಗತ್ತಿಗೆ ಕನ್ನಡದ ಹಿರಿಮೆ ಸಾರಿದ ಮಹಾನ್ ಚೇತನ 

December 30, 2020

ಕನ್ನಡದ ಹಿರಿಮೆಯನ್ನು ಇಡೀ ಜಗತ್ತಿಗೆ ಸಾರಿದ ಮಹಾನ್ ಚೇತನ ಕುವೆಂಪು. ತಮ್ಮ ವೈಚಾರಿಕತೆ ಮೂಲಕ ಎಲ್ಲಾ ಕಾಲಕ್ಕೂ ಸಲ್ಲುವವರು, ವೈಚಾರಿಕ ಚಿಂತನೆಗಳಿಂದಲೇ ಸಾಹಿತ್ಯ ಲೋಕದಲ್ಲಿ ಸದಾ ಜನರ ಮನದಲ್ಲಿ ಸದಾ ಉಳಿದಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾನವನದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಮಾಜವನ್ನು ಸರಿದಾರಿಯಲ್ಲಿ ಕೊಂಡೊ ಯ್ಯುವ ನಿಟ್ಟಿನಲ್ಲಿ ಅವರು ನೀಡಿರುವ ಚಿಂತನೆಗಳನ್ನು ಸರಿಯಾಗಿ ಅನುಷ್ಟಾನಗೊಳಿಸಿದರೆ ದೇಶದ ಬಹುಪಾಲು ಸಮಸ್ಯೆಗಳು ಇತ್ಯರ್ಥವಾಗುತ್ತವೆ. ಹುಟ್ಟುವ ಮಗು ಬೆಳೆಯುವ ಹಂತದಲ್ಲಿ ಉತ್ತಮ ಶಿಕ್ಷಣ ಪಡೆದು ವಿಶ್ವಮಾನವನಾಗಬೇಕು ಎಂದು ಸಂದೇಶ ನೀಡಿದ್ದಾರೆ. ಬದುಕಿನುದ್ದಕ್ಕೂ ವಿಶ್ವಮಾನವ ತತ್ವವನ್ನು ಅಳವಡಿಸಿಕೊಂಡರೆ ಚೈತನ್ಯಯುತವಾದ ಬದುಕನ್ನು ಬಾಳಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.

ಈ ಸಂದÀರ್ಭದಲ್ಲಿ ನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಗಡೆ, ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಸಾಹಿತ್ಯ ಕಲಾಕೂಟದ ಅಧ್ಯಕ್ಷ ಚಂದ್ರಶೇಖರ್, ಕನ್ನಡ ಚಳುವಳಿಯ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠ್ಠಲ ಮೂರ್ತಿ, ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮಾಜಿ ಸದಸ್ಯರಾದ ಎಂ.ಸುನೀಲ್, ಡೈರಿ ವೆಂಕಟೇಶ್, ವಿಶ್ವ, ನೀಲಕಂಠು ಮತ್ತಿತರರು ಉಪಸ್ಥಿತರಿದ್ದರು.

 

 

Translate »