`ವಿಶ್ವ ಭೂಮಿ ದಿನ’ದ ಅಂಗವಾಗಿ ಆನ್‍ಲೈನ್ ಸ್ಪರ್ಧೆ ವಿದ್ಯಾರ್ಥಿಗಳಿಗೆ ಪೋಸ್ಟರ್, ಚಿತ್ರಕಲೆ, ಪದ್ಯ ರಚನೆ, ಕಿರು ವಿಡಿಯೋ ನಿರ್ಮಾಣ ಸ್ಪರ್ಧೆ
ಮೈಸೂರು

`ವಿಶ್ವ ಭೂಮಿ ದಿನ’ದ ಅಂಗವಾಗಿ ಆನ್‍ಲೈನ್ ಸ್ಪರ್ಧೆ ವಿದ್ಯಾರ್ಥಿಗಳಿಗೆ ಪೋಸ್ಟರ್, ಚಿತ್ರಕಲೆ, ಪದ್ಯ ರಚನೆ, ಕಿರು ವಿಡಿಯೋ ನಿರ್ಮಾಣ ಸ್ಪರ್ಧೆ

April 20, 2020

ಮೈಸೂರು,ಏ.19(ಪಿಎಂ)-ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ `ವಿಶ್ವ ಭೂಮಿ ದಿನ-2020’ರ ಅಂಗವಾಗಿ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪೋಸ್ಟರ್ (ಭಿತ್ತಿಪತ್ರ), ಚಿತ್ರಕಲೆ, ಪದ್ಯ ಹಾಗೂ ಕಿರು ವಿಡಿಯೋ ಸ್ಪರ್ಧೆ ಆಯೋಜಿಸಲಾಗಿದೆ.

6ರಿಂದ 8ನೇ ತರಗತಿ ವಿಭಾಗದಲ್ಲಿ ಪೋಸ್ಟರ್ ಹಾಗೂ ಚಿತ್ರಕಲೆ ಸ್ಪರ್ಧೆ ಹಾಗೂ 9ರಿಂದ 12ನೇ ತರಗತಿ ವಿಭಾಗದಲ್ಲಿ ಪದ್ಯ ರಚನೆ ಹಾಗೂ 2 ನಿಮಿಷಗಳ ಕಿರು ವಿಡಿಯೋ ನಿರ್ಮಾಣ ಸ್ಪರ್ಧೆ ನಡೆಯಲಿದೆ. ಎಲ್ಲಾ ವಿಭಾಗಕ್ಕೂ `ಹವಾಮಾನ ಪ್ರಕ್ರಿಯೆ’ ಕುರಿತಂತೆ ಸ್ಪರ್ಧೆ ನಡೆಯಲಿದೆ.

ಏ.22ರೊಳಗೆ ಆನ್‍ಲೈನ್‍ನಲ್ಲಿ ಪೋಸ್ಟರ್, ಚಿತ್ರಕಲೆ, ಪದ್ಯ ಹಾಗೂ ಕಿರು ವಿಡಿಯೋ ವನ್ನು ರಾಷ್ಟ್ರೀಯ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ earthday2020 [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಜೊತೆಗೆ ವಿದ್ಯಾರ್ಥಿ ಹೆಸರು, ದೂರವಾಣಿ ಸಂಖ್ಯೆ, ತರಗತಿ ಹಾಗೂ ಶಾಲೆ ವಿಳಾಸ ನಮೂದಿ ಸಬೇಕು. ಆಯ್ಕೆಯಾದ ಪೋಸ್ಟರ್, ಚಿತ್ರಕಲೆ, ಪದ್ಯ ಹಾಗೂ ಕಿರು ವಿಡಿಯೋಗಳಿಗೆ ಬಹುಮಾನ ನೀಡಲಾಗುವುದು. ಜತೆಗೆ ಅವನ್ನು ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪ್ರದರ್ಶಿಸಲಾಗುವುದು ಎಂದು ಮೈಸೂರಿನ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ಮುಖ್ಯಸ್ಥ ಜಿ.ಎನ್.ಇಂದ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Translate »