ಪದವಿ ಹಂತದಲ್ಲಿ ಆನ್‍ಲೈನ್ ಶಿಕ್ಷಣ ಮೋದಿ ಪ್ರಸ್ತಾವಕ್ಕೆ ಸಿದ್ದರಾಮಯ್ಯ ವಿರೋಧ
ಮೈಸೂರು

ಪದವಿ ಹಂತದಲ್ಲಿ ಆನ್‍ಲೈನ್ ಶಿಕ್ಷಣ ಮೋದಿ ಪ್ರಸ್ತಾವಕ್ಕೆ ಸಿದ್ದರಾಮಯ್ಯ ವಿರೋಧ

June 1, 2020

ಬೆಂಗಳೂರು, ಮೇ 31- ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್‍ಲೈನ್ ಮೂಲಕ ನೀಡುವ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಸಾಮಾಜಿಕ ವಾಸ್ತವದ ಅರಿ ವಿಲ್ಲದವರ ಕುರುಡುತನದ ಆಲೋಚನೆ ಇದಾಗಿದೆ. ಇಂತಹ ಕ್ರಮದಿಂದ ಸಮಾಜದ ಅತಿ ದೊಡ್ಡ ವರ್ಗ ಶಿಕ್ಷಣದಿಂದ ವಂಚಿತವಾಗಲಿದೆ ಎಂದು ಟೀಕಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್, ಲ್ಯಾಪ್‍ಟಾಪ್, ಸ್ಮಾರ್ಟ್ ಫೆÇೀನ್‍ಗಳು ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದ್ದಾರೆ.

Translate »