ಕಣ್ಣನ್ ಲ್ಯಾಬ್ ಸಂಸ್ಥಾಪಕ ಡಾ. ಎನ್.ಕಣ್ಣನ್ ಇನ್ನಿಲ್ಲ
ಮೈಸೂರು

ಕಣ್ಣನ್ ಲ್ಯಾಬ್ ಸಂಸ್ಥಾಪಕ ಡಾ. ಎನ್.ಕಣ್ಣನ್ ಇನ್ನಿಲ್ಲ

June 1, 2020

ಮೈಸೂರು, ಮೇ 31-ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜಿಲ್ಲೆಯ ಪ್ರಪ್ರಥಮ ವೈದ್ಯಕೀಯ ಪ್ರಯೋಗಾಲಯ `ಕಣ್ಣನ್ ಡಯೋ ಗ್ನಸ್ಟಿಕ್ ಸೆಂಟರ್’ ಸಂಸ್ಥಾಪಕ ಡಾ. ಎನ್. ಕಣ್ಣನ್ (84) ಅವರು ಭಾನುವಾರ ಸಂಜೆ ನಿಧನರಾದರು.

ಕೆಲ ದಿನಗಳಿಂದ ಅನಾರೋಗ್ಯಕ್ಕೊಳ ಗಾಗಿದ್ದ ಇವರು ಭಾನುವಾರ ಸಂಜೆ ಮೈಸೂ ರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಣ್ಣನ್ ಲ್ಯಾಬ್ ಎಂಬ ಹೆಸರಿನಲ್ಲಿ ಜಿಲ್ಲೆಯ ಮೊಟ್ಟ ಮೊದಲ ಪೆಥಾಲಜಿ ಲ್ಯಾಬ್ ಎಂಬ ಹಿರಿಮೆಗೆ ಪಾತ್ರವಾಗಿದ್ದ ಈ ಲ್ಯಾಬ್ ಅನ್ನು 1968ರ ಮೇ 5ರಂದು ಡಾ. ಕಣ್ಣನ್ ಅವರು ಧನ್ವಂತರಿ ರಸ್ತೆಯಲ್ಲಿರುವ ಗಾಯಿತ್ರಿ ಭವನ್ ಕಟ್ಟಡದಲ್ಲಿ ಸ್ಥಾಪಿಸಿ ದ್ದರು. 10ಘಿ20 ವಿಸ್ತೀರ್ಣದ ಕೊಠಡಿ ಯಲ್ಲಿ ಆರಂಭಗೊಂಡ ಕಣ್ಣನ್ ಪೆಥಾ ಲಜಿ ಲ್ಯಾಬ್, ಕಳೆದ 22 ವರ್ಷಗಳ ಹಿಂದೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ವಿಶಾಲವಾದ ಜಾಗಕ್ಕೆ ಸ್ಥಳಾಂತರ ಗೊಂಡಿದ್ದು ಎರಡು ವರ್ಷಗಳ ಹಿಂದೆ ಯಷ್ಟೇ (2018ರ ಮೇ 5) ಸ್ವರ್ಣ ಮಹೋತ್ಸವ ಆಚರಿಸಿಕೊಂಡಿತ್ತು.

ಕಳೆದ 57 ವರ್ಷಗಳಿಂದ ಮೈಕ್ರೋ ಸ್ಕೋಪ್ ಲೆನ್ಸ್‍ನಲ್ಲಿ ಕಣ್ಣು ನೆಟ್ಟು ರೋಗಿ ಗಳ ರಕ್ತ, ಕಫ ಮುಂತಾದವುಗಳನ್ನು ಪರೀಕ್ಷಿಸಿ ನಿಖರ ವೈದ್ಯಕೀಯ ವರದಿ ನೀಡುವ ಮೂಲಕ ಡಾ. ಕಣ್ಣನ್ ಅವರು ವೈದ್ಯಕೀಯ ಲೋಕಕ್ಕೆ ನೆರವಾಗುತ್ತಿ ದ್ದರು. ವೃತ್ತಿಯಲ್ಲಿ ಬದ್ಧತೆ ಹೊಂದಿದ್ದ ಇವರು, ರೋಗಿಗಳ ಸೇವೆಯನ್ನು ತಮ್ಮ ಕಾಯಕವನ್ನಾಗಿಸಿಕೊಂಡಿದ್ದರು. ಇವರ ಈ ಲ್ಯಾಬ್‍ಗೆ ಮೈಸೂರು ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ಇತರೆಡೆಗಳಿಂದಲೂ ರೋಗಿಗಳು ಆಗಮಿಸುತ್ತಿದ್ದುದು ವಿಶೇಷ.

1960ರಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ ಡಾ. ಕಣ್ಣನ್, 1963ರಲ್ಲಿ ಮದ್ರಾಸ್ ಯೂನಿವರ್ಸಿಟಿಯಲ್ಲಿ ಪೆಥಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ವ್ಯಾಸಂಗ ಮಾಡಿದರು. ಮೊದಲಿಗೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕ ಹಾಗೂ ರೆಸಿಡೆಂಟ್ ಪೆಥಾಲಜಿಸ್ಟ್ ಆಗಿ ವೃತ್ತಿ ಬದುಕು ಆರಂಭಿಸಿದ ಅವರು, 7 ವರ್ಷಗಳ ಕಾಲ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ನಂತರ ಕ್ಲಿನಿಕಲ್ ಪೆಥಾಲಜಿ ಲ್ಯಾಬ್ ಆರಂಭಿಸಿದರು.

ಡಾ. ಕಣ್ಣನ್ ಅವರ ತಂದೆ ಜಿ.ನಟರಾಜನ್ ಮೈಸೂರು, ಬೆಂಗಳೂರು ಹಾಗೂ ಬಳ್ಳಾರಿ ಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಡಾ. ಲಕ್ಷ್ಮಣ್ ಅವರ ಪುತ್ರ ಡಾ. ಕೆ.ಲಕ್ಷ್ಮಣ್ ಇವರದೇ ಲ್ಯಾಬ್‍ನಲ್ಲಿ ಪೆಥಾಲಜಿಸ್ಟ್ ಆಗಿದ್ದಾರೆ. ಮತ್ತೋರ್ವ ಪುತ್ರ ಡಾ.ಕೆ.ಪ್ರವೀಣ್‍ಕುಮಾರ್ ಅವರೂ ಕೂಡ ಇದೇ ಲ್ಯಾಬ್‍ನಲ್ಲಿ ರೇಡಿಯೋಲಜಿಸ್ಟ್ ಆಗಿದ್ದಾರೆ. ಡಾ.ಕಣ್ಣನ್ ಅವರು ಪತ್ನಿ ರೊಮಿಲ್ಲಾ ಕಣ್ಣನ್, ಇಬ್ಬರು ಪುತ್ರರು, ಪುತ್ರಿ ಶಂಕರಿ ಜನಾರ್ಧನ್ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಲಕ್ಷ್ಮಣ್ ಅವರ ಪುತ್ರಿ ಶಂಕರಿ ಜನಾರ್ಧನ್ ಚೆನ್ನೈನಲ್ಲಿ ವಾಸವಿದ್ದು, ಅವರು ಆಗಮಿಸಿದ ನಂತರ ಸೋಮವಾರ ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »