ಮೈಸೂರು ಪಾಲಿಕೆಯಲ್ಲಿ ಆನ್‍ಲೈನ್ ತೆರಿಗೆ ಪಾವತಿ ಆರಂಭ
ಮೈಸೂರು

ಮೈಸೂರು ಪಾಲಿಕೆಯಲ್ಲಿ ಆನ್‍ಲೈನ್ ತೆರಿಗೆ ಪಾವತಿ ಆರಂಭ

June 7, 2020

ಮೈಸೂರು, ಜೂ. 6(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಆನ್‍ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಆನ್‍ಲೈನ್ ಪೋರ್ಟಲ್ ನಲ್ಲಿ ನಾಗರಿಕರು ತಾವಿರುವಲ್ಲೇ ಮೊಬೈಲ್ ಮೂಲಕ ಆಸ್ತಿ ತೆರಿಗೆಯನ್ನು ಪಾವತಿಸ ಬಹುದಾಗಿದ್ದು, ಆದರೆ, ಹಿಂದಿನ ವರ್ಷ ಪಾವತಿಸಿರುವ ಆಸ್ತಿ ತೆರಿಗೆ ಚಲನ್ ಜೆರಾಕ್ಸ್ ಪ್ರತಿಯನ್ನು ತಂದು ಆಯಾ ಪಾಲಿಕೆ ವಲಯ ಕಚೇರಿಗಳಿಗೆ ತಲುಪಿಸಿದಲ್ಲಿ ಸಿಬ್ಬಂದಿಗಳು, ತಮ್ಮಲ್ಲಿರುವ ಲೆಡ್ಜರ್ ಪರಿಶೀಲಿಸಿ ಪ್ರತೀ ಆಸ್ತಿಗಳಿಗೆ ಪಿಐಡಿ ಸಂಖ್ಯೆ ಕೊಟ್ಟು ಈ ವರ್ಷ ಎಷ್ಟು ಹಣವನ್ನು ಆಸ್ತಿ ತೆರಿಗೆಯಾಗಿ ಪಾವ ತಿಸಬೇಕೆಂಬುದನ್ನು ನಮೂದಿಸಿ ಆನ್ ಲೈನ್‍ಗೆ ಅಪ್‍ಲೋಡ್ ಮಾಡುತ್ತಾರೆ. ನಂತರ ಆಸ್ತಿ ಮಾಲೀಕರು ವಲಯ ಕಚೇರಿ ಬ್ಯಾಂಕ್ ಕೌಂಟರ್‍ನಲ್ಲಾದರೂ ಖುದ್ದಾಗಿ ಪಾವತಿಸಬಹುದು ಅಥವಾ ಆನ್‍ಲೈನ್ ಮೂಲಕ ಪಾವತಿಸಬಹುದಾಗಿದೆ.

ಕಳೆದ ಸೋಮವಾರದಿಂದ ಈ ಪದ್ಧತಿ ಜಾರಿಗೆ ಬಂದಿದ್ದು, ಅದಕ್ಕೂ ಮೊದಲು ಮೇ1ರಿಂದ ಜೂನ್ 5ರವರೆಗೆ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ 9 ವಲಯ ಕಚೇರಿಗಳಲ್ಲಿ 15,810 ಆಸ್ತಿಗಳ 12,26, 65,332 ರೂ. ತೆರಿಗೆ ಸಂಗ್ರಹವಾಗಿದೆ.

ಜುಲೈ 31ರವರೆಗೆ ಶೇ.5ರ ರಿಯಾಯಿತಿ ನೀಡಿರುವುದರಿಂದ ಜನರು ಆಸ್ತಿ ತೆರಿಗೆ ಪಾವತಿಸಲು ಮುಂದಾಗುತ್ತಿದ್ದು, ರಿಯಾ ಯಿತಿ ಅವಧಿ ಮುಗಿಯುವವರೆಗೆ 60 ಕೋಟಿ ರೂ. ಹಣ ಸಂದಾಯವಾಗಬಹು ದೆಂದು ನಿರೀಕ್ಷಿಸಲಾಗಿದೆ. ಮೈಸೂರು ನಗರದಲ್ಲಿ ಒಟ್ಟು 1,85,000 ಆಸ್ತಿಗಳಿದ್ದು ಅವುಗಳಿಂದ 150 ಕೋಟಿ ರೂ. ತೆರಿಗೆ ನಿರೀಕ್ಷಿಸಲಾಗಿದೆ. ಅಲ್ಲದೆ, ರೆವಿನ್ಯೂ ಬಡಾ ವಣೆಗಳಿಂದ 20 ಕೋಟಿ ರೂ. ಆಸ್ತಿ ತೆರಿಗೆ ಬರಬೇಕಾಗಿದೆ.

Translate »