ಕಾವೇರಿ ಆಸ್ಪತ್ರೆಯಲ್ಲಿ ಶುಗರ್ ಕ್ಲಿನಿಕ್ ಆರಂಭ
ಮೈಸೂರು

ಕಾವೇರಿ ಆಸ್ಪತ್ರೆಯಲ್ಲಿ ಶುಗರ್ ಕ್ಲಿನಿಕ್ ಆರಂಭ

June 26, 2020

ಮೈಸೂರು,ಜೂ.25-ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ಕಾವೇರಿ ಶುಗರ್ ಕ್ಲಿನಿಕ್‍ಗೆ ಚಾಲನೆ ನೀಡಲಾಗಿದೆ. ಮಧುಮೇಹ ರೋಗಶಾಸ್ತ್ರ ಹಿರಿಯ ಸಲಹಾ ತಜ್ಞ ಡಾ.ಎಸ್.ಪಿ.ಆದರ್ಶ್, ಆಸ್ಪತ್ರೆ ಛೇರ್ಮನ್ ಡಾ.ಜಿ.ಆರ್.ಚಂದ್ರಶೇಖರ್, ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರÀ್ರಶೇಖರ್ ಶುಗರ್ ಕ್ಲಿನಿಕ್ ಅನ್ನು ಉದ್ಘಾಟಿಸಿ ದರು. ನಂತರ `ಕಾವೇರಿ ಶುಗರ್’ ಟೆಸ್ಟ್ ಪ್ಯಾಕೇಜ್‍ಗಳ ಬ್ರೋಚರ್‍ಗಳನ್ನು ಬಿಡುಗಡೆ ಮಾಡಲಾಯಿತು. ಈ ಶುಗರ್ ಕ್ಲಿನಿಕ್ ಪ್ರತೀ ಗುರುವಾರ ಮತ್ತು ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

Translate »