ಬೆಂಗಳೂರು, ಜೂ.25- ಬೆಂಗಳೂರಿನಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ವೃಷಭಾವತಿ ನದಿ ಉಕ್ಕಿ ಹರಿದು ಕೆಂಗೇರಿ ಬಳಿ ಮೈಸೂರು-ಬೆಂಗಳೂರು ಹೆದ್ದಾರಿ ಕುಸಿದಿದೆ. ಇದರ ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ರಸ್ತೆ ಕುಸಿದ ಪರಿಣಾಮ ಒಂದು ಬದಿಯ ರಸ್ತೆ ಹೊಳೆಯಾಗಿ ಪರಿವರ್ತನೆ ಗೊಂಡು, ವಾಹನ ಸಂಚಾರ ನಿಷೇಧಿಸಲಾಗಿದೆ. ಒಂದೇ ಬದಿ ರಸ್ತೆಯಲ್ಲಿ ವಾಹನಗಳು ಸಂಚರಿ ಸುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಕಿ.ಮೀಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿ ರುವ ದೃಶ್ಯ ಕಂಡು ಬಂತು. ರಸ್ತೆ ದುರಸ್ತಿ ಯಾಗುವವರೆಗೂ ಒಂದು ಬದಿ ಸಂಚಾರ ನಿಷೇಧ ಮುಂದುವರೆಯುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನದ ನಂತರ ಕೆಂಗೇರಿ, ರಾಜಾಜಿ ನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಹೆಬ್ಬಾಳ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿ ದಿತ್ತು. ಇದರ ಪರಿಣಾಮವಾಗಿ ವೃಷಭಾವತಿ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯಿತು. ಈ ನದಿಯಲ್ಲಿ ಕೊಳಚೆ ನೀರೇ ಹೆಚ್ಚಾಗಿ ಹರಿ ಯುತ್ತಿದ್ದು, ಹಲವು ವರ್ಷಗಳಿಂದ ಹೂಳೆ ತ್ತದೆ ಇದ್ದ ಪರಿಣಾಮ ಇಂದು ಭಾರೀ ಮಳೆ ಸುರಿದಾಗ ಕೆಂಗೇರಿ ಬಳಿ ರಸ್ತೆ ಕುಸಿದು ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿತ್ತು.