ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಆಪರೇಷನ್…! ರೆಸಾರ್ಟ್ ರಾಜಕಾರಣಕ್ಕೆ ಅಮಾಯಕ ಗ್ರಾಪಂ ಸದಸ್ಯ ಬಲಿ
ಮೈಸೂರು

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಆಪರೇಷನ್…! ರೆಸಾರ್ಟ್ ರಾಜಕಾರಣಕ್ಕೆ ಅಮಾಯಕ ಗ್ರಾಪಂ ಸದಸ್ಯ ಬಲಿ

July 27, 2022

ಮೈಸೂರು, ಜು.26- ರೆಸಾರ್ಟ್ ರಾಜಕೀಯ ಭೂತಕ್ಕೆ ಜನ ಪ್ರತಿನಿಧಿಯೊಬ್ಬರು ಜೀವ ಬಲಿಯಾಗಿದ್ದಾರೆ.
ಕೆ.ಆರ್.ನಗರ ತಾಲೂಕು ಚುಂಚನಕಟ್ಟೆ ಹೋಬಳಿ ಜವರೇಗೌಡನಕೊಪ್ಪಲು ನಿವಾಸಿ, ಹಳಿಯೂರು ಗ್ರಾಪಂ ಸದಸ್ಯ ಜೆ.ಎಂ.ಸತೀಶ್(34) ರೆಸಾರ್ಟ್ ರಾಜಕಾರಣಕ್ಕೆ ಬಲಿಯಾಗಿದ್ದಾರೆ. ಕೇವಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಹೊರವಲಯದ ರೆಸಾರ್ಟ್‍ನಲ್ಲಿ ಹಲವು ಸದಸ್ಯರೊಂದಿಗೆ ತಂಗಿದ್ದ ಇವರು, ಚುನಾವಣೆ ಹಿಂದಿನ ದಿನವೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ವಿವರ: ಹಳಿಯೂರು ಗ್ರಾಮ ಪಂಚಾಯ್ತಿ ಒಟ್ಟು 19 ಸದಸ್ಯರನ್ನು ಒಳಗೊಂಡಿದ್ದು, ಅಧ್ಯಕ್ಷರಾಗಿದ್ದ ಹಳಿಯೂರು ಮಹೇಶ್ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಳೆ(ಜು.27) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷಗಾದಿಗೆ ಭಾರೀ ಪೈಪೋಟಿ ಇದ್ದ ಕಾರಣ ಪ್ರಬಲ ಆಕಾಂಕ್ಷಿಯೊಬ್ಬರು ಕಾಂಗ್ರೆಸ್ ಬೆಂಬಲಿತ ಸತೀಶ್ ಸೇರಿದಂತೆ 11 ಮಂದಿ ಸದಸ್ಯರನ್ನು 20 ದಿನಗಳ ಪ್ರವಾಸಕ್ಕೆ ಕರೆದೊಯ್ದಿದ್ದರು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳ ಪ್ರವಾಸದ ಬಳಿಕ ಸೋಮವಾರ ರಾತ್ರಿ ಮೈಸೂರಿನ ಆರ್.ಟಿ.ನಗರದ ಸುಭಿಕ್ಷಾ ಗಾರ್ಡನ್ ರೆಸಾರ್ಟ್‍ನಲ್ಲಿ ತಂಗಿದ್ದರು.

ರಾತ್ರಿ ಎಲ್ಲರೊಂದಿಗೆ ಊಟ ಮಾಡಿದ ಸತೀಶ್ ತಮ್ಮ ಕೊಠಡಿಗೆ ತೆರಳಿ ಮಲಗಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಘಟನೆ ಬೆಳಕಿಗೆ ಬಂದ ತಕ್ಷಣ ಇತರ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಜಯಪುರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ದರು. ಬಳಿಕ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ದೇಹವನ್ನು ವಾರಸುದಾರರಿಗೆ ಒಪ್ಪಿಸಿ ದರು. ಈ ಸಂಬಂಧ ಅನುಮಾನಾಸ್ಪದ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ನನ್ನ ಪತಿಯನ್ನು ಕೊಲೆ ಮಾಡಲಾಗಿದೆ ಎಂದು ಸತೀಶ್ ಪತ್ನಿ ಗಂಭೀರ ಆರೋಪ ಮಾಡಿರುವುದಾಗಿ ಖಾಸಗಿ ಚಾನೆಲ್‍ನಲ್ಲಿ ವರದಿಯಾಗಿದೆ. ಅಧ್ಯಕ್ಷಗಾದಿ ಆಕಾಂಕ್ಷಿಯೊಬ್ಬರು 11 ಮಂದಿ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿದ್ದರು ಎಂದು ಮೂಲಗಳು ತಿಳಿಸಿವೆ. ರೆಸಾರ್ಟ್‍ನಲ್ಲಿ ಎಲ್ಲರೂ ಪ್ರತ್ಯೇಕ ಕೊಠಡಿಗಳಲ್ಲಿದ್ದ ಕಾರಣ ಸತೀಶ್ ಸಾವು ನಿಗೂಢವಾಗಿ ಉಳಿದಿದೆ. ಮೃತದೇಹವಿದ್ದ ಸ್ಥಿತಿಯನ್ನು ನೋಡಿದರೆ ಸತೀಶ್‍ಗೆ ಹೃದಯಾಘಾತವಾಗಿ ನೋವಿನಿಂದ ಒದ್ದಾಡಿ ಕೊನೆಯುಸಿರೆಳೆದಿದ್ದಾರೆ ಎಂಬುದು ಒಂದು ಮೂಲ ದಿಂದ ವ್ಯಕ್ತವಾದ ಅಭಿಪ್ರಾಯ. ಆದರೂ ಸತೀಶ್ ಸಾವು, ಆಮಿಷಗಳಿಗೆ ಒಳಗಾಗುವ ಜನಪ್ರತಿನಿಧಿಗಳಲ್ಲಿ ಆತಂಕ ಹುಟ್ಟಿಸಿದೆ.

ತಲೆ ತಗ್ಗಿಸುವ ಸಂಗತಿ: ಸರ್ಕಾರ ಉಳಿಸುವುದಕ್ಕೋ ಅಥವಾ ಉರುಳಿಸುವುದಕ್ಕೋ ರೆಸಾರ್ಟ್ ರಾಜಕಾರಣ ಗ್ರಾಮ ಪಂಚಾಯ್ತಿ ವರೆಗೂ ವ್ಯಾಪಿಸಿರುವುದು ಅತ್ಯಂತ ಆತಂಕಕಾರಿ ಸಂಗತಿ. ಗ್ರಾಪಂ ಅಧ್ಯಕ್ಷ ಸ್ಥಾನಕ್ಕಾಗಿ ಹತ್ತಾರು ಸದಸ್ಯರನ್ನು ಸುದೀರ್ಘ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ ಎನ್ನುವ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಣಿಸಬೇಕು. ಚುನಾವಣೆಯಲ್ಲಿ ಗೆದ್ದು ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳುವುದಕ್ಕೆ ಹೀಗೆ ಅಮಾಯಕರಿಗೆ ಆಮಿಷ ತೋರಿ ಅವರನ್ನೇ ಬಲಿಪಶು ಮಾಡುವುದು ಅತ್ಯಂತ ಹೇಯ. ಕೆಟ್ಟ ರೆಸಾರ್ಟ್ ರಾಜಕಾರಣದಿಂದ ಒಬ್ಬ ಅಮಾಯಕ ಸದಸ್ಯ ಪ್ರಾಣ ಕಳೆದುಕೊಂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆತಗ್ಗಿಸುವಂತಾಗಿದೆ. 20 ದಿನಗಳ ಪ್ರವಾಸಕ್ಕೆ ಕರೆದೊಯ್ದಿರು ವುದೇ ಅತ್ಯಂತ ಅಪಾಯಕಾರಿ. ಸಹಜ ಜೀವನ ಪದ್ಧತಿಗೆ ಭಿನ್ನವಾದ ವ್ಯವಸ್ಥೆಗೆ ಎಲ್ಲರೂ ಒಗ್ಗುವುದು ಕಷ್ಟ. ವಾತಾವರಣ ಬದಲಾವಣೆಯಿಂದ ಆರೋಗ್ಯ ಹದಗೆಡುವುದು ಸಹಜ. ಆಗ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಲಭ್ಯವಾಗದಿದ್ದರೆ ಸಮಸ್ಯೆ ಬಿಗಡಾಯಿಸಬಹುದು. ಸತೀಶ್ ಅವರ ಹತ್ಯೆಯಾಗಿದೆಯೋ? ಅಥವಾ ಅನಾರೋಗ್ಯ, ಆಘಾತದಿಂದ ಸಾವನ್ನಪ್ಪಿದ್ದಾರೋ? ಪೊಲೀಸರ ತನಿಖೆಯಲ್ಲಿ ತಿಳಿಯಬೇಕಿದೆ. ಆದರೆ ಕೇವಲ ಅಧಿಕಾರಕ್ಕಾಗಿ ಚುನಾಯಿತ ಸದಸ್ಯರ ಜೀವ ಪಣಕ್ಕಿಟ್ಟು ದಾಳ ಬೀಸುವ ಕೆಟ್ಟ ಚಾಳಿಗೆ ಇತಿಶ್ರೀ

Translate »