ಎದುರಾಳಿಯ ಬಲವಾದ ಪಂಚ್: ಮೈಸೂರಿನ  ಕಿಕ್ ಬಾಕ್ಸರ್ ಕುಸಿದು ಬಿದ್ದು ಸಾವು
ಮೈಸೂರು

ಎದುರಾಳಿಯ ಬಲವಾದ ಪಂಚ್: ಮೈಸೂರಿನ ಕಿಕ್ ಬಾಕ್ಸರ್ ಕುಸಿದು ಬಿದ್ದು ಸಾವು

July 15, 2022

ಮೈಸೂರು, ಜು.14(ಆರ್‍ಕೆ)-ಎದು ರಾಳಿಯ ಬಲವಾದ ಪಂಚ್‍ನಿಂದ ಕುಸಿದು ಬಿದ್ದು ಮೈಸೂರಿನ ಕಿಕ್ ಬಾಕ್ಸರ್ ಸಾವನ್ನ ಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೈಸೂರಿನ ಸುಣ್ಣದಕೇರಿಯ ಹುಲ್ಲಿನ ಬೀದಿ ನಿವಾಸಿ ಕಿಕ್ ಬಾಕ್ಸಿಂಗ್ ತರಬೇತು ದಾರ ಸುರೇಶ್ ಅವರ ಮಗ ನಿಖಿಲ್ (24) ಸಾವನ್ನಪ್ಪಿದ ಯುವ ಕಿಕ್ ಬಾಕ್ಸರ್. ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಶನಿವಾರ ಸಂಜೆ ಮೈಸೂರಿನಿಂದ ತೆರಳಿದ್ದ ನಿಖಿಲ್, ಸ್ಪರ್ಧೆ ಅಂಕಣದಲ್ಲಿ ಎದುರಾಳಿಯು ಬಲವಾಗಿ ಮುಖಕ್ಕೆ ಪಂಚ್ ಮಾಡಿದಾಗ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ನಾಗರಬಾವಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಖಿಲ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾನೆ ಎಂದು ಅವರ ತಂದೆ ಸುರೇಶ್ ತಿಳಿಸಿ ದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಬುಧವಾರ ದೇಹವನ್ನು ಮೈಸೂರಿಗೆ ತಂದು, ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾ ಯಿತು ಎಂದು ತಿಳಿಸಿದ್ದಾರೆ.

ಕಿಕ್ ಬಾಕ್ಸಿಂಗ್ ಪಂದ್ಯಾವಳಿ ಆಯೋ ಜಕರು ಸ್ಥಳದಲ್ಲಿ ಆಂಬುಲೆನ್ಸ್, ಆಕ್ಸಿಜನ್ ಸೌಕರ್ಯ ಹಾಗೂ ಸುರಕ್ಷತಾ ವ್ಯವಸ್ಥೆ ಮಾಡಿರಲಿಲ್ಲ. ಘಟನೆ ನಂತರ ನಿಖಿಲ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಆತ ಸಾವನ್ನಪ್ಪಿದ್ದು, ಅದಕ್ಕೆ ಆಯೋಜಕರ ನಿರ್ಲಕ್ಷ್ಯತೆಯೇ ಕಾರಣ ಎಂದು ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರಥಮ ಚಿಕಿತ್ಸೆ ಸಲಕರಣೆ, ಆರೋಗ್ಯ ಸಿಬ್ಬಂದಿ, ಆಕ್ಸಿಜನ್ ಸೌಲಭ್ಯ, ಆಂಬು ಲೆನ್ಸ್ ಸೌಲಭ್ಯ ಒದಗಿಸದೇ ಆಯೋಜಕರು ನಿರ್ಲಕ್ಷ್ಯ ವಹಿಸಿದ್ದುದು ತಮ್ಮ ಮಗನ ಸಾವಿಗೆ ಕಾರಣ ಎಂದು ಸುರೇಶ್ ನೀಡಿದ ದೂರಿನನ್ವಯ ಜ್ಞಾನಭಾರತಿ ಠಾಣೆ ಪೊಲೀಸರು ಕಿಕ್ ಬಾಕ್ಸಿಂಗ್ ಚಾಂಪಿ ಯನ್‍ಶಿಪ್ ಆಯೋಜಿಸಿದ್ದ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »