ಸಂಸದ ಪ್ರತಾಪ್‍ಸಿಂಹರಿಂದ ವಿಶೇಷಚೇತನ ಮಕ್ಕಳಿಗೆ ಸಮವಸ್ತ್ರ ವಿತರಣೆ
ಮೈಸೂರು

ಸಂಸದ ಪ್ರತಾಪ್‍ಸಿಂಹರಿಂದ ವಿಶೇಷಚೇತನ ಮಕ್ಕಳಿಗೆ ಸಮವಸ್ತ್ರ ವಿತರಣೆ

July 15, 2022

ಮೈಸೂರು, ಜು.14(ಆರ್‍ಕೆಬಿ)- ಮೈಸೂರಿನ ಚಾಮುಂಡಿಪುರಂ ಅರುಣೋ ದಯ ವಿಶೇಷ ಮಕ್ಕಳ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಗುರುವಾರ ಸಮವಸ್ತ್ರಗಳನ್ನು ವಿತರಿಸಿದರು.

ಮೈಸೂರು ಮಹಾನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್ ನಡೆಸುತ್ತಿರುವ ಈ ವಿಶೇಷ ಮಕ್ಕಳ ಶಾಲೆಗೆ ಬೆಂಗಳೂ ರಿನ ವೈದ್ಯ ದಂಪತಿ ಡಾ.ಪ್ರದೀಪ್ ಮತ್ತು ಡಾ.ಪೂಜಾ ಪ್ರದೀಪ್, ತಮ್ಮ ಪುತ್ರಿ ಆರಾಧ್ಯಳ ಮೊದಲ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಮವಸ್ತ್ರಗಳ ಕೊಡುಗೆ ನೀಡಿದ್ದರು. ಅದನ್ನು ಸಂಸದ ಪ್ರತಾಪ್‍ಸಿಂಹ ಮಕ್ಕಳಿಗೆ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಅಂಗ ವಿಕಲರನ್ನು ವಿಕಲಾಂಗರು ಎಂದು ಕರೆಯ ಬೇಕು ಎಂದು ಶಬ್ದ ಬ್ರಹ್ಮ ವೆಂಕಟಸುಬ್ಬಯ್ಯರ ಸಲಹೆಯಂತೆ ವಿಶೇಷಚೇತನರು ಎನ್ನ ಲಾಯಿತು. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ದೇವರ ಮಕ್ಕಳಾದ ಇವರನ್ನು ದಿವ್ಯಾಂಗರು ಎಂದು ಕರೆದರು. ಮೋದಿಯವರಿಗೆ ಇಂತಹ ಮಕ್ಕಳ ಬಗ್ಗೆ ಎಲ್ಲಿಲ್ಲದ ಪ್ರೀತಿ ಎಂದರು.

ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಬಿಜೆಪಿ ಸರ್ಕಾರ ವಿಕಲಚೇತನ ರಿಗೆ ವಿಶೇಷ ನೆರವು ನೀಡುತ್ತಿದೆ. ಮುಡಾ ವತಿಯಿಂದ ಸಂಘ ಸಂಸ್ಥೆಗಳಿಗೆ ಇನ್ನಿತ ರರಿಗೆ ಸಿಎ ನಿವೇಶನಗಳನ್ನು ನೀಡಲಾ ಗುತ್ತದೆ. ಅದೇ ರೀತಿ ವಿಶೇಷ ಚೇತನ ಶಾಲೆಗಳನ್ನು ನಡೆಸುವವರಿಗೆ ಸಿಎ ನಿವೇಶನ ಏಕೆ ನೀಡಬಾರದು ಎಂದು ಚಿಂತಿಸಿ, ಅರ್ಜಿಗಳನ್ನು ಆಹ್ವಾನಿಸಿದಾಗ ಮೈಸೂರು ಒಂದರಲ್ಲೇ 18 ಅರ್ಜಿಗಳು ಬಂದವು. ಹೀಗಾಗಿ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆದು ಯಾರಿಗೆ ಸಿಎ ನಿವೇಶನ ನೀಡಬೇಕು ಎಂಬ ಪಟ್ಟಿ ಮಾಡಿ ವಿತರಿಸ ಲಾಗುವುದು ಎಂದು ಹೇಳಿದರು.

ಅರುಣೋದಯ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ, ನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್ ಮಾತನಾಡಿ, ಈ ಶಾಲೆಯಲ್ಲಿ ಬುದ್ಧಿಮಾಂದ್ಯ ಹಾಗೂ ವಿಕಲಚೇತನ ಮಕ್ಕಳಿಗೆ ಪ್ರತ್ಯೇಕವಾಗಿ ಆರೈಕೆ ಮಾಡಲಾಗುತ್ತಿದ್ದು, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರಿಗೆ ವಿಶೇಷ ತರಬೇತಿಯನ್ನೂ ನೀಡಲಾಗು ತ್ತಿದೆ. ಇಲ್ಲಿರುವ ಮಕ್ಕಳಲ್ಲಿ ಶೇ.50ರಷ್ಟು ಮಕ್ಕಳು ಕಂಪ್ಯೂಟರ್ ಕಲಿತಿದ್ದಾರೆ. ಅವ ರಲ್ಲಿರುವ ಪ್ರತಿಭೆಯನ್ನು ಹೊರತರು ವುದು ನಮ್ಮ ಉದ್ದೇಶವಾಗಿದೆ ಎಂದರು.

ವಿಶೇಷಚೇತನ ಮಕ್ಕಳನ್ನು ನೋಡಿ ಕೊಳ್ಳುವುದು ಪೋಷಕರಿಗೆ ಬಹಳ ದೊಡ್ಡ ಹೊರೆಯಾಗಿದೆ. ಹಾಗಾಗಿ ಅಂತಹ ಮಕ್ಕಳಿಗಾಗಿ ಮೈಸೂರಿನಲ್ಲಿ ವಿಶೇಷ ಚೇತನರಿಗಾಗಿ ಹಾಸ್ಟೆಲ್ ತೆರೆಯಲು ಗಮನ ಹರಿಸುವಂತೆ ಅವರು ಸಂಸದರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಂಗನಾಥ್. ಸಂದೀಪ್ ಇನ್ನಿತರರು ಉಪಸ್ಥಿತರಿದ್ದರು.

Translate »