ಅರಮನೆ ವೀಕ್ಷಣೆಗೆ ಸಿಗದ ಅವಕಾಶ: ಪ್ರವಾಸಿಗರಿಗೆ ನಿರಾಶೆ
ಮೈಸೂರು

ಅರಮನೆ ವೀಕ್ಷಣೆಗೆ ಸಿಗದ ಅವಕಾಶ: ಪ್ರವಾಸಿಗರಿಗೆ ನಿರಾಶೆ

October 16, 2021

ಮೈಸೂರು, ಅ.15-ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸ್ಥಾನಕ್ಕೆ ಈ ವರ್ಷದ ಡಿಸೆಂಬರ್‍ನಲ್ಲಿ ನಡೆಯಲಿರುವ ಚುನಾವಣೆ ಯಲ್ಲಿ ಸ್ಪರ್ಧೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ, ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರೂ ಆದ, ಕೆಪಿಸಿಸಿ ಸದಸ್ಯ ಕೆ.ಮರಿಗೌಡ ಶುಕ್ರವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್ ಅವರಿಗೆ ಅರ್ಜಿ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ನಾನು ಸುಮಾರು 30 ವರ್ಷಗಳಿಂದ ಮಂಡಲ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾ ಯತ್ ಉಪಾಧ್ಯಕ್ಷ, ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ದ್ದೇನೆ. ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದಿಂದ ಸಾಕಷ್ಟು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಂಡು ಬಂದಿರುವುದ ಲ್ಲದೆ, ಕೆಪಿಸಿಸಿ ಸದಸ್ಯನಾಗಿ ಪಕ್ಷ ಸಂಘಟನೆಯಲ್ಲೂ ಅವಿರತ ಶ್ರಮಿಸಿದ್ದೇನೆ. ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಮುಂಬರುವ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕರೂ, ನನ್ನ ಮಾರ್ಗದರ್ಶಕರು, ಹಿತೈಷಿಗಳಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ತನ್ವೀರ್ ಸೇಠ್, ಪುಟ್ಟ ರಂಗಶೆಟ್ಟಿ, ಶ್ರೀಮತಿ ಗೀತಾ ಮಹಾದೇವ ಪ್ರಸಾದ್, ವಿಧಾನಪರಿ ಷತ್ ಹಾಲಿ ಸದಸ್ಯರಾದ ಆರ್.ಧರ್ಮಸೇನ, ಶಾಸಕರಾದ ಎಚ್.ಪಿ.ಮಂಜುನಾಥ, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಆರ್.ನರೇಂದ್ರ, ಮಾಜಿ ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಕಳಲೆ ಕೇಶವಮೂರ್ತಿ, ಜಯಣ್ಣ, ಕೃಷ್ಣಮೂರ್ತಿ, ಎಸ್.ಬಾಲರಾಜ್, ಮುಖಂಡರಾದ ಡಿ.ರವಿಶಂಕರ, ಸುನಿಲ್ ಬೋಸ್, ಗಣೇಶ್ ಪ್ರಸಾದ್ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಜೇಸುದಾಸ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಸತೀಶ್‍ಕುಮಾರ, ಬಿ.ಗುರು ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಸ್.ಸಿದ್ದರಾಜು, ನಾಗನಹಳ್ಳಿ ಉಮಾಶಂಕರ್, ಗೋಪಾಲಪುರ ಬಸವಣ್ಣ, ಮೈಸೂರು ತಾಲೂ ಕಿನ ಪಿಎಲ್‍ಡಿ ಅಧ್ಯಕ್ಷ ದೂರ ನಾಗರಾಜಪ್ಪ, ಹಿಂದುಳಿದ ವರ್ಗದ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ, ಓಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ರಾಡ್ವೇ ಕಿರಣ್, ಅಹಿಂದ ಅಧ್ಯಕ್ಷ ಆಲನಹಳ್ಳಿ ನಟರಾಜು, ಉಪಾಧ್ಯಕ್ಷ ನಾಡನಹಳ್ಳಿ ರವಿ, ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ಪ್ರಕಾಶ್, ಒಬಿಸಿ ರಾಜ್ಯ ಕಾರ್ಯದರ್ಶಿ ಹರೀಶ ಮೊಗಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮಾರ್ಬಳ್ಳಿ ಕುಮಾರ್, ಸಾಲುಂಡಿ ಮುದ್ದು ರಾಮೇಗೌಡ, ಸಿದ್ದಲಿಂಗಪುರ ಸೋಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ಉದ್ಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ, ಕಾಂಗ್ರೆಸ್ ಮುಖಂಡರಾದ ಪಾಂಡುರಂಗ, ನಾಗರಾಜು, ಪಾಂಡು, ನಾಡನಹಳ ರವಿ ಮತ್ತು ಪ್ರಸಾದ್, ಬಸವೇಗೌಡ, ಚೌಡಶೆಟ್ಟಿ, ಬೋಗಾದಿ ಮಾದೇವಸ್ವಾಮಿ, ಲೋಕೇಶ್, ಲಾಯರ್ ತಿಮ್ಮೇ ಗೌಡ, ಇಲವಾಲ ವೈ.ಸಿ.ಸ್ವಾಮಿ ಮv್ತು ಪಾಷಾ, ಕುಮಾರ್, ಚಂದ್ರು ಇನ್ನಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Translate »