ನಂಜನಗೂಡಲ್ಲಿ ಇಂದಿನಿಂದ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವರೆಗೂ ವ್ಯಾಪಾರ-ವಹಿವಾಟಿಗೆ ಅವಕಾಶ
ಮೈಸೂರು

ನಂಜನಗೂಡಲ್ಲಿ ಇಂದಿನಿಂದ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವರೆಗೂ ವ್ಯಾಪಾರ-ವಹಿವಾಟಿಗೆ ಅವಕಾಶ

May 28, 2020

ನಂಜನಗೂಡು, ಮೇ 27(ರವಿ)-ನಂಜನಗೂಡು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಇಂದಿನಿಂದ (ಗುರು ವಾರ) ಬೆಳಿಗ್ಗೆ 7ರಿಂದ ಸಂಜೆ 7ವರೆಗೆ ವ್ಯಾಪಾರ-ವಹಿ ವಾಟಿಗೆ ಅವಕಾಶ ಕಲ್ಪಿಸಲಾಗಿದೆ.

ಲಾಕ್‍ಡೌನ್ ಸಡಿಲಿಕೆ ಮಾಡಿ, ಬೆ.7ರಿಂದ ಸಂಜೆ 7ರವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಿದ್ದರೂ ನಂಜನಗೂಡಿನಲ್ಲಿ ಸೀಲ್‍ಡೌನ್ ಪ್ರದೇಶಗಳಿದ್ದ ಕಾರಣಕ್ಕೆ ಸಂಜೆ 5ವರೆಗೆ ಮಾತ್ರ ಅವಕಾಶ ನೀಡಲಾಗಿತ್ತು.

ಅಂತಿಮವಾಗಿ ಉಳಿದಿದ್ದ ಬಸವನಗುಡಿ ಬ್ಲಾಕ್ ಬಡಾವಣೆಯ ಸೀಲ್‍ಡೌನ್ ಬುಧವಾರಕ್ಕೆ ತೆರವಾಗಿರುವು ದರಿಂದ ಸಂಜೆ 7ರವರೆಗೂ ವಹಿವಾಟು ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಪಟ್ಟಣ ಠಾಣೆ ಎಸ್‍ಐ ರವಿಕುಮಾರ್ ತಿಳಿಸಿದ್ದಾರೆ.

Translate »