ಮೋದಿ, ಬಿಎಸ್‍ವೈ ಎಂತಹ ಬಜೆಟ್ ಮಂಡಿಸಿದರೂ ಒಪ್ಪದ ಪ್ರತಿಪಕ್ಷ
ಚಾಮರಾಜನಗರ

ಮೋದಿ, ಬಿಎಸ್‍ವೈ ಎಂತಹ ಬಜೆಟ್ ಮಂಡಿಸಿದರೂ ಒಪ್ಪದ ಪ್ರತಿಪಕ್ಷ

March 9, 2020

ಚಾಮರಾಜನಗರ,ಮಾ.8-ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ಎಂತಹ ಬಜೆಟ್ ಮಂಡಿಸಿದರೂ ವಿರೋಧ ಪಕ್ಷದವರು ಒಪ್ಪಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯ ಮಾಧ್ಯಮ ಪ್ರತಿನಿಧಿ ಹಾಗೂ ಹೈಕೋರ್ಟ್ ವಕೀಲ ಮಧು ನರಸಿಂಗರಾವ್ ತಿಳಿಸಿದರು.

ನಗರದ ಜೋಡಿರಸ್ತೆಯಲ್ಲಿರುವ ವರ್ತ ಕರ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 2020-21ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಬಜೆಟ್ ಜಿಲ್ಲಾ ಮಟ್ಟದ ಕಾರ್ಯಾಗಾರ ದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಸಂದರ್ಭ ಬಡ ದೇಶ ಎಂದು ಕರೆಯುತ್ತಿದ್ದರು. ಆದರೆ ನರೇಂದ್ರಮೋದಿ ಪ್ರಧಾನಿಯಾದ ನಂತರ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ ಎಂದರು.

ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ವರ್ಗ ಜನತೆಗೂ ಒಳ್ಳೆಯದಾಗುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಫೆಬ್ರವರಿ ಯಲ್ಲಿ ಬಜೆಟ್ ಮಂಡಿಸಿದರೆ ಮುಂದಿನ ಫೆಬ್ರವರಿ ತನಕ ಯಾವುದೇ ಕಾರ್ಯಕ್ರಮ ಗಳು ಇರುತ್ತಿರಲಿಲ್ಲ. ನರೇಂದ್ರಮೋದಿ ದೇಶದ ಪ್ರಧಾನಿಯಾದ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚಿಂತಿಸಿ ನೀಲಿನಕ್ಷೆ ತಯಾರು ಮಾಡುತ್ತಾರೆ. ಪ್ರತಿ ತಿಂಗಳೂ ಜಿಡಿಪಿ ಕಾರ್ಯಕ್ರಮ ಸರಿಪಡಿಸಿ ಸವಾಲು ಗಳನ್ನು ಸರಿಪಡಿಸಲು ಶುರು ಮಾಡಿದ್ದಾರೆ. ಇದು ಕಾಳಜಿ ಸರ್ಕಾರ ಅಲ್ಲವೇ? ಪ್ರಶ್ನಿಸಿದರು.

ದೇಶದ ಪ್ರಗತಿ ದೃಷ್ಟಿಯಿಂದ ಕೃಷಿ, ಸೇವೆ, ಉತ್ಪನ್ನ ವಲಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತರಾಮನ್ 102 ಲಕ್ಷ ಕೋಟಿ ರೂ. ಬಂಡವಾಳ ನೀಲಿನಕ್ಷೆ ತಯಾರಿಸಿದ್ದಾರೆ. ನೇರ ತೆರಿಗೆ 45.5 ಕೋಟಿ ಲಕ್ಷ ಕಡಿಮೆ ಆಗಿದ್ದು, ತೆರಿಗೆಯಲ್ಲಿ 2.5 ಲಕ್ಷ ಕೋಟಿ ಕಡಿಮೆ ಆರ್ಥಿಕ ಕೊರತೆಯಲ್ಲೂ ಪ್ರಧಾನಿ ನರೇಂದ್ರಮೋದಿ ಯೂನಿಯನ್ ಬಜೆಟ್ ಮಂಡಿಸಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಾಲದ ಸುಳಿಯಲ್ಲೂ ಮಂಡಿಸಿದ ಆಯವ್ಯಯ ದಲ್ಲಿ ಸಾಮಾಜಿಕ ನ್ಯಾಯದೊಂದಿಗೆ ಸರ್ವರಿಗೂ ಸಮಬಾಳು, ಸಮಪಾಲು ನೀಡಿದ್ದಾರೆ ಇದನ್ನು ವಿರೋಧ ಪಕ್ಷದವರು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಆರ್.ಸುಂದರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಸಂಚಾಲಕ ಡಾ.ದತ್ತೇಶ್‍ಕುಮಾರ್, ಹಿರಿಯ ವಕೀಲ ಎಂ.ಚಿನ್ನಸ್ವಾಮಿ, ಮಾಜಿ ಶಾಸಕರಾದ ಸಿ.ಗುರುಸ್ವಾಮಿ, ಜಿ.ಎನ್. ನಂಜುಂಡಸ್ವಾಮಿ, ಪರಿಮಳನಾಗಪ್ಪ, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ನಾಗಶ್ರೀ, ರಾಜ್ಯ ಎಸ್‍ಟಿ ಮೋರ್ಚಾ ಕಾರ್ಯದರ್ಶಿ ಸೋಮನಾಯಕ, ಮಾಜಿ ಚೂಡಾಧ್ಯಕ್ಷ ಬಾಲಸುಬ್ರಹ್ಮಣ್ಯಂ, ನಾರಾ ಯಣ ಪ್ರಸಾದ್, ಮಂಡಲ ಅಧ್ಯಕ್ಷ ಪ್ರಶಾಂತ್, ಟೌನ್ ಅಧ್ಯಕ್ಷ ನಾಗರಾಜು ಇತರರಿದ್ದರು.

Translate »