ಗುಂಡ್ಲುಪೇಟೆ,ಮಾ.8 (ಸೋಮ್.ಜಿ)- ಮಣ್ಣಿನ ಆರೋಗ್ಯ ಕಾಪಾಡಬೇಕಾದ ಹೊಣೆ ಪ್ರತಿಯೊಬ್ಬ ರೈತನ ಮೇಲಿದೆ ಎಂದು ಕೃಷಿ ಇಲಾಖೆ ವಿಶ್ರಾಂತ ಸಹಾಯಕ ನಿರ್ದೇಶಕ ಶ್ರೀನಿವಾಸಶೆಟ್ಟಿ ತಿಳಿಸಿದರು.
ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ರೈತಮೇಳ ಹಾಗೂ ಮಣ್ಣಿನ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಣ್ಣಿನ ಆರೋಗ್ಯ ಸಂಪೂರ್ಣ ನಾಶವಾಗುತ್ತಿದೆ. ಈ ಹಿಂದೆ ಭೂಮಿಗೆ ಸಾಕಷ್ಟು ದನಗಳ ಗೊಬ್ಬರ ಹಾಕಿ ಮಣ್ಣಿನ ಆರೋಗ್ಯ ಕಾಪಾಡಿ ಕೊಳ್ಳುತ್ತಿದ್ದರು. ಆದರೆ ಇಂದು ಭಾರೀ ಪ್ರಮಾಣದಲ್ಲಿ ರಸಗೊಬ್ಬರ ಹಾಕಲಾಗು ತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲೇ ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ತರಕಾರಿ ಬೆಳೆಯುತ್ತಿದ್ದರೂ, ಯಾವ ಮಣ್ಣಿಗೆ ಯಾವ ಪೆÇೀಷಕಾಂಶದ ಕೊರತೆ ಯಿದೆ ಎಂದು ಅರಿಯದ ರೈತರು ಪೈಪೆÇೀ ಟಿಗೆ ಬಿದ್ದು ರಾಸಾಯನಿಕ ಗೊಬ್ಬರ ಬಳಸು ತ್ತಿದ್ದಾರೆ. ಇದರಿಂದ ಅನಗತ್ಯ ಉತ್ಪಾದನಾ ವೆಚ್ಚದ ಹೆಚ್ಚಳ ಹಾಗೂ ಮಣ್ಣಿನ ಆರೋಗ್ಯ ದಲ್ಲಿ ಸಮಸ್ಯೆ ಎದುರಾಗುತ್ತಿದೆ. ಪ್ರಸ್ತುತ ಸಾವಿರಾರು ಅಡಿ ಆಳದ ಕೊಳವೆ ಬಾವಿಯಲ್ಲೂ ರಾಸಾಯನಿಕಗಳು ಪತ್ತೆ ಯಾಗಿವೆ. ಆದ್ದರಿಂದ ಸಾವಯವ ಪದ್ಧತಿಗೆ ಹಿಂದಿರುಗಿದರೆ ಮಾತ್ರ ಭವಿಷ್ಯದಲ್ಲಿ ಎಲ್ಲರೂ ಬದುಕಲು ಸಾಧ್ಯ ಎಂದರು.
ತಾಪಂ ಅಧ್ಯಕ್ಷ ಎಸ್.ಎಸ್.ಮಧುಶಂಕರ್ ಮಾತನಾಡಿ, ಕೃಷಿ ಇಲಾಖೆ ಕಳೆದ 4 ವರ್ಷ ಗಳಿಂದ ರೈತರ ಬೆಳೆವಿಮೆ ಹಣ ಪಾವತಿ ಸಿಲ್ಲ. ಅರ್ಜಿ ಸಲ್ಲಿಸಲು ರೈತರು ಮೂರ್ನಾಲ್ಕು ದಿನಗಳು ತಮ್ಮ ಕೆಲಸ ಕಾರ್ಯ ಕೈಬಿಟ್ಟು ಅಲೆದಾಡಬೇಕಾಗಿದೆ. ಇಲಾಖೆಯೇ ರೈತರ ಮನೆಯ ಬಾಗಿಲಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದರೆ ಆಯಾ ವರ್ಷವೇ ಪಾವತಿಸಬಹುದಾಗಿತ್ತು. ಮುಂದಾದರೂ ಅಂಚೆಕಚೇರಿ, ಗ್ರಾಪಂಗಳಲ್ಲಿ ಅರ್ಜಿ ಪಡೆದುಕೊಳ್ಳಬೇಕು. ವೈಜ್ಞಾನಿಕ ವಿಧಾನಗಳ ಮೂಲಕ ವಿಮೆ ಹಣ ಪಾವತಿಸಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಮಾತನಾಡಿ, ಕೃಷಿ ಇಲಾಖೆ ಈವರೆಗೆ 930 ಜಮೀನಿನ ಮಣ್ಣಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಿ ಅಲ್ಲಿ ಬೆಳೆಯಬಹುದಾದ ಬೆಳೆಗಳು, ಕೊರತೆ ಇರುವ ಪೆÇೀಷಕಾಂಶಗಳು ಹಾಗೂ ಅಗತ್ಯ ಸೂಕ್ಷ್ಮ ಪೆÇೀಷಕಾಂಶಗಳ ಪ್ರಮಾಣದ ಬಗ್ಗೆ ಶಿಫಾರಸ್ಸು ಮಾಡುತ್ತಿದೆ. ಆದರೆ ಈ ಬಗ್ಗೆ ಮಾಹಿತಿಯಿಲ್ಲದ ರೈತರು ಹೆಚ್ಚು ಗೊಬ್ಬರ ಹಾಕಿದರೆ ಹೆಚ್ಚು ಇಳುವರಿ ಬರುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿ ಹೆಚ್ಚಿನ ರಾಸಾಯನಿಕ ಗೊಬ್ಬರ ಹಾಕುವುದರಿಂದ ಮಣ್ಣಿನ ಗುಣಮಟ್ಟ ಕಳೆದುಕೊಳ್ಳು ವಂತಾಗಿದೆ. ಎಲ್ಲಾ ರೈತರ ಜಮೀನಿನಲ್ಲಿ ಉಚಿತವಾಗಿ ಮಣ್ಣಿನ ಪರೀಕ್ಷೆ ನಡೆಸಿ ಲಘುಪೆÇೀಷಕಾಂಶಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದರು.
ಇತ್ತೀಚೆಗೆ ಬೀಳುತ್ತಿರುವ ಮಳೆ ರೈತರಿಗೆ ವರದಾನವಾಗಿದೆ. ಮಾಗಿ ಮಳೆಯಲ್ಲಿ ತೇವಾಂಶವಿರುವಾಗಲೇ ಕೊಟ್ಟಿಗೆ ಗೊಬ್ಬರ ಹಾಕಿ ಎರಡರಿಂದ ಮೂರು ಬಾರಿ ಉಳುಮೆ ಮಾಡಿದರೆ ಮುಂದೆ ಮಳೆ ಕೈ ಕೊಟ್ಟರೂ ಭೂಮಿಯಲ್ಲಿ ತೇವಾಂಶವಿ ರುತ್ತದೆ. ಅಲ್ಲದೆ ಬೆಳೆಗಳಿಗೆ ಕೀಟಬಾಧೆ ಹಾಗೂ ರೋಗಬಾಧೆ ತಪ್ಪುತ್ತದೆ ಎಂದರು.
ರೈತ ಮೇಳದ ಅಂಗವಾಗಿ ತೆರೆದಿದ್ದ ಕೃಷಿ ಯಂತ್ರೋಪಕರಣಗಳು, ವಸ್ತು ಪ್ರದರ್ಶನ, ಸಾವಯವ ಬೆಳೆ ಹಾಗೂ ಉತ್ಪನ್ನಗಳ ಮಾರಾಟ ಮಳಿಗೆ ರೈತರನ್ನು ಆಕರ್ಷಿಸಿತು. ಈ ವೇಳೆ ಕೃಷಿ ವಿಜ್ಞಾನಿ ಅಭಿಷೇಕ್, ಕೃಷಿ ಅಧಿಕಾರಿಗಳದ ವೆಂಕ ಟೇಶ್, ಸತೀಶ್, ಅರ್ಪಿತಾ, ಪರಮೇಶ್ವ ರಪ್ಪ, ತಾಂತ್ರಿಕ ಅಧಿಕಾರಿ ದೊರೆರಾಜ್ ಗ್ರಾಪಂ ಉಪಾಧ್ಯಕ್ಷೆ ಗೌರಮ್ಮ, ಮುಖಂಡ ರಾದ ಸಿದ್ದರಾಜು, ನೀಲಮ್ಮ ಇತರರಿದ್ದರು.