ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ವಿರೋಧ
ಮೈಸೂರು

ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ವಿರೋಧ

July 21, 2021

ತಿ.ನರಸೀಪುರ, ಜು.20(ಎಸ್‍ಕೆ)- ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ ಪುರಸಭೆ ಯಲ್ಲಿ ಪರವಾನಗಿ ಪಡೆದು ಪ್ರಾರ್ಥನಾ ಮಂದಿರ ನಿರ್ಮಿಸುತ್ತಿರುವುದಕ್ಕೆ ಪಟ್ಟಣದ ತ್ರಿವೇಣಿನಗರ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ತ್ರಿವೇಣಿನಗರದ ಖಾಲಿ ನಿವೇಶನದಲ್ಲಿ ನಯಾಜ್ ಅಹ್ಮದ್, ಅಯಾಜ್ ಅಹ್ಮದ್, ಅಪ್ಸಾನ್ ಅಹಮದ್ ಹಾಗೂ ತಹೀದ್ ಅಹಮದ್ ಎಂಬುವರು ನಿವೇಶನ ಸಂಖ್ಯೆ 21 ಮತ್ತು 17ರಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರ ನಿರ್ಮಿಸುತ್ತಿದ್ದಾರೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದು ಕಾಮಗಾರಿ ನಿಲ್ಲಿಸಿ ಸೌಹಾರ್ದತೆ ಕಾಪಾಡುವಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಸೀಲ್ದಾರ್ ಡಿ.ನಾಗೇಶ್ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.

ತ್ರಿವೇಣಿನಗರದಲ್ಲಿ ಬಹುಸಂಖ್ಯಾತ ಹಿಂದೂಗಳು ವಾಸವಾಗಿದ್ದು, ಇಲ್ಲಿವರೆಗೆ ಎಲ್ಲಾ ಜಾತಿ ಧರ್ಮದ ಜನರು ಸೌಹಾರ್ದ ಯುತವಾಗಿ ಜೀವನ ನಡೆಸುತ್ತಾ ಬಂದಿ ದ್ದಾರೆ. ಆದರೆ ಮತ್ತೊಂದು ಧರ್ಮದ ಕೆಲವರು ಪುರಸಭೆಯಿಂದ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುವುದಾಗಿ ಲೈಸೆನ್ಸ್ ಪಡೆದು ಅಕ್ಕಪಕ್ಕದ ಬಡಾವಣೆ ನಿವಾಸಿಗಳಿಗೆ ಗೋಡೌನ್ ಮತ್ತು ವಾಣಿಜ್ಯ ಮಳಿಗೆ ಕಟ್ಟಲಾಗುತ್ತಿದೆ ಎಂದು ಸುಳ್ಳು ಹೇಳಿ ಈಗ ಕಳೆದ 6 ತಿಂಗಳಿಂದ ಮಸೀದಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಇದನ್ನು ಪ್ರಶ್ನಿಸಿದ ನಾಗರಿಕರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ರಮ ಮಸೀದಿ ನಿರ್ಮಾಣ ಬಗ್ಗೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತರಲಾಗಿ, ಅಲ್ಲಿಗೆ ಭೇಟಿ ನೀಡಿದ್ದ ಮುಖ್ಯಾಧಿಕಾರಿಗಳು ಕಾಮಗಾರಿ ನಿಲ್ಲಿಸ ಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಕ್ರಮಕ್ಕೆ ಮುಂದಾಗಿಲ್ಲ. ಮಸೀದಿ ನಿರ್ಮಿಸುತ್ತಿರುವವರು ಮಸೀದಿ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ಮಸೀದಿ ನಿರ್ಮಾಣದಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಾಮಗಾರಿ ತಡೆಹಿಡಿದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.

Translate »