ಪುರಸಭೆ ಅಭಿವೃದ್ಧಿ ಹಿನ್ನಡೆಗೆ ಅಧಿಕಾರಿಗಳೇ ಕಾರಣ
ಮೈಸೂರು

ಪುರಸಭೆ ಅಭಿವೃದ್ಧಿ ಹಿನ್ನಡೆಗೆ ಅಧಿಕಾರಿಗಳೇ ಕಾರಣ

July 21, 2021

ಹೆಚ್.ಡಿ.ಕೋಟೆ, ಜು.20(ಮಂಜು)- ಪುರಸಭೆ ಅಭಿವೃದ್ಧಿ ಹಿನ್ನಡೆಗೆ ಅಧಿಕಾರಿ ವರ್ಗವೇ ಕಾರಣ ಎಂದು ಪುರಸಭಾ ಸದಸ್ಯರು ಆರೋಪಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಸರೋಜಮ್ಮ ಅವರ ಅಧ್ಯಕ್ಷತೆ ಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನಿಂದ ಆರೋಪಿ ಸಿದ ಸದಸ್ಯರು, ಕಳೆದ ಸಭೆಯಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ದ್ದರೂ, ಯಾವುದೇ ಕಾಮಗಾರಿ ಸರಿ ಯಾಗಿ ನಡೆದಿಲ್ಲ. ಹಿಂದಿನ ಸಭೆಯ ಮಾಹಿತಿ ಗಳು ಸದಸ್ಯರಿಗೆ ಲಭ್ಯವಾಗಿಲ್ಲ ಎಂದರು.

ಸಮುದಾಯ ಪರಿಪಾಲನಾ ಸಂಘಟನ ಅಧಿಕಾರಿ ಉಮಾಶಂಕರ್ ಎಂಬುವರು ಕಳೆದ 2 ವರ್ಷಗಳಿಂದ ಪಟ್ಟಣದ ಪುರ ಸಭಾ ಕಚೇರಿಯಲ್ಲಿ ಕೆಲಸ ನಿರ್ವಹಿಸಿಲ್ಲ. ಆದರೆ ಪುರಸಭಾ ಅಧಿಕಾರಿಗಳು ಕೆಲಸ ನಿರ್ವಹಣೆ ಮಾಡಿ ಹಾಜರಾತಿ ನೀಡಿ ಲಕ್ಷಾಂತರ ರೂ. ಗಳನ್ನು ಸರ್ಕಾರಕ್ಕೆ ವಂಚಿಸಿದ್ದಾರೆ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಮಿಲ್ ನಾಗರಾಜು ಮಾತ ನಾಡಿ, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರ ಕಾಲದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ಹಂಚಿಕೆ ಮಾಡ ಲಾಗಿದ್ದ ನಿವೇಶನಗಳು ನಿಜವಾದ ಫಲಾ ನುಭವಿಗಳಿಗೆ ಹಂಚಿಕೆ ಆಗಿಲ್ಲ. ಹಾಗಾಗಿ ಸಮಗ್ರವಾಗಿ ಪರಿಶೀಲಿಸಿ ಹಂಚಿಕೆ ಮಾಡ ಬೇಕು ಎಂದು ಆದೇಶಿಸಿದ್ದರೂ, ಇದುವರೆಗೂ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.

2018-19 ಸಾಲಿನ ಆಡಿಟ್ ವರದಿ ಯಲ್ಲಿ 34 ಲಕ್ಷ ರೂ. ಲೋಪದೋಷ ಕಂಡು ಬಂದಿದೆ. ಈ ಬಗ್ಗೆ ಸರಿಯಾದ ವರದಿ ನೀಡಿಲ್ಲ. ಹೀಗಾಗಿ ಇನ್ನೂ ಅವ್ಯವಹಾರ ನಡೆದಿದೆ. 2 ವರ್ಷ ಕಾಲ ಪುರಸಭೆ ಆಡಳಿತಾಧಿಕಾರಿ ನೇಮಕ ಮಾಡಿದ್ದು ಅವರ ಅವಧಿಯಲ್ಲಿ ಲಕ್ಷಾಂತರ ರೂ. ಹಣ ದುರುಪ ಯೋಗವಾಗಿದ್ದು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಹೊಸ ಬೋರ್ ವೆಲ್ ಮೋಟರ್‍ಗಳನ್ನು ಅಳವಡಿಸ ಲಾಗಿದೆ ಎಂದು ಅಧಿಕಾರಿಗಳು ಲೆಕ್ಕದಲ್ಲಿ ತೋರಿಸಿದ್ದಾರೆ. ಆದರೆ ಹಳೆಯ ಮೋಟರ್ ಗಳು ಕಚೇರಿಯಲ್ಲಿ ಇಲ್ಲ. ಪ್ರತಿ ತಿಂಗಳು ಕುಡಿಯುವ ನೀರಿನ ರಿಪೇರಿಗಾಗಿ ಮತ್ತು ಯಂತ್ರಗಳಿಗಾಗಿ ಖರ್ಚು ಮಾಡಿರುವ ಹಣದಿಂದ ಹೊಸ ಬೋರ್‍ವೆಲ್ ಕೊರೆಸ ಬಹುದಾಗಿತ್ತು ಎಂದು ದೂರಿದರು.

ಸದಸ್ಯ ನಂಜಪ್ಪ ಮಾತನಾಡಿ ಬೀದಿ ನಾಯಿಗಳು, ಕೋತಿಗಳ ಹಾವಳಿ ಜಾಸ್ತಿಯಾಗಿದ್ದು ಇದರಿಂದ ಮಕ್ಕಳು, ವೃದ್ಧರು ಹಾಗೂ ಹೆಣ್ಣುಮಕ್ಕಳ ಮೇಲೆ ದಾಳಿ ನಡೆಯುತ್ತಿದೆ. ಈ ಬಗ್ಗೆ ಅನೇಕ ಬಾರಿ ಪುರಸಭೆಗೆ ಮನವಿ ಮಾಡಿದರು ಕ್ರಮವಹಿಸಿಲ್ಲಾ ಎಂದು ಆರೋಪಿಸಿದರು.

ಸಭೆಯಲ್ಲಿ ಶಾಸಕ ಅನಿಲ್, ಪುರಸಭಾ ಉಪಾಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಆರ್.ಅಶೋಕ್, ಸದಸ್ಯರಾದ ಆಸೀಫ್, ಮಧು, ಸೋಮ ಶೇಖರ್, ಲೋಕೇಶ್, ವೆಂಕಟೇಶ್, ಪುಟ್ಟಬಸವ ನಾಯಕ, ರಾಜು, ಪ್ರೇಮ್ ಸಾಗರ್, ಸಾಹೀರಾ ಭಾನು, ಸುಹಾಸಿನಿ, ಕವಿತಾ, ದರ್ಶಿನಿ, ಸವಿತ, ನಾಗಮ್ಮ, ಶಿವಮ್ಮ, ಅಧಿಕಾರಿ ಗಳಾದ ಸುರೇಶ್, ಪರಮೇಶ್, ಸತ್ಯ, ರಘು, ತೇಜಸ್ವಿನಿ, ಶಪಿಮುಂತಾದವರಿದ್ದರು

Translate »