ಕಸ ವಿಲೇವಾರಿ ಶೆಡ್ ನಿರ್ಮಾಣಕ್ಕೆ ಭೂಮಿಪೂಜೆ
ಮೈಸೂರು

ಕಸ ವಿಲೇವಾರಿ ಶೆಡ್ ನಿರ್ಮಾಣಕ್ಕೆ ಭೂಮಿಪೂಜೆ

July 21, 2021

ತಿ.ನರಸೀಪುರ, ಜು.20(ಎಸ್‍ಕೆ)-ಕೊರೊನಾ ವೇಳೆ ಪುರಸಭೆಗೆ ಯಾವುದೇ ಅನುದಾನ ಬಾರದ ಹಿನ್ನೆಲೆಯಲ್ಲಿ ಅಭಿ ವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರು ಈ ಹಿಂದೆ ನೀಡಿದ್ದ ಆನುದಾನದಲ್ಲೇ ಕಾಮ ಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಪುರಸಭಾಧ್ಯಕ್ಷ ಎನ್.ಸೋಮು ಹೇಳಿದರು.

ಪುರಸಭೆ ವ್ಯಾಪ್ತಿಯ ಆಲಗೂಡು ಗ್ರಾಮದ 14ನೇ ವಾರ್ಡ್‍ನ ಯುಜಿಡಿ ಪ್ಲಾಂಟ್ ಬಳಿ 15ನೇ ಹಣಕಾಸು ಯೋಜನೆಯಡಿ 11.40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಕಸ ವಿಲೇವಾರಿ ಶೆಡ್ ನಿರ್ಮಾಣ ಕಾಮಗಾರಿಗೆ ಪುರಸಭಾ ಸದಸ್ಯ ಆರ್.ಅರ್ಜುನ್ ಅವರೊಂದಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ದಿಂದ ಪುರಸಭೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಅವಧಿ ಯಲ್ಲಿ ನೀಡಲಾಗಿದ್ದ ಅನುದಾನವನ್ನೇ ಬಳಸಿ ವರುಣಾ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡ ಲಾಗುತ್ತಿರುವುದರಿಂದ ಪುರಸಭೆ ಅನುದಾನ ತಡೆ ಹಿಡಿಯಲಾಗಿತ್ತು. ಅದನ್ನೀಗ ಕ್ರಿಯಾ ಯೋಜನೆ ಮಾಡಿ ಒಂದಷ್ಟು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇನ್ನೂ ಹೆಚ್ಚಿನ ಕಾಮಗಾರಿ ಮಾಡಬೇಕಿದ್ದು ಈ ಸಂಬಂಧ ಕಡತಗಳು ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೆಂಡಿಂಗ್ ಇದೆ ಎಂದರು.
ಪುರಸಭೆಯಲ್ಲಿ 1.50 ಕೋಟಿ ರೂ. ಗಳ ಅನುದಾನದ ಹಣ ಸಿದ್ಧವಿದ್ದು, ಪುರಸಭೆ ಸರ್ವ ಸದಸ್ಯರ ಸಭೆ ಕರೆದು, ಅನುಮೋದನೆ ಪಡೆಯುವ ಮೂಲಕ ಕೆಲವೊಂದು ವಾರ್ಡ್‍ಗಳಿಗೆ ಹಂಚಿಕೆ ಮಾಡಿ ಕಾಮಗಾರಿಗೆ ಚಾಲನೆ ನೀಡ ಲಾಗುತ್ತದೆ. ಪುರಸಭೆಗೆ ಅನುದಾನ ಬಾರದ ಕಾರಣ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದೆ ಎಂದ ಅವರು, ಸಿದ್ದರಾಮಯ್ಯ ಹಾಗೂ ಸರ್ಕಾರದ ಸಚಿವರ ಗಮನ ಸೆಳೆದು ವಿಶೇಷ ಅನುದಾನ ತಂದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಈ ವೇಳೆ ರಾಜು, ನಂಜುಂಡಸ್ವಾಮಿ (ಗಜ), ಗುತ್ತಿಗೆದಾರ ಮಂಜು, ದಿಲೀಪ್, ಪ್ರದೀಪ್ ಮತ್ತಿತರರಿದ್ದರು.

Translate »