ನಮ್ಮ ಅಧಿಕಾರಿಗಳು ಇನ್ನೂ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಮನಸ್ಥಿತಿವುಳ್ಳವರು!
News

ನಮ್ಮ ಅಧಿಕಾರಿಗಳು ಇನ್ನೂ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಮನಸ್ಥಿತಿವುಳ್ಳವರು!

February 15, 2023

ಬೆಂಗಳೂರು, ಫೆ. 14(ಕೆಎಂಶಿ)-ರಾಜ್ಯದಲ್ಲಿ ಕುಡಿಯುವ ನೀರು ಯೋಜನೆಯ ವಿಚಾರದಲ್ಲಿ ನಿರ್ಲಕ್ಷ್ಯ ಮನೋಭಾವ ತಳೆದಿರುವ ಅಧಿಕಾರಿಗಳು ಇನ್ನೂ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಮನಸ್ಥಿತಿಯಲ್ಲಿದ್ದಾರೆ ಎಂದು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ಲ್ಲಿಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಶ್ರೀರಂಗ ಪಟ್ಟಣ ವಿಧಾನಸಭಾ ಕ್ಷೇತ್ರದ ಗಾಮನ ಹಳ್ಳಿ ಸೇರಿದಂತೆ 16 ಗ್ರಾಮಗಳಿಗೆ ಕುಡಿ ಯುವ ನೀರಿನ ಯೋಜನೆ ಮಂಜೂರಾ ಗಿದ್ದರೂ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷರು, ನಮ್ಮ ಅಧಿಕಾರಿಗಳು ಈಗಲೂ ಬ್ರಿಟಿಷ್ ಆಳ್ವಿಕೆಯ ಮನಸ್ಥಿತಿಯಿಂದ ಹೊರ ಬಂದಿಲ್ಲ. ನಾನು ಎಲ್ಲರನ್ನೂ ಕೆಟ್ಟವರು ಎಂದು ದೂಷಿಸುವುದಿಲ್ಲ. ಕೆಲವು ಅಧಿಕಾರಿ ಗಳು ಒಳ್ಳೆಯವರು ಇದ್ದಾರೆ. ಯಾವುದೇ ಯೋಜನೆಗೂ ಕಾನೂನು ಕಾರಣ ನೀಡಿ ವಿಳಂಬ ಮಾಡುವುದು ಅವರಿಗೆ ಕಾಯಕ ವಾಗಿದೆ. ಕಿವಿ ಹಿಂಡದಿದ್ದರೆ, ಯಾವುದೇ ಕೆಲಸವಾಗುವುದಿಲ್ಲ. ಮೊದಲು ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಕಾನೂನು ಹೀಗೆ ಹೇಳು ತ್ತದೆ. ನ್ಯಾಯಾಲಯದ ಆದೇಶವಿದೆ. ನಾಳೆ ನಮ್ಮ ಸೇವಾ ಅವಧಿಗೆ ಏನಾದರೂ ತೊಂದರೆ ಆಗಬಹುದು ಎಂಬ ನಾನಾ ಕಾರಣ ನೀಡಿ ವಿಳಂಬ ಮಾಡುತ್ತಾರೆ. ಇದು ಕುಡಿಯುವ ನೀರಿನ ಯೋಜನೆ. ಟ್ಯಾಂಕ್ ನಿರ್ಮಿಸಿ ಪೈಪ್‍ಲೈನ್ ಮಾಡಿ ಕೊಡಲು ಇರುವ ಸಮಸ್ಯೆಯಾದರೂ ಏನು, ನೀವು ಅಧಿಕಾರಿಗಳ ಕಿವಿ ಹಿಂಡದಿ ದ್ದರೆ, ಎಲ್ಲಾ ಯೋಜನೆಗಳು ಇದೇ ರೀತಿ ಆಗುತ್ತವೆ ಎಂದು ಸಚಿವರನ್ನುದ್ದೇಶಿಸಿ ಹೇಳಿದರು. ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಕುಡಿಯುವ ನೀರಿನ ಯೋಜನೆಗೆ ಅರಣ್ಯ, ಕಂದಾಯ ಸೇರಿದಂತೆ ಯಾವುದೇ ಇಲಾಖೆಗಳು ವಿಳಂಬ ಮಾಡದಂತೆ ಆದೇಶ ನೀಡಲಾ ಗಿದೆ. ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ಮಾತ್ರ ಬದಲಾಗುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ಇಂತಹ ಯೋಜನೆಗಳನ್ನು ಮಾಡಬೇಕು ಎಂದು ಸಲಹೆ ಮಾಡಿದರು. ಆಗ ಕಾನೂನು ಸಚಿವ ಮಾಧುಸ್ವಾಮಿ ಅವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರವ್ಯಾಪ್ತಿ ಗಾಮನಹಳ್ಳಿ ಹಾಗೂ ಇತರೆ 16 ಗ್ರಾಮಗಳಿಗೆ ಅರಣ್ಯ ಇಲಾಖೆ ಅನುಮೋದನೆ ನೀಡಿದ್ದು, ಆದಷ್ಟು ಶೀಘ್ರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾ ಗುವುದು. ಈಗ ಅರಣ್ಯ ಇಲಾಖೆಯೇ ಅನುಮೋದಿಸಿರುವುದರಿಂದ ವಿಳಂಬ ವಾಗುವುದಿಲ್ಲ ಎಂದು ಭರವಸೆ ನೀಡಿದರು.

Translate »