ನಗುವನಹಳ್ಳಿ ಗ್ರಾಪಂಗೆ ‘ನಮ್ಮ ಗ್ರಾಮ ನಮ್ಮ ಯೋಜನೆ’ ರಾಷ್ಟ್ರ ಪ್ರಶಸ್ತಿ 
ಮಂಡ್ಯ

ನಗುವನಹಳ್ಳಿ ಗ್ರಾಪಂಗೆ ‘ನಮ್ಮ ಗ್ರಾಮ ನಮ್ಮ ಯೋಜನೆ’ ರಾಷ್ಟ್ರ ಪ್ರಶಸ್ತಿ 

April 27, 2020

ಶ್ರೀರಂಗಪಟ್ಟಣ, ಏ.26(ವಿನಯ್ ಕಾರೇ ಕುರ)- ಕೊರೊನಾ ಲಾಕ್‍ಡೌನ್ ನಡುವೆ ತಾಲೂಕಿನ ನಗುವನಹಳ್ಳಿ ಗ್ರಾಪಂಗೆ 2018- 19ನೇ ಸಾಲಿನ `ನಮ್ಮ ಗ್ರಾಮ ನಮ್ಮ ಯೋಜನೆ ಯಡಿ’ (ಜಿಪಿಡಿಪಿಎ) ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಆಯ್ಕೆ ಪ್ರಮಾಣ ಪತ್ರ ರವಾನಿಸಿದ್ದಾರೆ.

ಈ ಗ್ರಾಪಂ ಪಿಡಿಓ ಹೆಚ್.ಜಿ.ಯೋಗೇಶ್ ಹಾಗೂ ಎರಡನೇ ಬಾರಿಗೆ ಗ್ರಾಪಂ ಅಧ್ಯಕ್ಷರಾಗಿರುವ ನಂದಕುಮಾರ್ ರಾಷ್ಟ್ರ ಪ್ರಶಸ್ತಿಯ ರೂವಾರಿಗಳಾಗಿದ್ದಾರೆ.

ಸಾರ್ವಜನಿಕರು ಸುಲಭವಾಗಿ ಗ್ರಾಪಂಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆಯಲು ಅನುವಾಗುವಂತೆ ಮಂಡ್ಯ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ವೆಬ್‍ಸೈಟ್ ಬಿಡುಗಡೆ ಮಾಡಿದ ಕೀರ್ತಿ ನಗುವನಹಳ್ಳಿ ಗ್ರಾಪಂಗೆ ಸಲ್ಲುತ್ತದೆ. ಗ್ರಾಪಂ ಸಂಪನ್ಮೂಲದ 5 ಲಕ್ಷ ರೂ. ವೆಚ್ಚದಲ್ಲಿ ಇ-ಲೈಬ್ರರಿ ಸ್ಥಾಪನೆ, 14ನೇ ಹಣಕಾಸು ಯೋಜನೆ ಅನುದಾನ ಸಂಪೂರ್ಣ ಬಳಕೆ, ನರೇಗಾ, ಪಂಚಾಯಿತಿ ಸಂಪನ್ಮೂಲ ಕ್ರೋಢೀಕರಣ, ಗ್ರಾಪಂ ವತಿ ಯಿಂದ 3 ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸ್ವಚ್ಛ ಭಾರತ್ ಯೋಜನೆಯಡಿ ಪ್ಲಾಸ್ಟಿಕ್ ನಿಷೇಧ, ಒಣ ಮತ್ತು ಹಸಿ ಕಸ ಬೇರ್ಪಡಿಸಿ ನೀಡಲು ಪ್ರತಿ ಮನೆಗೂ ಉಚಿತ ಡಬ್ಬಗಳ ವಿತರಣೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಶವ ಸಾಗಿಸುವ ವಾಹನ ಖರೀದಿ, ಗ್ರಾಪಂ ಕಚೇರಿಗೆ ಸಂಪೂರ್ಣ ಸೋಲಾರ್ ವ್ಯವಸ್ಥೆ ಮಾಡಲಾಗಿದೆ. ಇದ ರಿಂದ ಪ್ರತಿ ತಿಂಗಳು ಸಾವಿರಾರು ರೂ. ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ. ಅಲ್ಲದೇ ಗ್ರಾಪಂ ವ್ಯಾಪ್ತಿಯಲ್ಲಿ 30 ಸೋಲಾರ್ ಸ್ಟ್ರೀಟ್ ಲೈಟ್ ಅಳವಡಿಕೆ ಮಾಡ ಲಾಗಿದೆ. ಈ ಎಲ್ಲಾ ಅಂಶಗಳು ಸೇರಿದಂತೆ ಹಲವು ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ನಗುವನಹಳ್ಳಿ ಗ್ರಾಪಂಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ ಎನ್ನಲಾಗಿದೆ.

ಶಾಸಕ ರವೀಂದ್ರ ಸಂತಸ: ನಗುವನಹಳ್ಳಿ ಗ್ರಾಪಂಗೆ ರಾಷ್ಟ್ರಪ್ರಶಸ್ತಿ ಲಭಿಸಿರುವುದಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಶ್ರೀರಂಗ ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಪ್ರಶಸ್ತಿ ಲಭಿಸಿತ್ತು. ಇದೀಗ ನಗುವನಹಳ್ಳಿ ಗ್ರಾಪಂಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಈ ಎರಡು ಪ್ರಶಸ್ತಿಗಳೂ ನನ್ನ ಅಧಿಕಾರವಧಿ ಯಲ್ಲೇ ದೊರೆತಿದ್ದು, ಶ್ರೀರಂಗಪಟ್ಟಣ ತಾಲೂಕು ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತಷ್ಟು ಶ್ರಮಿಸುವುದಾಗಿ ಇಳಿಸಿದ್ದಾರೆ.

ನಗುವನಹಳ್ಳಿ ಗಾಪಂಗೆ ರಾಷ್ಟ್ರಪ್ರಶಸ್ತಿ ಲಭಿಸಿರುವುದು ರಾಜ್ಯ ಹಾಗೂ ಮಂಡ್ಯ ಜಿಲ್ಲೆಗೆ ಹೆಮ್ಮೆಯಾಗಿದೆ. ನಗುವನಹಳ್ಳಿ ಗಾಪಂ ಮಾದರಿ ಪಂಚಾಯ್ತಿಯಾಗಿ ರೂಪು ಗೊಂಡಿದೆ. ಕಳೆದ ನವೆಂಬರ್‍ನಿಂದಲೇ ನಾವು ರಾಷ್ಟ್ರ ಪ್ರಶಸ್ತಿಗಾಗಿ ಪ್ರಯತ್ನಿಸಿದ್ದೆವು. ಮುಂದಿನ ದಿನಗಳಲ್ಲಿ ಮತಷ್ಟು ಗ್ರಾಪಂ ಗಳು ಅಭಿವೃದ್ಧಿ ಹೊಂದಿ ಪ್ರಶಸ್ತಿ ಪಡೆಯಲಿ ಎಂಬುದು ನನ್ನ ಆಶಯ ಎಂದು ಜಿಪಂ ಸಿಇಓ ಕೆ.ಯಾಲಕ್ಕಿಗೌಡ ತಿಳಿಸಿದ್ದಾರೆ.

ನಗುವನಹಳ್ಳಿ ಗ್ರಾಪಂಗೆ ರಾಷ್ಟ್ರಪ್ರಶಸ್ತಿ ಲಭಿಸÀಲು ಜಿಪಂ ಸಿಇಓ ಯಾಲಕ್ಕಿಗೌಡ, ಪಿಡಿಓ ಯೋಗೇಶ್, ಕಾರ್ಯದರ್ಶಿ ಶಿವ ಲಿಂಗಯ್ಯ, ಉಪಾಧ್ಯಕ್ಷೆ ಪ್ರೇಮಾ, ಸದಸ್ಯ ರಾದ ರಮೇಶ್, ಭಾಸ್ಕರ್, ಯೋಗೇಶ್, ನಾಗೇಂದ್ರ, ದೇವಮ್ಮ, ಧನಲಕ್ಷ್ಮಿ ಸೇರಿದಂತೆ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರ ಸಹ ಕಾರವೇ ಕಾರಣ ಎಂದು ನಗುವನಹಳ್ಳಿ ಗ್ರಾಪಂ ಅಧ್ಯಕ್ಷ ನಂದಕುಮಾರ್ ತಿಳಿಸಿದ್ದಾರೆ.

 

 

 

 

Translate »