ಪಾಂಡವಪುರದ ವಿವಿಧೆಡೆ ಕಾಯಕಯೋಗಿ ಸ್ಮರಣೆ
ಮಂಡ್ಯ

ಪಾಂಡವಪುರದ ವಿವಿಧೆಡೆ ಕಾಯಕಯೋಗಿ ಸ್ಮರಣೆ

April 27, 2020

ಪಾಂಡವಪುರ, ಏ.26- ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೇರಿದಂತೆ ವಿವಿಧೆಡೆ ಕಾಯಕಯೋಗಿ ಬಸವಣ್ಣ ನವರ 887ನೇ ಜಯಂತೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಮಿನಿವಿಧಾನಸೌಧದಲ್ಲಿ ಆಯೋ ಜಿಸಿದ್ದ ಕಾರ್ಯಕ್ರಮವನ್ನು ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಬಸವಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಬಸವಣ್ಣನವರ ತತ್ವ ಆದರ್ಶ ಮೈಗೂಡಿಸಿ ಕೊಂಡು ಮುನ್ನಡೆಯಬೇಕು ಎಂದರು.

ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೀ ಶ್ವರ ಮಠದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸರಳ ವಾಗಿ ಬಸವ ಜಯಂತಿ ಆಚರಿಸಲಾಯಿತು.

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶ್ರೀಗುರುಸಿದ್ದೇಶ್ವರ ಸ್ವಾಮೀಜಿ, ಬಸವಣ್ಣನವರು ಸಮಾಜದ ಸುಧಾ ರಣೆಗಾಗಿ ಶ್ರಮಿಸಿದ ಶ್ರಮಜೀವಿಗಳು. ಸಮಾಜದ ಏಳಿಗೆಗಾಗಿ ತಮ್ಮ ಜೀವನವÀನ್ನೇ ಮುಡುಪಾಗಿಟ್ಟರು. ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ಜನರಿಗೆ ಸಂಸ್ಕಾರ, ಸಂಸ್ಕøತಿ ಹಾಗೂ ಧರ್ಮ ಪ್ರಚಾರ ಬೋಧಿ ಸಿದರು. ಸಮಾಜದಲ್ಲಿ ಎಲ್ಲರೂ ಒಂದೇ ಎಂಬುದನ್ನು ತಿಳಿಸಿಕೊಟ್ಟರು. ಜಾತಿ ವ್ಯವಸ್ಥೆ ನಿರ್ಮೂಲನೆ ಹೋರಾಡಿದ ಮಹಾನ್ ಚೇತನ ಬಸವಣ್ಣನವರು. ಅವರನ್ನು ನಾವು ಕಳೆದುಕೊಂಡು 800 ವರ್ಷಗಳಾಗಿ ದ್ದರೂ, ನಾವು ಅವರನ್ನು ಸ್ಮರಿಸುತ್ತಿದ್ದೇವೆ ಎಂದರೆ ಅವರು ಸಮಾಜಕ್ಕೆ ಕೊಟ್ಟಿರುವ ಹಲವು ಕೊಡುಗೆಗಳೇ ಕಾರಣ ಎಂದರು.

ದೇಶದಲ್ಲಿ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಲಾಕ್‍ಡೌನ್ ಪಾಲನೆ ಮಾಡಿ, ಮನೆ ಯಲ್ಲಿಯೇ ಬಸವಣ್ಣನವರ ಜಯಂತಿ ಆಚರಿಸುವ ಮೂಲಕ ಬಸವಣ್ಣನವರನ್ನು ಸ್ಮರಿಸಬೇಕು ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಿರಂಜನ್‍ಬಾಬು, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಜಗ ದೀಶ್, ಮುಖಂಡರಾದ ಎಸ್.ಎ.ಮಲ್ಲೇಶ್, ದ್ಯಾವಪ್ಪ, ವಿಜಯಕುಮಾರ್, ಶಂಕರ್ ನಂಜಪ್ಪ, ನಂಜುಂಡಸ್ವಾಮಿ, ಸಿದ್ದಪ್ಪ, ಮಂಜುನಾಥ್, ಸೇರಿದಂತೆ ಹಲವರು ಇದ್ದರು.

Translate »