ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

June 8, 2020

ಚಾಮರಾಜನಗರ, ಜೂ.7- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಚಾಮ ರಾಜನಗರ, ಹರದನಹಳ್ಳಿ, ಸಂತೇಮರಳ್ಳಿ, ಮತ್ತು ಬೇಗೂರು ಉಪ ವಿಭಾಗಗಳ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಯನ್ನು ಜೂನ್ 9ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಬೇಗೂರು ವಿದ್ಯುತ್ ವಿತರಣಾ ಕೇಂದ್ರದ ಹಿರಿಕಾಟಿ, ನಿಟ್ರೆ, ಬೇಗೂರು, ವಾಟರ್ ಸಪ್ಲೈ, ಹೆಗ್ಗಡ ಹಳ್ಳಿ, ಮಂಚಳ್ಳಿ, ಎನ್.ಜಿ.ವೈ, ಶೆಟ್ಟಿಹಳ್ಳಿ, ದೇಸಿಪುರ, ಇಂಡಸ್ಟ್ರೀ ಯಲ್ ಮತ್ತು ಹೊರೆಯಾಲ ವ್ಯಾಪ್ತಿ ಹಾಗೂ ಚಂದಕವಾಡಿ ವಿದ್ಯುತ್ ವಿತರಣಾ ಕೇಂದ್ರದÀ ಹಿರಿಕೆರೆ, ಕಾಳಿಕಾಂಬ ಕಾಲೋನಿ, ಚಂದಕವಾಡಿ, ರೇಚಂಬಳ್ಳಿ, ಮಲ್ಲೇದೇವನಹಳ್ಳಿ, ನವೋದಯ, ಹೊಂಡರಬಾಳು ಮತ್ತು ಜ್ಯೋತಿ ಗೌಡನಪುರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬದನಗುಪ್ಪೆ ವಿದ್ಯುತ್ ವಿತರಣಾ ಕೇಂದ್ರದ ಬದನಗುಪ್ಪೆ, ಪಣ್ಯದಹುಂಡಿ, ಬೆಂಡರ ವಾಡಿ, ಕೆಲ್ಲಂಬಳ್ಳಿ, ಎನ್‍ಜೆವೈ, ಇಂಡಸ್ಟ್ರೀಯಲ್ ಏರಿಯಾ, ಕೆಇಡಿಪಿ 10 ಮತ್ತು 11ರಲ್ಲಿ ಹಾಗೂ ಹರವೆ ವಿದ್ಯುತ್ ವಿತರಣಾ ಕೇಂದ್ರದ ಮೂಡ್ನಾಕೂಡು, ಮುಕ್ಕಡಹಳ್ಳಿ, ಉಡಿಗಾಲ, ನಂಜದೇವನಪುರ, ಕಲ್ಪುರ, ದೇವಲಾಪುರ, ತಮ್ಮಡಹಳ್ಳಿ, ಎನ್‍ಜಿ.ವೈ, ಸಂತೇಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಹೊನ್ನೂರು, ಕುದೇರು, ಉಮ್ಮತ್ತೂರು, ಸಂತೇಮರಳ್ಳಿ, ಕೆಂಪನಪುರ, ನವಿಲೂರು, ದುಗ್ಗಟ್ಟಿ, ಆಲ್ದೂರು, ಅಂಬಳೆ, ಮಂಗಲ, ಚುಂಗಡಿಪುರ ಮತ್ತು ಅವಿನ್ ಗ್ರೀನ್ ಸೋಲಾರ್‍ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Translate »