ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಚಾಲನೆ
ಮೈಸೂರು

ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಚಾಲನೆ

June 8, 2020

ಮೈಸೂರು, ಜೂ.7(ಪಿಎಂ)- ಮೈಸೂರು ಮಹಾನಗರ ಪಾಲಿಕೆ 14ನೇ ಹಣಕಾಸು ಯೋಜನೆ ಅನುದಾನದಡಿ 12.30 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್ 25ರಲ್ಲಿ ನಿರ್ಮಿಸಲಿರುವ ಶುದ್ಧ ಕುಡಿಯುವ ನೀರಿನ ಘಟ ಕದ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು.

ತಿಲಕ್ ನಗರದ ಫರೂಕಿಯಾ ಡೆಂಟಲ್ ಕಾಲೇಜಿನ ಪಕ್ಕದ ನಗರ ಪಾಲಿಕೆ ನಿವೇಶನ ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ (ಆರ್‍ಓ ಪ್ಲಾಂಟ್) ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದ ಶಾಸಕ ಎಲ್.ನಾಗೇಂದ್ರ, ವಾರ್ಡಿನ ಪಾಲಿಕೆ ಸದಸ್ಯ ಆರ್.ರಂಗಸ್ವಾಮಿ ವಾರ್ಡಿನ ಅಭಿ ವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನದ ಫಲವಾಗಿ ಈ ಆರ್‍ಓ ಪ್ಲಾಂಟ್ ನಿರ್ಮಾ ಣಕ್ಕೆ ಚಾಲನೆ ದೊರೆತಿದೆ. ಇದೇ ಭಾಗದಲ್ಲಿ ಮತ್ತೊಂದು ಆರ್‍ಓ ಪ್ಲಾಂಟ್ ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಬೋರ್‍ವೆಲ್ ವ್ಯವಸ್ಥೆಯೊಂದಿಗೆ 14×16 ಅಡಿ ವಿಸ್ತೀರ್ಣದಲ್ಲಿ ಸದರಿ ಆರ್‍ಓ ಪ್ಲಾಂಟ್ ನಿರ್ಮಿಸಲಾಗುತ್ತಿದೆ. ವಾರ್ಡಿನ ಪಾಲಿಕೆ ಸದಸ್ಯ ಆರ್.ರಂಗಸ್ವಾಮಿ, ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಅಭಿಯಂತರ ನಾಗರಾಜ್ ಮೂರ್ತಿ, ಸಹಾಯಕ ಅಭಿಯಂತರ ಜಿ.ಪ್ರದೀಪ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

Translate »