ಮೈಮುಲ್ ನೇಮಕ ಪ್ರಕ್ರಿಯೆಗೆ ಹೊಸದಾಗಿ ಚಾಲನೆ ನೀಡಿ: ಸಾರಾ ಆಗ್ರಹ
ಮೈಸೂರು

ಮೈಮುಲ್ ನೇಮಕ ಪ್ರಕ್ರಿಯೆಗೆ ಹೊಸದಾಗಿ ಚಾಲನೆ ನೀಡಿ: ಸಾರಾ ಆಗ್ರಹ

June 8, 2020

ಮೈಸೂರು, ಜೂ.7(ಆರ್‍ಕೆಬಿ)- ಮೈಮುಲ್ ನೇಮ ಕಾತಿ ಪ್ರಕ್ರಿಯೆ ಅಕ್ರಮವಾಗಿದೆ. ಅದನ್ನು ರದ್ದುಗೊಳಿಸಿ ನೇಮಕಾತಿಗೆ ಹೊಸದಾಗಿ ಚಾಲನೆ ನೀಡಿ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ.

ಮೈಸೂರಿನ ರಮಾ ವಿಲಾಸ ರಸ್ತೆಯಲ್ಲಿನ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರು ವುದರಿಂದ ಮೊದಲು ತನಿಖೆ ಪೂರ್ಣಗೊಳಿಸ ಬೇಕು. ಬಳಿಕ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಲೋಪ ಸರಿಪಡಿಸದೇ ನೇಮಕ ಪ್ರಕ್ರಿಯೆ ನಡೆಸುವುದು ಸರಿಯಲ್ಲ ಎಂದರು.

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ದಲ್ಲಿಯೂ ವಿವಿಧ ಹುದ್ದೆಗಳ ನೇಮಕದಲ್ಲಿ ಮೀಸ ಲಾತಿ ನಿಯಮ ಉಲ್ಲಂಘನೆ, ಸ್ವಜನ ಪಕ್ಷಪಾತ ನಡೆದಿರುವುದಾಗಿ ಜಿಲ್ಲಾಧಿಕಾರಿಯೇ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅಲ್ಲಿ ಪರೀಕ್ಷಾ ಅಕ್ರಮ ನಡೆಸಿದ ಏಜೆನ್ಸಿಗೇ ಮೈಮುಲ್‍ನ ನೇಮಕದ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಆಕ್ಷೇಪಿಸಿದರು.

ಯಾರ ಒತ್ತಡಕ್ಕೂ ಮಣಿಯದೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಸಲಹೆ ನೀಡಿ ದರು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಕೆ.ಟಿ. ಚೆಲುವೇಗೌಡ, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »