ಮೈಸೂರು, ಜೂ. 7- ಜಂಟಿ ನಿರ್ದೇಶಕರ ಕಾರ್ಯಾಲಯ ವತಿಯಿಂದ 2020ನೇ ಜೂನ್ ಮಾಹೆಯಲ್ಲಿ ಅನ್ನಭಾಗ್ಯ ಯೋಜನೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ವಿತರಿಸಬೇಕಾದ ಪಡಿತರ ಪ್ರಮಾಣದ ವಿವರವನ್ನು ಬಿಡು ಗಡೆಗೊಳಿಸಿದೆ. ಜೂನ್ ಮಾಹೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ವರ್ಗದ ವರಿಗೆ ರೆಗ್ಯುಲರ್ (ರಾಜ್ಯ) ಹಂಚಿಕೆ ಯಂತೆ ಪ್ರತಿಕಾರ್ಡಿಗೆ 35 ಕೆ.ಜಿ. ಅಕ್ಕಿ. ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಮತ್ತು ಪಿ.ಎಂ.ಜಿ. ಕೆ.ಎ.ವೈ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 2 ಕೆ.ಜಿ ತೊಗರಿಬೇಳೆಯನ್ನು ಉಚಿತ ವಾಗಿ ನೀಡಲಾಗುವುದು. ಆದ್ಯತಾ ಪಡಿತರ ಚೀಟಿ ವರ್ಗದವರಿಗೆ ರೆಗ್ಯೂಲರ್ ಹಂಚಿಕೆ ಯಂತೆ ಪ್ರತಿ ಸದಸ್ಯನಿಗೆ 5 ಕೆ.ಜಿ. ಅಕ್ಕಿ ಮತ್ತು ಪ್ರತಿ ಪಡಿತರ ಚೀಟಿಗೆ 2 ಕೆ.ಜಿ ಗೋಧಿ. ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಮತ್ತು ಪ್ರತಿ ಪಡಿತರ ಚೀಟಿಗೆ 2 ಕೆ.ಜಿ ತೊಗರಿಬೇಳೆಯನ್ನು ಉಚಿತವಾಗಿ ಪಡಿತರ ನೀಡುವ ಪ್ರಮಾಣವಾಗಿದೆ.
ಆದ್ಯತಾ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿರುವ ವಿತರಣೆಗೆ ಬಾಕಿ ಇರುವ ಅರ್ಜಿ ದಾರ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ 10 ಕೆ.ಜಿ ಅಕ್ಕಿ. ವಲಸೆ ಕಾರ್ಮಿಕ/ಪಡಿತರ ಚೀಟಿ ಪಡೆಯದೆ ಇರುವ ಪ್ರತಿ ಫಲಾನುಭವಿಗೆ 2020-ಮೇ ಮತ್ತು ಜೂನ್ ಮಾಹೆಗಳಲ್ಲಿ ಪ್ರತಿ ಫಲಾನುಭವಿಗೆ ಪ್ರತಿ ಮಾಹೆ 5 ಕೆ.ಜಿ (2 ಮಾಹೆಗೆ ಒಟ್ಟು 10 ಕೆ.ಜಿ) ಲಭ್ಯತೆಗೆ ಅನುಸಾರ 2 ಕೆ.ಜಿ ಕಡಲೆಕಾಳನ್ನು ವಿತರಿಸಲಾಗುವುದು. ಪ್ರತಿ ಕೆ.ಜಿ.ಗೆ 15 ರೂ. ನಿಗದಿಸ ಲಾಗಿದೆ. ಆದ್ಯತೇತರ ಪಡಿತರ ಚೀಟಿ ಹೊಂದಿದ ಏಕ ವ್ಯಕ್ತಿ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ 2 ಮತ್ತು ಮೇಲ್ಪಟ್ಟ ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ. ಅಕ್ಕಿಯನ್ನು ನೀಡ ಲಾಗುವುದು. ಪ್ರತಿ ಕೆ.ಜಿ.ಗೆ 15 ರೂ ನಿಗದಿಪಡಿಸಲಾಗಿದೆ. ಪಡಿತರ ವಿತರಣೆ ಪ್ರಮಾಣ ದಲ್ಲಿ ಕಡಿಮೆ ನೀಡಿದ ಬಗ್ಗೆ ದೂರುಗಳು ಇದ್ದಲ್ಲಿ, ಸಾರ್ವಜನಿಕರು ಮೈಸೂರು ನಗರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದಲ್ಲಿರುವ ಸಹಾಯಕ ನಿರ್ದೇ ಶಕರನ್ನು ಸಂಪರ್ಕಿಸುವುದು. ಅನೌಪಚಾರಿಕ ಪಡಿತರ ಪ್ರದೇಶ ಮೈಸೂರು ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಕಚೇರಿಯ ಆಹಾರ ವಿಭಾಗದ ಕಾರ್ಯನಿರ್ವಾಹಕ ಸಿಬ್ಬಂದಿಗಳನ್ನು ಸಂಪರ್ಕಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.