ಹಾಸ್ಟೆಲ್‍ಗಳಲ್ಲಿ ಬಳಸದೇ ಉಳಿದ ದಿನಸಿ ಬಡವರಿಗೆ ನೀಡಲು ತಾಪಂ ನಿರ್ಧಾರ
ಮೈಸೂರು

ಹಾಸ್ಟೆಲ್‍ಗಳಲ್ಲಿ ಬಳಸದೇ ಉಳಿದ ದಿನಸಿ ಬಡವರಿಗೆ ನೀಡಲು ತಾಪಂ ನಿರ್ಧಾರ

June 8, 2020

ಮೈಸೂರು,ಜೂ.7(ಎಂಕೆ)-ಲಾಕ್‍ಡೌನ್ ಹಿನ್ನೆಲೆ ಮೈಸೂರು ತಾಲೂಕು ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಬಳಕೆ ಯಾಗದೆ ಉಳಿದಿರುವ ದಿನಸಿ ಪದಾರ್ಥ ಗಳನ್ನು ಸದ್ಯ ಕಷ್ಟದಲ್ಲಿರುವ ಕಡು ಬಡವರಿಗೆ ವಿತರಿಸಲು ತಾಪಂ ಸಭಾಂಗಣದಲ್ಲಿ ನಡೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಲಾಕ್‍ಡೌನ್ ಪರಿಣಾಮ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಸಾಕಷ್ಟು ದಿನಸಿ ಪದಾರ್ಥ ಗಳು ಬಳಕೆಯಾಗದೆ ಉಳಿದಿವೆ.

ಇದೇ ವೇಳೆ 2020-21ನೇ ಸಾಲಿನ ಇಲಾಖಾವಾರು ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಕ್ರಿಯಾ ಯೋಜನೆಗೆ ತಾಪಂ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ತಾಲೂಕಿನಲ್ಲಿ ಕೋವಿಡ್-19 ಹಿನ್ನೆಲೆ ತೆಗೆದು ಕೊಂಡಿರುವ ಕ್ರಮಗಳು, ಬಿತ್ತನೆ ಬೀಜ ವಿತ ರಣೆ, ಅಂಗನವಾಡಿ ಕೇಂದ್ರಗಳ ಪರಿ ಶೀಲನೆ, ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಇನ್ನಿತರೆ ವಿಷಯಗಳನ್ನು ಕುರಿತು ಚರ್ಚಿಸಲಾಯಿತು.

ತಾಪಂ ಸದಸ್ಯ ಕೆ.ಹನುಮಂತು ಮಾತ ನಾಡಿ, ಲಾಕ್‍ಡೌನ್ ಜಾರಿಯಾದಾಗಿ ನಿಂದ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ತರ ಕಾರಿ ಬೆಲೆ ಕುಸಿದು ನಷ್ಟ ಅನುಭವಿಸಿದ್ದಾರೆ. ಅಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.

ಲಾಕ್‍ಡೌನ್‍ನಿಂದಾಗಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಬದಲು ಮಕ್ಕಳಿಗೆ ಅಕ್ಕಿ ವಿತರಣೆ ಮಾಡಲಾಗಿದೆ. ಕೆಲ ಪೋಷಕರು ಕೊರೊನಾ ಭಯ ದಿಂದ ಈ ವರ್ಷ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಬೇಡ ಎನ್ನುತ್ತಿದ್ದಾರೆ. ಅಕಸ್ಮಾತ್ ಒಬ್ಬ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡರೆ ಶಾಲೆಯನ್ನೇ ಮುಚ್ಚ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳ ಬೇಕು ಎಂದು ಸಲಹೆ ನೀಡಿದರು.

ತಾಪಂ ಇಓ ಕೃಷ್ಣಕುಮಾರ್ ಮಾತ ನಾಡಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಶಂಕರ್, ಸದಸ್ಯ ರಾದ ರೇವಣ್ಣ, ಮುದ್ದರಾಮೇಗೌಡ, ತುಳಸಿ, ಮಂಜುನಾಥ್ ಮತ್ತಿತರರಿದ್ದರು.

Translate »