ಇಂದಿನಿಂದ ಮೈಸೂರಲ್ಲಿ 200 ಸಿಟಿ ಬಸ್ ಸಂಚಾರ ಸಾಧ್ಯತೆ
ಮೈಸೂರು

ಇಂದಿನಿಂದ ಮೈಸೂರಲ್ಲಿ 200 ಸಿಟಿ ಬಸ್ ಸಂಚಾರ ಸಾಧ್ಯತೆ

June 8, 2020

ಮೈಸೂರು, ಜೂ.7(ಆರ್‍ಕೆ)-ಲಾಕ್ ಡೌನ್ ನಿರ್ಬಂಧ ಮಾರ್ಗಸೂಚಿ ಮತ್ತಷ್ಟು ಸಡಿಲಗೊಂಡಲ್ಲಿ ಜೂನ್ 8ರಿಂದ ಮೈಸೂ ರಲ್ಲಿ ನಗರ ಸಾರಿಗೆ ಬಸ್ಸುಗಳ ಸಂಚಾರ ಹೆಚ್ಚಳವಾಗುವ ಸಾಧ್ಯತೆ ಇದೆ.

ಲಾಕ್‍ಡೌನ್ ಸಡಿಲಿಸಿ ಬಸ್ಸು, ರೈಲು ಸಂಚಾರಕ್ಕೆ (ರಾಜ್ಯದೊಳಗೆ) ಅನುಮತಿ ನೀಡಿದ ನಂತರ ಮೈಸೂರು ನಗರದಲ್ಲಿ ದಿನಕ್ಕೆ 40ರಿಂದ 80 ಸಿಟಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದವು. ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬಸ್‍ಗಳ ಸಂಖ್ಯೆ ಯನ್ನು ಕ್ರಮೇಣ ಹೆಚ್ಚಳ ಮಾಡುತ್ತಾ ಬರ ಲಾಗುತ್ತಿದೆ ಎಂದು ವಿಭಾಗೀಯ ನಿಯಂ ತ್ರಣಾಧಿಕಾರಿ ನಾಗರಾಜು ತಿಳಿಸಿದರು.

ಈಗ ದಿನಕ್ಕೆ 130 ಬಸ್ಸುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಜೂ.8ರಿಂದ ಹೋಟೆಲ್, ರೆಸ್ಟೋರೆಂಟ್, ಮಾಲ್, ದೇವ ಸ್ಥಾನ, ಮೃಗಾಲಯ, ಅರಮನೆಯಂತಹ ಪ್ರವಾಸಿ ತಾಣಗಳು ಆರಂಭವಾದಲ್ಲಿ ಜನರು ಓಡಾಟ ಆರಂಭಿಸುವುದರಿಂದ ಬೇಡಿಕೆಗೆ ತಕ್ಕಂತೆ ನಾವೂ ಹೆಚ್ಚು ಬಸ್ಸುಗಳನ್ನು ಒದಗಿಸಬೇಕಾಗುತ್ತದೆ ಎಂದರು.

ಸೋಮವಾರದಿಂದ ದಿನಕ್ಕೆ 200 ಬಸ್ಸು ಗಳಿಗೆ ಬೇಡಿಕೆ ಬರಬಹುದೆಂದು ನಿರೀಕ್ಷಿಸ ಲಾಗಿದ್ದು, ಸ್ಯಾನಿಟೈಸ್ ಮಾಡಿಸಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದ ನಾಗರಾಜು, ಲಾಕ್‍ಡೌನ್‍ಗೂ ಮುಂಚೆ ಸಾಮಾನ್ಯ ದಿನ ಗಳಲ್ಲಿ ದಿನಕ್ಕೆ 426 ಬಸ್ಸುಗಳು ಸಂಚರಿಸು ತ್ತಿದ್ದವು. ಈಗ ಒಂದು ಬಸ್ಸಿನಲ್ಲಿ ಕೇವಲ 30 ಮಂದಿ ಪ್ರಯಾಣಿಸಲು ಅವಕಾಶ ನೀಡಿ ರುವುದರಿಂದ ನಿಗಮಕ್ಕೆ ನಷ್ಟ ಉಂಟಾ ಗುತ್ತಿದೆ ಎಂದು ತಿಳಿಸಿದರು.

ಅದರಲ್ಲೂ ಈಗ ಒಂದು ಬಸ್ಸಿನಲ್ಲಿ 10ರಿಂದ 15 ಮಂದಿ ಮಾತ್ರ ಪ್ರಯಾ ಣಿಸುತ್ತಿದ್ದಾರೆ. 30 ಮಂದಿ ಭರ್ತಿ ಆಗು ವವರೆಗೆ ಕಾಯದೇ ಇದ್ದಷ್ಟು ಪ್ರಯಾಣಿಕ ರಿಗೆ ಸೇವೆ ಒದಗಿಸುವ ಅನಿವಾರ್ಯತೆ ಇದೆ ಎಂದು ವಿವರಿಸಿದರು.

Translate »