ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಬದಲು ಗಿಡ ನೆಟ್ಟು ಪೋಷಿಸಿ
ಮೈಸೂರು

ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಬದಲು ಗಿಡ ನೆಟ್ಟು ಪೋಷಿಸಿ

June 8, 2020

ಮೈಸೂರು, ಜೂ.7(ಆರ್‍ಕೆಬಿ)- ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ `ಸಮರ್ಥನಂ’ ನಿಂದ ವಿಜಯನಗರ 4ನೇ ಹಂತದ ಮುಡಾ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಂಗವಿಕ ಲರ ಕಲ್ಯಾಣದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ, ಏರುತ್ತಿರುವ ತಾಪಮಾನದ ನಿಯಂತ್ರಣಕ್ಕೆ ವಿಶ್ವದ ವಿಜ್ಞಾನಿಗಳು ಪರಿಹಾರೋಪಾಯ ಹುಡುಕುತ್ತಲೇ ಇದ್ದಾರೆ. ಆದರೆ, ಜನಸಾಮಾ ನ್ಯರು ಸಹ ಈ ದಿಶೆಯಲ್ಲಿ ಪರಿಸರದ ಕುರಿತು ಕಾಳಜಿ ಹೊಂದಬೇಕಿದೆ ಎಂದರು.

ಸಾಹಿತಿ ಸತೀಶ್ ಜವರೇಗೌಡ ಮಾತನಾಡಿದರು. ಸಮರ್ಥನಂನ ಮೈಸೂರು ವಿಭಾಗದ ಸಂಯೋಜಕ ಶಿವರಾಜು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾವೇರಪ್ಪ, ಸಿದ್ಧಾರೂಢ, ಅಖಿತ್, ಪಾಂಡು, ಧನಂಜಯ್, ಉಮೇಶ್ ಇನ್ನಿತರರಿದ್ದರು.

Translate »