ಮೈಸೂರು ನಗರ ನೂತನ ಡಿಸಿಪಿ ಎಂ.ಎಸ್.ಗೀತಾ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ನಗರ ನೂತನ ಡಿಸಿಪಿ ಎಂ.ಎಸ್.ಗೀತಾ ಅಧಿಕಾರ ಸ್ವೀಕಾರ

June 8, 2020

ಮೈಸೂರು, ಜೂ.7(ಆರ್‍ಕೆ)- ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾ ಗದ ಡಿಸಿಪಿಯಾಗಿ ಎಂ.ಎಸ್.ಗೀತಾ ಅಧಿಕಾರ ವಹಿಸಿ ಕೊಂಡರು. ಮೈಸೂರಿನ ನಜರ್‍ಬಾದಿನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಸಿಟಿಸಿ ದಾಖಲಾತಿಗಳಿಗೆ ಸಹಿ ಮಾಡುವ ಮೂಲಕ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಅವರಿಂದ ಗೀತಾ ಅಧಿಕಾರ ವಹಿಸಿಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಸಂಚಾರ ಸುಗಮಗೊಳಿಸಿ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಾಗರಿಕರಿಗೆ ಜಾಗೃತಿ ಮೂಡಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು. ಅದೇ ರೀತಿ ಅಪರಾಧ ಪ್ರಕರಣಗಳ ತಡೆಯುವುದು ಮತ್ತು ಪತ್ತೆ ಕಾರ್ಯಕ್ಕೆ ಒತ್ತು ನೀಡುವುದು ಅತ್ಯವಶ್ಯವಿದೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರು ನಾಗರಿಕರಿಗಾಗಿ ಸುಗಮ ಸಂಚಾರ ವ್ಯವಸ್ಥೆ ಒದಗಿಸಲು ಪ್ರಯತ್ನಿಸುವುದಾಗಿಯೂ ಗೀತಾ ಅವರು ತಿಳಿಸಿದರು.

Translate »