`ಅಂಬಾರಿ’ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು
ಮೈಸೂರು

`ಅಂಬಾರಿ’ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು

October 22, 2021

ಮೈಸೂರು,ಅ.೨೧(ಆರ್‌ಕೆ)-`ಅಂಬಾರಿ’ ಡಬಲ್ ಡೆಕ್ಕರ್ ಬಸ್ಸಿನ ಮೇಲೆ ದುಷ್ಕರ್ಮಿ ಗಳು ಕಲ್ಲು ತೂರಿರುವ ಘಟನೆ ನಿನ್ನೆ (ಬುಧವಾರ) ಸಂಜೆ ಬಂಬೂ ಬಜಾರ್ ಬಳಿ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದಿದೆ.

ಪ್ರವಾಸಿಗರನ್ನು ಹೈವೇ ಸರ್ಕಲ್ ಕಡೆಯಿಂದ ಆಯುರ್ವೇದ ಕಾಲೇಜು ಸರ್ಕಲ್ ಕಡೆಗೆ ಕರೆತರು ತ್ತಿದ್ದಾಗ, ಕೆಲ ಪುಂಡರು ಬಸ್ಸಿನ ಟಾಪ್ ಫ್ಲೋರ್ ನತ್ತ ಕಲ್ಲು ತೂರಿದ್ದಾರೆ. ಅದೃಷ್ಟವಶಾತ್ ಪ್ರಯಾಣ ಕÀರಿಗೆ ಕಲ್ಲು ತಗುಲಿಲ್ಲವಾದರೂ, ಬಸ್ಸಿನ ಕಿಟಕಿ ಗಾಜೊಂದು ಬಿರುಕು ಬಿಟ್ಟಿದೆ ಎಂದು ಕೆಎಸ್‌ಟಿಡಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಮಂಡಿ ಠಾಣೆಗೆ ಭೇಟಿ ನೀಡಿ ಬಸ್ಸಿಗೆ ಕಲ್ಲು ತೂರಿ ರುವ ಬಗ್ಗೆ ದೂರು ನೀಡಿದ್ದು, ಬಸ್ ಸಂಚಾರ ವೇಳೆ ಇಂತಹ ಘಟನೆ ನಡೆಯ ದಂತೆ ಕ್ರಮ ವಹಿಸಿ ಸೂಕ್ತ ರಕ್ಷಣೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಮಂಡಿ ಠಾಣೆ ಪೊಲೀಸರು, ಅಂಬಾರಿ ಡಬಲ್ ಡೆಕ್ಕರ್ ಬಸ್ ಸಂಚರಿಸುವ ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ನಿಗಾ ವಹಿಸಲು ನಿರ್ಧರಿಸಿದ್ದು, ಬಸ್ಸಿನ ಚಾಲಕರು ಎಚ್ಚರದಿಂದಿರುವAತೆ ಕೆಎಸ್‌ಟಿಡಿಸಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Translate »