ಆನೆಯೊಂದಿಗೆ ಕಾದಾಟ: ಗಂಭೀರವಾಗಿ ಗಾಯಗೊಂಡ ಹುಲಿ ಸೆರೆ
Uncategorized

ಆನೆಯೊಂದಿಗೆ ಕಾದಾಟ: ಗಂಭೀರವಾಗಿ ಗಾಯಗೊಂಡ ಹುಲಿ ಸೆರೆ

October 22, 2021

ಮೈಸೂರು,ಅ.೨೧(ಎಂಟಿವೈ)-ಹುಲಿಯೊAದು ಗಜರಾಜನೊಂದಿಗೆ ಕಾದಾಡಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದು, ಗಾಯಗೊಂಡಿರುವ ೭ ವರ್ಷದ ಗಂಡು ಹುಲಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿ ರುವ ಮೃಗಾಲಯದ ಪುನರ್ವತಿ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯದಲ್ಲಿ ಗಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಬುಧವಾರ ಗಾಯ ಗೊಂಡಿದ್ದ ಹುಲಿಯೊಂದು ಗಸ್ತು ತಿರುಗುತ್ತಿದ್ದ ಸಿಬ್ಬಂದಿಗಳ ಕಣ ್ಣಗೆ ಬಿದ್ದಿತು. ಸರಹದ್ದಿಗಾಗಿ ಬೇರೊಂದು ಹುಲಿಯೊಂದಿಗೆ ಕಾದಾಡಿ ಗಾಯಗೊಂಡಿರಬೇಕೆAದು ಶಂಕಿಸಿ ಅದರ ಚಲನ-ವಲನ ಗಮನಿಸಲು ಕ್ಯಾಮರಾ ಟ್ರಾಪ್ ಅಳವಡಿಸಲಾಗಿತ್ತು.
೨೪ ಗಂಟೆಯಿAದಲೂ ಒಂದೇ ಸ್ಥಳದಲ್ಲಿದ್ದು, ನಿತ್ರಾಣಗೊಂಡಿ ದ್ದನ್ನು ಕಂಡು ಅದನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ತೀರ್ಮಾ ನಿಸಿ ದೆಹಲಿಯ ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ತಿಳಿಸಿ, ಅನುಮತಿ ಪಡೆದು ಗಾಯಗೊಂಡಿದ್ದ ಹುಲಿ ರಕ್ಷಣೆಯ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಯಿತು.

ಸೊಂಟ, ಪಕ್ಕೆಲುಬು, ಮುಖಕ್ಕೆ ಗಂಭೀರವಾದ ಗಾಯಗಳಾಗಿ ಮೇಲೇಳಲಾಗದೆ ನರಳಾಡುತ್ತಿದ್ದ ಹುಲಿ ಹಸಿವಿನಿಂದಲೂ ಕಂಗೆ ಟ್ಟಿತ್ತು. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಎಸ್.ಆರ್. ನಟೇಶ್, ಪಶುವೈದ್ಯರಾದ ಡಾ, ವಾಸಿಂ ಮಿರ್ಜಾ ಹಾಗೂ ಡಾ.ಮುಜೀಬ್ ಅವರೊಂದಿಗೆ ಕಾರ್ಯಾಚರಣೆಗೆ ಮುಂದಾ ದರು. ಒಂದೇ ಸ್ಥಳದಲ್ಲಿ ಮಲಗಿದ್ದ ಹುಲಿಗೆ ಮಧ್ಯಾಹ್ನ ೧೨.೩೦ ರಷ್ಟರಲ್ಲಿ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಪ್ರಜ್ಞೆ ತಪ್ಪಿದ ಬಳಿಕ ಹುಲಿಯನ್ನು ಬೋನಿನಲ್ಲಿಟ್ಟು ಪ್ರಥಮ ಚಿಕಿತ್ಸೆ ನೀಡಿ ಪ್ರಜ್ಞೆ ಬರುವಂತೆ ಮಾಡಲಾಯಿತು. ಗಂಭೀರವಾಗಿ ಗಾಯಗೊಂಡಿ ರುವ ಹುಲಿ ಚೇತರಿಸಿಕೊಳ್ಳುವುದು ಕಷ್ಟಸಾಧ್ಯವಾಗಿರುವುದರಿಂದ ತುರ್ತು ಚಿಕಿತ್ಸೆಗಾಗಿ ಅದನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಕರೆತರಲಾಯಿತು. ಸಂಜೆ ೪ ಗಂಟೆಗೆ ಹುಲಿ ಪುನರ್ವತಿ ಕೇಂದ್ರ ತಲುಪಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ಹಸಿವಿನಿಂದ ಕಂಗೆಟ್ಟಿದ್ದ ಹುಲಿಗೆ ಕೋಳಿ ಮಾಂಸ ಹಾಗೂ ಗೋ ಮಾಂಸ ನೀಡಲಾಗಿದ್ದು, ಅದನ್ನು ಹುಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸಿದೆ. ಕಾರ್ಯಾಚರಣೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಎಸ್.ಆರ್. ನಟೇಶ್, ಬಂಡೀಪುರ ಉಪವಿಭಾಗದ ಎಸಿಎಫ್ ಸುಮಿತ್‌ಕುಮಾರ್ ಎಸ್. ಪಾಟೀಲ್, ಎನ್‌ಟಿಸಿಎ ಪ್ರತಿನಿಧಿ ಹಾಗೂ ವನ್ಯಜೀವಿ ಪರಿಪಾಲಕಿ ಕೃತಿಕಾ ಆಲನಹಳ್ಳಿ, ಆರ್‌ಎಫ್‌ಓ ಎನ್.ಪಿ. ನವೀನ್‌ಕುಮಾರ್, ಸ್ಥಳೀಯ ಗ್ರಾಪಂ ಸದಸ್ಯ ನಾಗರಾಜು ಇತರರು ಉಪಸ್ಥಿತರಿದ್ದರು.

Translate »