ಸಾರ್ವಜನಿಕ ರಸ್ತೆ ಮುಚ್ಚಿದ ಭೂ ಮಾಲೀಕ; ನಿವಾಸಿಗಳ ಪ್ರತಿಭಟನೆ
ಮೈಸೂರು

ಸಾರ್ವಜನಿಕ ರಸ್ತೆ ಮುಚ್ಚಿದ ಭೂ ಮಾಲೀಕ; ನಿವಾಸಿಗಳ ಪ್ರತಿಭಟನೆ

June 30, 2021

ಮೈಸೂರು, ಜೂ.29(ಎಂಟಿವೈ)- ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಮುಚ್ಚಿದ್ದಾರೆ ಎಂದು ಆರೋಪಿಸಿ ಕಸ್ತೂರಿ ಕನ್ನಡ ವೇದಿಕೆ ಹಾಗೂ ಮೈಸೂರು ಕನ್ನಡ ವೇದಿಕೆ ನೇತೃತ್ವದಲ್ಲಿ ಮಹದೇವ ಪುರ ನಿವಾಸಿಗಳು ಮುಚ್ಚಿದ ರಸ್ತೆ ಬಳಿಯೇ ಮಂಗಳವಾರ ಪ್ರತಿಭಟನೆ ನಡೆಸಿದರು.
ಮೈಸೂರು ತಾಲೂಕಿನ ಮಹದೇವಪುರದಿಂದ ಮಾನಂದವಾಡಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಿದ್ದ ರಸ್ತೆಯನ್ನು ತಮ್ಮ ಜಮೀನಿಗೆ ಸೇರಿಸಿಕೊಂಡಿರುವ ಖಾಸಗಿ ವ್ಯಕ್ತಿ ರಸ್ತೆ ಇರುವೆಡೆ ಮಣ್ಣು ತುಂಬಿಸಿದ್ದಾರೆ. ಇದರಿಂದ ಮಹದೇವಪುರ ಗ್ರಾಮಸ್ಥರಿಗೆ ಸಂಪರ್ಕ ರಸ್ತೆಯೇ ಇಲ್ಲದಂತಾಗಿದ್ದು, ಈಗ ಬಳಸು ಮಾರ್ಗ ದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 50 ವರ್ಷಗಳಿಂದ ಸ್ಥಳೀಯರು ಬಳಸುತ್ತಿದ್ದ ರಸ್ತೆ ಯನ್ನೇ ರಾತ್ರೋರಾತ್ರಿ ಮುಚ್ಚಿ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮದ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಬಿಡಿಸಿ ಕೊಡಬೇಕು. ಹಾಳಾಗಿರುವ ರಸ್ತೆಯನ್ನು ಭೂ ಮಾಲೀಕರಿಂದಲೇ ದುರಸ್ತಿ ಮಾಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಸ್ತೂರಿ ಕನ್ನಡ ವೇದಿಕೆ ಸಂಚಾಲಕ ಕಪಿನಿಗೌಡ, ಗ್ರಾಪಂ ಮಾಜಿ ಸದಸ್ಯ ಶ್ರೀಕಂಠ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮಾದೇವ, ಸಚಿನ್, ನಾಗರಾಜು ಕಿರಣ್‍ಕುಮಾರ್, ಬೋರಯ್ಯ, ಸತ್ಯರಾಜು, ಮಹ ದೇವಪುರದ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.

ಭೂ ಮಾಲೀಕರ ವಾದ: ಗ್ರಾಮಕ್ಕೆ ಸಂಪರ್ಕ ಕಲ್ಪಿ ಸುವ ರಸ್ತೆಗೇ ಸೇರಿಕೊಂಡಂತೆ ಒಳಚರಂಡಿ, ಕುಡಿ ಯುವ ನೀರಿನ ಪೈಪ್‍ಲೈನ್, ವಿದ್ಯುತ್ ಮಾರ್ಗ, ಮಳೆ ನೀರು ಚರಂಡಿಯನ್ನು ಸರ್ಕಾರದ ಅನುದಾನದಿಂದಲೇ ನಿರ್ಮಿಸಲಾಗಿತ್ತು. ಈ ಸಾರ್ವಜನಿಕ ರಸ್ತೆಯ ಪಕ್ಕದಲ್ಲೇ ಜಮೀನು ಹೊಂದಿರುವ ವ್ಯಕ್ತಿ, ಸಂಪರ್ಕ ರಸ್ತೆಯನ್ನು ಮುಚ್ಚಿ ನಿವಾಸಿಗಳು ಸರಾಗವಾಗಿ ಸಂಚರಿಸದಂತೆ ಮಾಡಿ ದ್ದಾರೆ. ಅಲ್ಲದೇ, ಜಮೀನಿನ ಮಧ್ಯೆ ರಸ್ತೆ ಬಿಡುತ್ತೇವೆ ಎನ್ನುತ್ತಾರೆ. ಅಲ್ಲದೆ `ರಸ್ತೆ ಇರುವ ಜಾಗ ನಮಗೆ ಸೇರಿದ್ದು. ನಕ್ಷೆಯಲ್ಲೂ ಹಾಗೇ ಇದೆ’ ಎಂದು ವಾದಿಸುತ್ತಿದ್ದಾರೆ

Translate »