ಪತ್ರಕರ್ತರ ಸಂಘಕ್ಕೆ ಥರ್ಮಾಮೀಟರ್ ಕೊಡುಗೆ
ಮೈಸೂರು

ಪತ್ರಕರ್ತರ ಸಂಘಕ್ಕೆ ಥರ್ಮಾಮೀಟರ್ ಕೊಡುಗೆ

June 30, 2021

ಮೈಸೂರು, ಜೂ.29(ಎಂಟಿವೈ)- ಕೊರೊನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ 250 ಥರ್ಮಾಮೀಟರ್‍ಗಳನ್ನು ಇನ್‍ಫೆÇೀಸಿಸ್ ಸಂಸ್ಥೆಯ ಸಾಫನ್ ಲಿ. ಕೊಡುಗೆಯಾಗಿ ನೀಡಿದೆ.

ಪತ್ರಕರ್ತರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಫನ್ ಲಿ.ನ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಉಡುಪ, ಥರ್ಮಾಮೀಟರ್‍ಗಳನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿ, ಕೊರೊನಾ 2ನೇ ಅಲೆಯ ತೀವ್ರತೆ ನಡುವೆಯೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಸಣ್ಣ ಕೊಡುಗೆ ನೀಡಿದ್ದೇವೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಪತ್ರಕರ್ತರ ಮೇಲಿನ ಕಳಕಳಿಗೆ ಸಂಘದ ಅಧ್ಯಕ್ಷ ರವಿಕುಮಾರ್ ಕೃತಜ್ಞತೆ ಸಲ್ಲಿಸಿದರು. ಇನ್ಫೋಸಿಸ್ ಭದ್ರತಾ ವಿಭಾಗದ ಮುಖ್ಯಸ್ಥ ಅನಂತರಾಜು, ಪೂವಯ್ಯ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ ಎಂ.ಎಸ್.ಬಸವಣ್ಣ, ನಗರ ಕಾರ್ಯದರ್ಶಿ ಪಿ.ರಂಗಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

Translate »