ಮೈಷುಗರ್ ನೂತನ ಎಂಡಿಯಾಗಿ ಪಿ.ವಸಂತಕುಮಾರ್ ಅಧಿಕಾರ ಸ್ವೀಕಾರ
ಮಂಡ್ಯ

ಮೈಷುಗರ್ ನೂತನ ಎಂಡಿಯಾಗಿ ಪಿ.ವಸಂತಕುಮಾರ್ ಅಧಿಕಾರ ಸ್ವೀಕಾರ

June 7, 2020

ಮಂಡ್ಯ, ಜೂ.6(ನಾಗಯ್ಯ)- ಮೈಷುಗರ್ ಕಾರ್ಖಾನೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಪಿ.ವಸಂತಕುಮಾರ್ ಶನಿ ವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಾಂತಾರಾಂ ಅವರ ಅವಧಿ ಜೂ. 1ರಂದು ಪೂರ್ಣಗೊಂಡಿದ್ದರಿಂದ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಳವಳ್ಳಿ ಮೂಲದ ಹಿರಿಯ ಐಎಎಸ್ ಅಧಿಕಾರಿ ಪಿ.ವಸಂತಕುಮಾರ್ ಅವರನ್ನು ಪೂರ್ಣಾವಧಿಗೆ ನೇಮಕ ಮಾಡಲಾಗಿದೆ.

ಮನವಿ ಸಲ್ಲಿಕೆ: ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ವ್ಯವಸ್ಥಾಪಕ ನಿರ್ದೇಶಕ ಪಿ.ವಸಂತ ಕುಮಾರ್ ಅವರನ್ನು ಭೇಟಿ ಮಾಡಿದ ಕಾರ್ಖಾನೆಯ ಪ.ಜಾತಿ/ ಪಂಗಡದ ನೌಕರರ ಸಂಘದ ಅಧ್ಯಕ್ಷ ಎಂಡಿ ಜಯರಾಂ ಹಾಗೂ ಸಂಘದ ಪದಾಧಿಕಾರಿ ಗಳು ಮನವಿ ಸಲ್ಲಿಸಿದರು. ಈ ಸಂದರ್ಭ ಎಂ.ಡಿ.ಜಯರಾಂ ಕಾರ್ಖಾನೆಯ ಸ್ಥಿತಿಗತಿಯ ಬಗ್ಗೆ ಪರಿಚಯಿಸಿಕೊಟ್ಟರು. ಸ್ವಯಂ ನಿವೃತ್ತಿ ಘೋಷಿಸಿರುವ ಕೆಲ ನೌಕರರು ಅನಾರೋಗ್ಯ ಪೀಡಿತರಾಗಿರುವುದರಿಂದ ಅವರ ಆರೋಗ್ಯ ರಕ್ಷಣೆಯ ಜೊತೆಗೆ ಅವರಿಗೆ ಸಲ್ಲಬೇಕಾಗಿ ರುವ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Translate »