ಕೊಳ್ಳೇಗಾಲದಲ್ಲಿ ಬೆಂಕಿ ಅವಘಡ: ಬಟ್ಟೆ ಅಂಗಡಿ ಸಂಪೂರ್ಣ ಭಸ್ಮ
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಬೆಂಕಿ ಅವಘಡ: ಬಟ್ಟೆ ಅಂಗಡಿ ಸಂಪೂರ್ಣ ಭಸ್ಮ

June 7, 2020

ಕೊಳ್ಳೇಗಾಲ, ಜೂ.6- ಪಟ್ಟಣದ ದಕ್ಷಿಣ ಬಡಾವಣೆಯಲ್ಲಿರುವ ಮೀನಾಕ್ಷಿ ಟೈಕ್ಸ್‍ಟೈಲ್ಸ್ ಅಂಗಡಿಗೆ ಶನಿವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಬೆಂಕಿ ಅವಘಡದಲ್ಲಿ ಅಂಗಡಿ ಮಾಲೀಕ ಪೂನಂಸಿಂಗ್ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇಂದು ರಾತ್ರಿ 9.30ರ ಸುಮಾರಿನಲ್ಲಿ ವ್ಯಾಪಾರ ಮುಗಿಸಿ ಅಂಗಡಿಯ ಶಟ್ಟರ್ ಅನ್ನು ಮುಕ್ಕಾಲುಭಾಗ ಮುಚ್ಚಿ ಮಾಲೀಕ ದಿನದ ವಹಿವಾಟಿನ ಲೆಕ್ಕ ನೋಡುತ್ತಿದ್ದರು ಎಂದು ಹೇಳಲಾಗಿದ್ದು, ಹಠಾತ್ತನೇ ಭಾರೀ ಶಬ್ದದೊಂದಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಅದೇ ವೇಳೆ ಶಟ್ಟರ್ ಕಿತ್ತು ಬಂದಿದ್ದು, ಅಂಗಡಿಯಿಂದ ಮಾಲೀಕ ಹೊರಗೆ ಎಸೆಯಲ್ಲಟ್ಟರು ಎಂದು ಪ್ರತ್ಯಕ್ಷದರ್ಶಿ ಶಶಿಧರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸರ್ಕಲ್ ಇನ್‍ಸ್ಪೆಕ್ಟರ್ ಶ್ರೀಕಾಂತ್, ಪಟ್ಟಣ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ರಾಜೇಂದ್ರ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಂಗಡಿಯಲ್ಲಿದ್ದ ಬಟ್ಟೆಗಳು ಸಂಪೂರ್ಣ ವಾಗಿ ಬೆಂಕಿಗೆ ಆಹುತಿ ಯಾಗಿದೆ ಎಂದು ಮೂಲಗಳು ಹೇಳಿವೆ. ಗಾಯ ಗೊಂಡಿರುವ ಅಂಗಡಿ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »