ಕೊರೊನಾ ವಾರಿಯರ್ಸ್‍ಗೆ ಹೆಚ್ಚುವರಿ ವೇತನ ನೀಡಲು ಒತ್ತಾಯ
ಮೈಸೂರು ಗ್ರಾಮಾಂತರ

ಕೊರೊನಾ ವಾರಿಯರ್ಸ್‍ಗೆ ಹೆಚ್ಚುವರಿ ವೇತನ ನೀಡಲು ಒತ್ತಾಯ

June 7, 2020

ತಿ.ನರಸೀಪುರ, ಜೂ.6(ಎಸ್‍ಕೆ)-ಕೊರೊನಾ ಸೇವಾ ನಿರತ ಅಧಿಕಾರಿಗಳಿಗೆ ಸರ್ಕಾರ ಒಂದು ತಿಂಗಳ ಹೆಚ್ಚುವರಿ ವೇತನ ನೀಡುವಂತೆ ನಿವೃತ್ತ ಅಪರ ಆಯುಕ್ತ ಹೆಳವರಹುಂಡಿ ಸಿದ್ದಪ್ಪ ಒತ್ತಾಯಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕೊರೊನಾ ಸೇವಾ ನಿರತ ತಾಲೂಕು ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾ ರಂಭದಲ್ಲಿ ಅವರು ಮಾತನಾಡಿದರು. ಕೊರೊನಾ ಸೋಂಕು ವಿಶ್ವದಲ್ಲಿ ವ್ಯಾಪಕ ತೊಂದರೆ ನೀಡಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿ ಮೂಲಕ ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಶ್ರಮಿಸಿದೆ. ಸರ್ಕಾರಿ ಅಧಿಕಾರಿ ಗಳು ಅದರಲ್ಲೂ ಪೊಲೀಸ್, ಆರೋಗ್ಯ, ಸÀ್ಥಳೀಯ ಆಡಳಿತ ಶ್ರಮಿಸಿ ಕೊರೊನಾ ತಡೆ ಗಟ್ಟುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಇವರ ಶ್ರಮಕ್ಕೆ ಪ್ರತಿಫಲವಾಗಿ ಒಂದು ತಿಂಗಳ ವೇತನ ಹೆಚ್ಚುವರಿಯಾಗಿ ನೀಡ ಬೇಕು ಎಂದು ಮನವಿ ಮಾಡಿದರು.

ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಅಧಿಕಾರಿಗಳು ತಮ್ಮ ಕಾಯಕವನ್ನು ಅಚ್ಚಟುಕಟ್ಟಾಗಿ ಮಾಡಿದ್ದ ರಿಂದ ತಾಲೂಕಿನಲ್ಲಿ ಕೊರೊನಾ ಇಲ್ಲ ವಾಗಿದೆ ಎಂದು ಪ್ರಶಂಸಿಸಿದರು.

ತಹಸೀಲ್ದಾರ್ ಡಿ.ನಾಗೇಶ್ ಮಾತ ನಾಡಿ, ಎಲ್ಲಾ ಅಧಿಕಾರಿಗಳ ಸಹಕಾರದಿಂದ ತಾಲೂಕನ್ನು  ಸದ್ಯಕ್ಕೆ ಕೊರೊನಾ ಮುಕ್ತ ಮಾಡಿದ್ದೇವೆ. ಆದರೆ ಮೈಮರೆಯುವ ಪರಿಸ್ಥಿತಿ ಇಲ್ಲ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸ್ವಾಮಿ, ತಾಲೂಕು ಆರೋಗ್ಯಾಧಿಕಾ ಡಾ.ರವಿ ಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೀಹಳ್ಳಿ ಶಿವಮಲ್ಲಪ್ಪ ಮಾತನಾಡಿ ದರು. ತಹಸೀಲ್ದಾರ್ ಡಿ.ನಾಗೇಶ್, ತಾಪಂ ಇಓ ಜೆರಾಲ್ಡ್ ರಾಜೇಶ್, ಬಿಇಓ ಎನ್. ಸ್ವಾಮಿ, ಸಿಡಿಪಿಓ ಬಸವರಾಜು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಪುರಸಭಾ ಮುಖ್ಯಾಧಿಕಾರಿಗಳಾದ ಆರ್.ಅಶೋಕ್, ಹೇಮಂತ್ ರಾಜ್, ಎಎಸ್‍ಐ ಸಿದ್ದಯ್ಯ ನರ್ಸ್ ಶ್ವೇತಾ, ರಾಜಣ್ಣ, ಅವರನ್ನು ಸನ್ಮಾನಿ ಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಮೂರ್ತಿ, ಎಚ್. ಎಂ.ಶಂಕರ್, ಮೂಗೂರು ಚಿನ್ನಬುದ್ಧಿ, ಹೆಳವರಹುಂಡಿ ಮೂರ್ತಿ, ತೋಂಟೇಶ್, ಎಂ.ಎಸ್.ಶಿವಮೂರ್ತಿ, ಕೆ.ಎನ್.ಪ್ರಭುಸ್ವಾಮಿ, ಕನ್ನಡ ಪುಟ್ಟಸ್ವಾಮಿ, ಮೂಗೂರು ಸಿದ್ದ ರಾಜು ಮತ್ತಿತರರು ಉಪಸ್ಥಿತರಿದ್ದರು.

 

 

 

Translate »