ಪಾದರಾಯನಪುರ ಪ್ರಕರಣದ ಆರೋಪಿಗಳ ರಾಮನಗರ ಜೈಲಿಗೆ ಸ್ಥಳಾಂತರದ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಕೈವಾಡ
ಮೈಸೂರು

ಪಾದರಾಯನಪುರ ಪ್ರಕರಣದ ಆರೋಪಿಗಳ ರಾಮನಗರ ಜೈಲಿಗೆ ಸ್ಥಳಾಂತರದ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಕೈವಾಡ

April 25, 2020

ಮೈಸೂರು,ಏ.24(ಆರ್‍ಕೆ)- ಬೆಂಗಳೂ ರಲ್ಲಿ ನಡೆದ ಪಾದರಾಯನಪುರ ಗಲಾಟೆ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿರುವ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕೈವಾಡ ವಿರುವ ಶಂಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಸರ್ವೆ ವೇಳೆ ಕೆಲವರಿಂದ ಉಂಟಾದ ಕಿರುಕುಳ ದಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಶ್ರೀರಂಗಪಟ್ಟಣದ ಆಶಾ ಕಾರ್ಯಕರ್ತೆ ಮೀನಾಕ್ಷಿ ಅವರನ್ನು ಮೈಸೂರಿನ ವಿದ್ಯಾ ರಣ್ಯ ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆತ್ಮ ಸ್ಥೈರ್ಯ ತುಂಬಿದ ನಂತರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ನಾಯಕರನ್ನು ನಾನು ಕೇಳಿದಾಗ ಬಂದೀ ಖಾನೆ ಎಡಿಜಿಪಿ ಅಲೋಕ್ ಮೋಹನ್ ಅವರೇ ಪತ್ರ ಬರೆದು ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡುವಂತೆ ಸಲಹೆ ನೀಡಿದರೆಂದು ತಿಳಿದು ಬಂದಿದೆ ಎಂದ ಅವರು, ನನ್ನ ಮೇಲಿನ ದ್ವೇಷಕ್ಕೆ ಎಡಿ ಜಿಪಿ ಹೀಗೆ ಮಾಡಿದ್ದಾರೆಯೇ? ಎಂಬ ಅನುಮಾನ ಮೂಡತೊಡಗಿದೆ ಎಂದರು.

ಕೋವಿಡ್-19 ಮಾರಣಾಂತಿಕ ಸೋಂಕಿನ ವಿರುದ್ದದ ಹೋರಾಟದಲ್ಲಿ ನಾವು ಸರ್ಕಾ ರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿ ದ್ದೇವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಒಗ್ಗಟ್ಟಾಗಿರಬೇಕೆಂದಿದ್ದೇವೆ. ಅದನ್ನು ಸರ್ಕಾರದವರು ನಮ್ಮ ವೀಕ್‍ನೆಸ್ ಅಂದು ಕೊಳ್ಳಬಾರದು ಎಂದು ನುಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಅಲೋಕ್ ಮೋಹನ್ ಬೆಂಗಳೂರು ನಗರ ಪೊಲೀಸ್ ಕಮೀಷ್ನರ್ ಆಗಲು ಒತ್ತಡ ಹೇರಿದ್ದರು. ಅವರ ಹಿನ್ನೆಲೆ ಗಮನಿಸಿ ನಾನು ಅವಕಾಶ ನೀಡಿರಲಿಲ್ಲ. ಆ ದ್ವೇಷಕ್ಕೆ ಅವರು ಹೀಗೆ ಮಾಡಿರಬಹುದೆಂಬ ಅನುಮಾನ ವಿದೆ ಎಂದ ಕುಮಾರಸ್ವಾಮಿ, ನನ್ನ ಮೇಲೆ ದ್ವೇಷವಿದ್ದರೆ ತೀರಿಸಿಕೊಳ್ಳಲಿ ಆದರೆ ರಾಮನಗರದ ಜನರು ಏನು ಮಾಡಿ ದ್ದರು? ಎಂದು ಪ್ರಶ್ನಿಸಿದರು.

ಕೋವಿಡ್-19 ಸೋಂಕಿನ ವಿರುದ್ದ ಹೋರಾಡುತ್ತಿರುವ ಆಶಾ ಕಾರ್ಯಕರ್ತೆ ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ ತೊಡಗಿವೆ. ಶ್ರೀರಂಗಪಟ್ಟಣದ ಆಶಾ ಕಾರ್ಯಕರ್ತೆಗೆ ಕಿರುಕುಳ ನೀಡಿದ ಆರೋಪಿಯನ್ನು ರಾಜಕೀಯ ಒತ್ತಡದಿಂ ದಾಗಿ ಸ್ಟೇಷನ್ ಬೇಲ್ ನೀಡಲಾಗಿದೆ ಎಂದು ಆರೋಪಿಸಿದರು.

ವೈದ್ಯಕೀಯ ಮತ್ತು ವೈದ್ಯಕೇತರ ಸಿಬ್ಬಂದಿ ಗಳ ರಕ್ಷಣೆಗೆ ಸರ್ಕಾರ ಕ್ರಮವಹಿಸಬೇಕು, ರಾಮನಗರ ಜೈಲಿನಲ್ಲಿರುವ ಖೈದಿಗಳು ಹಾಗೂ ಭದ್ರತಾ ಸಿಬ್ಬಂದಿಗಳನ್ನು ಕ್ವಾರಂ ಟೈನ್ ಮಾಡಬೇಕು, ಈ ಬಗ್ಗೆ ಮುಖ್ಯ ಮಂತ್ರಿ, ಗೃಹಸಚಿವರೊಂದಿಗೂ ಮಾತ ನಾಡಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ನುಡಿದರು.

ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ರವೀಂದ್ರ ಶ್ರೀಕಂಠಯ್ಯ, ಮಾಜಿ ಮೇಯರ್‍ಗಳಾದ ರವಿಕುಮಾರ್, ಆರ್.ಲಿಂಗಪ್ಪ, ವರುಣ ಕ್ಷೇತ್ರದ ಜೆಡಿಎಸ್ ಮುಖಂಡ ಎಂ.ಎಸ್.ಅಭಿಷೇಕ್ ಸೇರಿ ದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »