ಪಾದರಾಯನಪುರ ಗಲಭೆ: ಬಂಧಿತರನ್ನು `ಗ್ರೀನ್‍ಜೋನ್’ ರಾಮನಗರಕ್ಕೆ ಕಳಿಸಿದ್ದು ತಪ್ಪು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಖಂಡನೆ
ಮೈಸೂರು

ಪಾದರಾಯನಪುರ ಗಲಭೆ: ಬಂಧಿತರನ್ನು `ಗ್ರೀನ್‍ಜೋನ್’ ರಾಮನಗರಕ್ಕೆ ಕಳಿಸಿದ್ದು ತಪ್ಪು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಖಂಡನೆ

April 25, 2020

ಮೈಸೂರು, ಏ.24(ಪಿಎಂ)- ಬೆಂಗಳೂರಿನ ಪಾದರಾಯನ ಪುರ ಗಲಭೆಯಲ್ಲಿ ಬಂಧಿತರಾದ ಆರೋಪಿ ಗಳಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹೀಗಿರುವಾಗ ಬಂಧಿತ ರನ್ನು `ಗ್ರೀನ್‍ಜೋನ್’ ಆಗಿರುವ ರಾಮನಗ ರದ ಕಾರಾ ಗೃಹಕ್ಕೆ ಸ್ಥಳಾಂತರ ಮಾಡಿದ್ದು ತಪ್ಪು ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮೈಸೂರಿನ ಕೆಜಿ ಕೊಪ್ಪಲಿನ ಬಂದಂತಮ್ಮ ಕಾಳಮ್ಮ ಕಲ್ಯಾಣ ಮಂಟಪದಲ್ಲಿ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ಅವರ ನೇತೃತ್ವದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಪಾದರಾಯನಪುರದಲ್ಲಿ ಬಡವರಿದ್ದು, ಸರ್ಕಾರ ಮತ್ತು ಅಧಿಕಾರಿ ಗಳ ಮೇಲೆ ನಂಬಿಕೆ ಇಲ್ಲದೇ ಗಲಭೆ ನಡೆಸಿರಬಹುದು. ಇದನ್ನೇ ನೆಪ ಮಾಡಿಕೊಂಡು ಒಂದು ಸಮುದಾಯ ಗುರಿಯಾಗಿಸುವುದು ತಪ್ಪು. `ಆರೋಗ್ಯ ಕಾರ್ಯಕರ್ತರು ಬರುವುದು ನಮ್ಮ ಒಳ್ಳೆಯ ದಕ್ಕೆ’ ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ಆಯಾ ಪ್ರದೇಶದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಗಷ್ಟೇ ಸರ್ಕಾರದ ಯಾವುದೇ ಕಾರ್ಯಕ್ರಮ ಅಥವಾ ಯೋಜನೆ ಅನುಷ್ಠಾನ ಮಾಡಲು ಸಾಧ್ಯ ಎಂದರು.

ಕಾರ್ಮಿಕರಿಗೆ ವೇತನವಿಲ್ಲ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಹಿಳೆ ಯರ ಜನಧನ್ ಖಾತೆಗೆ ಕೇಂದ್ರ ಸರ್ಕಾರ 500 ರೂ. ಜಮಾ ಮಾಡಿರುವುದು ಸಾಲದು. ಕನಿಷ್ಠ 2 ಸಾವಿರ ರೂ. ನೀಡಬೇಕು. ಸರ್ಕಾರ ಅಕ್ಕಿ, ಗೋಧಿ ಮಾತ್ರವಲ್ಲದೆ, ಬೇರೆ ಧಾನ್ಯಗಳನ್ನು ಕೊಡು ವಂತೆಯೂ ಕಾಂಗ್ರೆಸ್‍ನಿಂದ ಮನವಿ ಮಾಡಲಾಗಿದೆ. ಅಸಂಘಟಿತ ಕಾರ್ಮಿಕ ವಲಯಕ್ಕೆ ಸರ್ಕಾರ 1 ಸಾವಿರ ರೂ. ಆರ್ಥಿಕ ನೆರವು ಕೊಡುತ್ತಿದ್ದು, ಇದೂ ಸರಿಯಾಗಿ ಫಲಾನುಭವಿಗಳಿಗೆ ತಲುಪು ತ್ತಿಲ್ಲ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಕಾರ್ಖಾನೆಗಳಲ್ಲಿ ಕಾರ್ಮಿಕ ರಿಗೆ ಸರಿಯಾಗಿ ವೇತನ ನೀಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.

Translate »