ಮೈಸೂರು, ಏ.24(ಆರ್‍ಕೆಬಿ)- ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ವೈದ್ಯರ ವಿಭಾಗದ ವತಿಯಿಂದ ಶುಕ್ರವಾರ ಕೋವಿಡ್-19 ಸಹಾಯ ವಾಣಿ ಬಿಡುಗಡೆ ಮಾಡಲಾಯಿತು.
ಸಾರ್ವಜನಿಕರು 080-47188000 ಸಂಖ್ಯೆಗೆ ಕರೆ ಮಾಡಿ ವೈದ್ಯಕೀಯ ಸಲಹೆ ಪಡೆಯಬಹುದು. ಸಹಾಯವಾಣಿಯಲ್ಲಿ 200ಕ್ಕೂ ಅಧಿಕ ವೈದ್ಯರು ಜನರಿಂದ ಬರುವ ಕರೆ ಸ್ವೀಕರಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಅಗತ್ಯವಿದ್ದಲ್ಲಿ ವಿಡಿಯೋ ಕಾಲ್ ಮೂಲಕವೂ ಸಲಹೆ ಪಡೆಯ ಬಹುದಾಗಿದೆ. ವೈದ್ಯರು ಔಷಧಿ ಮತ್ತಿತರ ಸಲಹೆ ಗಳ ಪ್ರಿಸ್ಕ್ರಿಪ್ಷನ್ ಸಹ ನೀಡಲಿದ್ದಾರೆ.
ಕಾರ್ಡಿಯಾಲಜಿ, ನ್ಯೂರಾಲಜಿ, ಯೂರಾ ಲಜಿ, ಗೈನಕಾಲಜಿ, ಆಂಕಾಲಜಿ ಸೇರಿದಂತೆ ಎಲ್ಲಾ ವಿಭಾಗದ ತಜ್ಞವೈದ್ಯರು ಇಲ್ಲಿ ಜನರ ಸಮಸ್ಯೆ ಗಳಿಗೆ ಸ್ಪಂದಿಸಲಿದ್ದಾರೆ. 24 ಗಂಟೆಯೂ ಕರೆ ಮಾಡಬಹುದು ಎಂದು ಕೆಪಿಸಿಸಿ ವೈದ್ಯರ ಘಟ ಕದ ಪ್ರಧಾನ ಕಾರ್ಯದರ್ಶಿ ಡಾ.ಭರತ್ ಕುಮಾರ್ ಮೈಸೂರು ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮೈಸೂರು ನಗರ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಡಿ.ರವಿಶಂಕರ್, ಡಾ.ನರೇಂದ್ರ, ಡಾ.ಪ್ರದೀಪ್ ಇನ್ನಿತರರು ಉಪಸ್ಥಿತರಿದ್ದರು.