ನಮಗೇಕೆ ದಿನಸಿ ಕಿಟ್ ಇಲ್ಲ?: ವಿಶೇಷಚೇತನರ ಅಳಲು
ಮೈಸೂರು

ನಮಗೇಕೆ ದಿನಸಿ ಕಿಟ್ ಇಲ್ಲ?: ವಿಶೇಷಚೇತನರ ಅಳಲು

April 25, 2020

ಮೈಸೂರು,ಏ.24(ವೈಡಿಎಸ್)- `ನಮಗೆ ಆಸ್ತಿ ಇಲ್ಲ. ಮನೆಯಲ್ಲಿ ವಿಶೇಷಚೇತನ ಮಕ್ಕಳಿದ್ದು, ಕೂಲಿ ಮಾಡಿ ದರಷ್ಟೇ ಜೀವನ ನಿರ್ವಹಣೆ. ಲಾಕ್‍ಡೌನ್‍ನಿಂದಾಗಿ ಕೂಲಿಯೂ ಇಲ್ಲ. ಮನೆಯಲ್ಲಿ ದಿನಸಿಯೂ ಇಲ್ಲ’…

`ರಸ್ತೆ ಬದಿ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದವರ ಬದುಕೂ ಸಂಕಷ್ಟದಲ್ಲಿದೆ’…
ಇದು ಮೈಸೂರಿನ ವಿಕಲಚೇತನರ ಅಳಲು.

`ನಾನು 4 ವರ್ಷಗಳಿಂದ ಫಾಸ್ಟ್‍ಫುಡ್ ಗಾಡಿಯಲ್ಲಿ ಸಪ್ಲೆಯರ್ ಆಗಿದ್ದು, ನಿತ್ಯ 250 ರೂ. ಕೂಲಿ ನೀಡುತ್ತಿದ್ದರು. ಇದರಿಂದ ಹೇಗೋ ಜೀವನ ನಡೆಯುತ್ತಿತ್ತು. ಲಾಕ್‍ಡೌನ್ ನಿಂದಾಗಿ ಕೆಲಸವೂ ಇಲ್ಲ, ಖರ್ಚಿಗೂ ಹಣವಿಲ್ಲ. ಮನೆ ಯಲ್ಲಿ ವಿಶೇಷಚೇತನ ಪುತ್ರ ಇದ್ದು, ಅವನನ್ನು ಈಗಿನ ಸ್ಥಿತಿಯಲ್ಲಿ ನೋಡುತ್ತಿದ್ದರೆ ನೋವಾಗುತ್ತದೆ. ಇಂದು ಕೂಲಿ ಮಾಡಿ ಜೀವನ ನಡೆಸುತ್ತಿದ್ದವರ ಬದುಕು ಬೀದಿಗೆ ಬಿದ್ದಿದೆ. ಈ ಸಂದರ್ಭದಲ್ಲಾದರೂ ಜಿಲ್ಲಾ ವಿಕಲಚೇತನರ ಒಕ್ಕೂಟ ನಮಗೆಲ್ಲಾ ದಿನಸಿ ಕಿಟ್ ನೀಡ ಬೇಕಿತ್ತು. ಒಕ್ಕೂಟದ ಅಧ್ಯಕ್ಷ ರಿಗೆ ಕರೆ ಮಾಡಿದರೆ, `ಇನ್ನೆ ರಡು ದಿನದಲ್ಲಿ ದಿನಸಿ ಕಿಟ್ ವಿತರಿಸುತ್ತೇವೆ’ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಅಶೋಕಪುರಂನ ವಸಂತ ಕುಮಾರ್ ಬೇಸರ ವ್ಯಕ್ತಪಡಿಸಿದರು. ಸಿದ್ದಾರ್ಥ ಬಡಾವಣೆ ನಿವಾಸಿ ಮಹೇಶ್ ಮಾತನಾಡಿ, `ನಾನು ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದು, ದೋಬಿಘಾಟ್ ಮತ್ತು ವಸತಿ ಗೃಹ ಗಳಿಂದ ಬಟ್ಟೆ ಬರುತ್ತಿದ್ದವು. ದಿನಕ್ಕೆ 700 ರೂ. ಸಂಪಾ ದನೆ ಆಗುತ್ತಿತ್ತು. ಇದರಿಂದ ಮನೆ-ಅಂಗಡಿ ಬಾಡಿಗೆ, ಜೀವನ ನಿರ್ವಹಣೆ ಜತೆಗೆ ಮಗಳ ವಿದ್ಯಾಭ್ಯಾಸವೂ ನಡೆಯು ತ್ತಿತ್ತು. ಲಾಕ್‍ಡೌನ್‍ನಿಂದಾಗಿ ಅಂಗಡಿ ಬಂದ್ ಆಗಿದ್ದು, ಖರ್ಚಿಗೂ ಹಣವಿಲ್ಲ. ಮನೆ-ಅಂಗಡಿ ಬಾಡಿಗೆ ಕಟ್ಟುವುದು ಹೇಗೆಂಬ ಚಿಂತೆ ಕಾಡುತ್ತಿದೆ. ಪಾಲಿಕೆಯಿಂದಲಾದರೂ ದಿನಸಿ ಕಿಟ್ ನೀಡಿದರೆ ಜೀವನ ನಿರ್ವಹಣೆಗೆ ಅನುಕೂಲ ವಾಗಲಿದೆ’ ಎಂದು ಅಳಲು ತೋಡಿಕೊಂಡರು.

ಕುವೆಂಪುನಗರ 2ನೇ ಹಂತದ ನಿವಾಸಿ ಪಾಲಾಕ್ಷ ಮಾತ ನಾಡಿ, `ನಾನು ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು, ಇಬ್ಬರು ವಿಶೇಷಚೇತನ ಮಕ್ಕಳಿದ್ದಾರೆ. ಪ್ರಸ್ತುತ ಕೂಲಿ ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ’ ಎಂದರು.

Translate »