ಮನೆಯಲ್ಲೇ ರಂಜಾನ್ ಆಚರಿಸಿ: ಎಸಿಪಿ ಸೂಚನೆ
ಮೈಸೂರು

ಮನೆಯಲ್ಲೇ ರಂಜಾನ್ ಆಚರಿಸಿ: ಎಸಿಪಿ ಸೂಚನೆ

April 25, 2020

ಮೈಸೂರು,ಏ.24(ಎಂಕೆ)-ಲಾಕ್‍ಡೌನ್ ನಿಯಮ ಉಲ್ಲಂಘಿ ಸದೇ ಮನೆಯಲ್ಲೇ ರಂಜಾನ್ ಹಬ್ಬ ಆಚರಿಸಿ ಎಂದು ನರಸಿಂಹ ರಾಜ ವಿಭಾಗದ ಎಸಿಪಿ ಎಂ.ಶಿವಶಂಕರ್ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಸೂಚನೆ ನೀಡಿದರು.

ನಗರದ ಅಶೋಕ ರಸ್ತೆಯಲ್ಲಿನ ಮಿಲಾದ್ ಪಾರ್ಕ್‍ನಲ್ಲಿ ಗುರು ವಾರ ಎನ್‍ಆರ್ ವಿಭಾಗದ ವ್ಯಾಪ್ತಿಯ ಮಸೀದಿಗಳ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು. ನಾವು ಮತ್ತು ನಮ್ಮ ಮುಂದಿನ ಪೀಳಿಗೆಯವರ ಆರೋಗ್ಯಕ್ಕಾಗಿ ಎಚ್ಚೆತ್ತುಕೊಳ್ಳಬೇಕಿದೆ. ದೇಶದಲ್ಲಿ ಸಕಾಲದಲ್ಲಿ ಲಾಕ್‍ಡೌನ್ ಜಾರಿಯಾದ್ದ ರಿಂದಲೇ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯ ವಾಗಿದೆ. ಈವರೆಗೆ ಸಹಕರಿಸಿದಂತೆ ಮುಂದಿನ ದಿನಗಳಲ್ಲೂ ಸಹಕರಿಸ ಬೇಕು ಎಂದರು. ಇಂದು ಬಲು ಕಷ್ಟದ ಸ್ಥಿತಿಯಲ್ಲಿದ್ದೇವೆ. ಕೊರೊನಾ ಸೋಂಕು ದೂರವಾದರೆ ಮತ್ತಷ್ಟು ಸಂಭ್ರಮ-ಸಡಗರದಿಂದ ಹಬ್ಬಗಳನ್ನು ಆಚರಿಸಬಹುದು ಎಂದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ಕೈಗೊಳ್ಳಬೇಕು. ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಡಬೇಕು ಎಂದರು.

ಮಸೀದಿಗಳ ಪ್ರವೇಶಕ್ಕೆ, ಪಾರ್ಥನೆಗೆ, ಸ್ವಚ್ಛತೆ ಕೆಲಸಕ್ಕೆ ಒಂದು ಬಾರಿಗೆ ಮೂವರಿಗೆ ಮಾತ್ರ ಅವಕಾಶವಿದೆ. ಮಸೀದಿ ವ್ಯಾಪ್ತಿಯ ಧಾರ್ಮಿಕ ಮುಖಂಡರು ಇದಕ್ಕೆ ಸಹಕರಿಸಬೇಕು. ಗಲಾಟೆ, ಗೊಂದಲ ಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಗಮನ ಸೆಳೆದರು.

ಮಂಡಿ ಪೊಲೀಸ್ ಠಾಣೆ ಇನ್ಸ್‍ಸ್ಪೆಕ್ಟರ್ ನಾರಾಯಣಸ್ವಾಮಿ, ಪಿಎಸ್‍ಐಗಳಾದ ಶಬರೀಶ್, ಗೌತಮ್, ಸಿಬ್ಬಂದಿಗಳಾದ ಹರೀಶ್, ಮಲ್ಲಿಕಾರ್ಜುನಪ್ಪ, ಶಂಕರ್, ಮಹದೇವಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯ ಸುಹೇಲ್ ಬೇಗ್ ಇನ್ನಿತರರಿದ್ದರು.

Translate »