ಚಾಮರಾಜ ಕ್ಷೇತ್ರದ ಬಡವರಿಗೆ 15 ಸಾವಿರ ದಿನಸಿ ಕಿಟ್ ವಿತರಣೆ
ಮೈಸೂರು

ಚಾಮರಾಜ ಕ್ಷೇತ್ರದ ಬಡವರಿಗೆ 15 ಸಾವಿರ ದಿನಸಿ ಕಿಟ್ ವಿತರಣೆ

April 25, 2020

ಮೈಸೂರು, ಏ.24(ಪಿಎಂ)- ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ತುತ್ತಾಗಿರುವ ಚಾಮರಾಜ ವಿಧಾನಸಭಾ ಕ್ಷೇತ್ರದ 15 ಸಾವಿರ ಬಡ ಕುಟುಂಬಗಳಿಗೆ ಕಾಂಗ್ರೆಸ್ ನಾಯಕ ಕೆ.ಹರೀಶ್‍ಗೌಡ ಸ್ವಂತ ವೆಚ್ಚದಲ್ಲಿ ದಿನಸಿ ಕಿಟ್ ಹಂಚುತ್ತಿದ್ದು, ಈ ಕಾರ್ಯಕ್ಕೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು.

ಮೈಸೂರಿನ ಕೆಜಿ ಕೊಪ್ಪಲಿನ ಬಂದಂ ತಮ್ಮ ಕಾಳಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಹರೀಶ್‍ಗೌಡ ಉಪಸ್ಥಿತಿಯಲ್ಲಿ ದಿನಸಿ ಕಿಟ್‍ಗಳನ್ನು ಡಾ. ಯತೀಂದ್ರ ವಿತರಿಸಿದರು. ಬಳಿಕ ಮಾತ ನಾಡಿ, ಕಾಂಗ್ರೆಸ್ ನಾಯಕ ಹರೀಶ್‍ಗೌಡ 15 ಸಾವಿರ ದಿನಸಿ ಕಿಟ್‍ಗಳು ಹಾಗೂ ತರ ಕಾರಿಯನ್ನು ಬಡ ಕುಟುಂಬಗಳಿಗೆ ನೀಡುತ್ತಿ ದ್ದಾರೆ. ಲಾಕ್‍ಡೌನ್‍ನಿಂದ ತೊಂದರೆ ಅನು ಭವಿಸುತ್ತಿರುವ ಬಡವರಿಗೆ ನೆರವಾಗಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಸದ್ಯ ಸರ್ಕಾರ ನೀಡುತ್ತಿರುವ ಅಕ್ಕಿ, ಗೋಧಿ ಹಿಟ್ಟು ಮಾತ್ರವೇ ಬಡವರಿಗೆ ಪೌಷ್ಟಿಕ ಆಹಾರ ಒದಗಿಸಲಾರದು. ಅವರಿಗೆ ಪೌಷ್ಠಿಕ ಧಾನ್ಯಗಳನ್ನು ಒಳಗೊಂಡ 15 ಸಾವಿರ ದಿನಸಿ ಕಿಟ್‍ಗಳನ್ನು ಹರೀಶ್‍ಗೌಡ ನೀಡುತ್ತಿದ್ದಾರೆ. ಅವರ ಇಂತಹ ಒಳ್ಳೆಯ ಕೆಲಸಕ್ಕೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಮಾತನಾಡಿ, ಬಡವರನ್ನು ಗುರುತಿಸಿ ಅವ ರಿಗೆ ಆಹಾರ ಧಾನ್ಯ ನೀಡುವ ಕಾರ್ಯ ಕ್ರಮ ಹರೀಶ್‍ಗೌಡರಿಗೆ ಬಡವರ ಬಗ್ಗೆ ಅಪಾರ ಕಾಳಜಿ ಇದೆ ಎಂಬುದಕ್ಕೆ ಸಾಕ್ಷಿ. ಅವರಿಗೆ ಶ್ರೀ ಚಾಮುಂಡೇಶ್ವರಿ ದೇವಿ ಮತ್ತಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ಹರೀಶ್‍ಗೌಡರು ಬಡವರನ್ನು ಗುರುತಿಸಿ ಸಹಾಯ ಮಾಡು ತ್ತಿದ್ದು, ಇದು ಮಾದರಿ ನಡೆ ಎಂದರು.

ಡಿಸಿಪಿ ಪ್ರಕಾಶ್‍ಗೌಡ ಮಾತನಾಡಿ, ಲಾಕ್ ಡೌನ್ ಸಂದರ್ಭ ಬಡವರಿಗೆ ಬೃಹತ್ ಮಟ್ಟ ದಲ್ಲಿ ಆಹಾರ ಧಾನ್ಯ ವಿತರಣೆ ಮಾಡುತ್ತಿ ರುವುದು ಅಭಿನಂದನಾರ್ಹ. ಇಂದಿನ ಸ್ಥಿತಿ ಯಲ್ಲಿ ಸಾಕಷ್ಟು ಮಂದಿ ಈ ರೀತಿ ಮಾನ ವೀಯ ನಡೆ ತೋರುತ್ತಿದ್ದಾರೆ. ಹರೀಶ್ ಗೌಡ ಮತ್ತು ಅವರ ತಂಡವನ್ನು ಅಭಿ ನಂದಿಸುವೆ. ಇಂತಹ ಕಾರ್ಯಕ್ರಮಗಳಲ್ಲಿ ಜನರು ಗುಂಪುಗೂಡದೇ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು. ಸಾಂಕೇತಿಕ ವಾಗಿ 200ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ತರಕಾರಿ ವಿತರಣೆ ಮಾಡಲಾಯಿತು. ಶಾಸಕ ಹೆಚ್.ಪಿ.ಮಂಜು ನಾಥ್, ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಮುಡಾ ಮಾಜಿ ಅಧ್ಯಕ್ಷ ಡಿ.ಧ್ರುವ ಕುಮಾರ್, ಪಾಲಿಕೆ ಸದಸ್ಯರಾದ ಗೋಪಿ, ಶಿವಕುಮಾರ್, ಶ್ರೀನಿವಾಸ್, ಮಾಜಿ ಸದಸ್ಯ ಶಿವಣ್ಣ, ಕೋವಿಡ್-19 ಕಾಂಗ್ರೆಸ್ ಟಾಸ್ಕ್ ಫೋರ್ಸ್ ಕೆಆರ್ ಕ್ಷೇತ್ರದ ಉಸ್ತುವಾರಿ ಭಾಸ್ಕರ್ ಎಲ್.ಗೌಡ ಮತ್ತಿತರರು ಹಾಜರಿದ್ದರು.

Translate »