ಅರಮನೆ ವೀಕ್ಷಣೆಗೂ ನಾಳೆಯಿಂದ ಅವಕಾಶ?
ಮೈಸೂರು

ಅರಮನೆ ವೀಕ್ಷಣೆಗೂ ನಾಳೆಯಿಂದ ಅವಕಾಶ?

June 7, 2020

ಮೈಸೂರು, ಜೂ.6(ಎಸ್‍ಬಿಡಿ)- ಮೈಸೂರಿನ ಅಂಬಾವಿಲಾಸ ಅರಮನೆ ವೀಕ್ಷ ಣೆಗೂ ಸೋಮ ವಾರ (ಜೂ.8) ದಿಂದ ಅವಕಾಶ ಸಿಗುವ ಸಾಧ್ಯತೆ ಯಿದೆ. ಆದರೆ ಈ ಬಗ್ಗೆ ಸರ್ಕಾರ ಅಥವಾ ಅರಮನೆ ಮಂಡಳಿಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸೋಮವಾರದಿಂದ ವೀಕ್ಷಕರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ಸಿಗಬಹುದೆಂದು ಬಲ್ಲಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಮೃಗಾಲಯ ಮಾದರಿಯಲ್ಲಿ ಅರ ಮನೆಯಲ್ಲೂ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‍ಓಪಿ) ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ಗಂಟೆಯಲ್ಲಿ ಎಷ್ಟು ವೀಕ್ಷಕ ರಿಗೆ ಅನುವು ಮಾಡಿಕೊಡಬೇಕು?. ಅರಮನೆ ಪ್ರವೇಶ -ನಿರ್ಗಮನ ಮಾರ್ಗವನ್ನು ಹೇಗೆ ಸಜ್ಜುಗೊಳಿಸಬೇಕು? ಎಂಬುದನ್ನು ಅದಾಗಲೇ ನಿರ್ಧರಿಸಿ ಕ್ರಮ ಕೈಗೊಳ್ಳಲಾ ಗಿದೆ. ಮಹಾದ್ವಾರದ ಬಳಿಯೇ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಉಪಯೋಗಿಸಲು ವ್ಯವಸ್ಥೆ ಮಾಡ ಲಾಗುತ್ತಿದೆ. ವ್ಯಕ್ತಿಗಳ ನಡುವೆ ಅಂತರ ಕಾಯ್ದು ಕೊಳ್ಳಲು ಚೌಕಾಕಾರದ ಗುರುತು ಹಾಕಲಾಗುತ್ತಿದೆ. ವೀಕ್ಷಕರಿಗೆ ಸಲಹೆ ನೀಡಲು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಒಟ್ಟಾರೆ ಎಲ್ಲಾ ರೀತಿಯ ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Translate »