ಮೈಸೂರಲ್ಲಿ ಆರಂಭದಲ್ಲೇ ಮಳೆ ಅಬ್ಬರ
ಮೈಸೂರು

ಮೈಸೂರಲ್ಲಿ ಆರಂಭದಲ್ಲೇ ಮಳೆ ಅಬ್ಬರ

June 7, 2020

ಮೈಸೂರು, ಜೂ.6(ಎಂಕೆ)- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲೇ ಮೈಸೂರು ನಗರದಲ್ಲಿ ಶನಿವಾರ ಧಾರಾಕಾರ ಮಳೆ ಸುರಿಯಿತು. ಮಧ್ನಾಹ್ನ 3 ಗಂಟೆಗೆ ಶುರುವಾದ ಮಳೆ ಒಂದೂವರೆ ಗಂಟೆಗೂ ಹೆಚ್ಚುಕಾಲ ಸುರಿಯಿತು. ಕನಕ ಗಿರಿ, ಚಾಮುಂಡಿಪುರಂ, ಗುಂಡೂರಾವ್ ನಗರ, ಭೈರವೇಶ್ವರ ನಗರ, ಬಂಬೂಬಜಾರ್, ಬನ್ನಿ ಮಂಟಪ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವೆಡೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ನದಿಯಂತಾ ಗಿದ್ದವು. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು.

ಮುರಿದುಬಿದ್ದ 5 ವಿದ್ಯುತ್ ಕಂಬ: ಮೈಸೂರಿನ ಎಲೆತೋಟ ಜೆಎಸ್‍ಎಸ್ ಕಾಲೇಜು ರಸ್ತೆಯಲ್ಲಿ ತೆಂಗಿನ ಮರವೊಂದು ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದಿ ದ್ದರಿಂದ 5 ವಿದ್ಯುತ್ ಕಂಬಗಳು ತುಂಡಾಗಿವೆ. ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಕ್ಷಣ ವಿದ್ಯುತ್ ಹರಿವು ಕಡಿತಗೊಳಿಸಿ ಮುರಿದು ಬಿದ್ದ ಕಂಬಗಳನ್ನು ತೆರವುಗೊಳಿಸಿ ಜನ-ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಸೆಸ್ಕ್‍ನ ಕಾರ್ಯ ನಿರ್ವಾಹಕ ಅಭಿಯಂತರ ಬಿ.ಕೆ.ಯೋಗೇಶ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ವಾಡಿಕೆಗಿಂತ ಹೆಚ್ಚು ಮಳೆ: ಕಳೆದ 10 ವರ್ಷ ಗಳಿಂದ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿ ನಲ್ಲಿ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿಯುತ್ತಿದ್ದು, ಈ ವರ್ಷ ಶೇ.50ರಷ್ಟು ಹೆಚ್ಚುವರಿ ಮಳೆಯಾಗಿದೆ. ಸೋಮವಾರದಿಂದ ನಿರಂತರ ಮಳೆ ಯಾಗಲಿದ್ದು, ರೈತರು ಭತ್ತದ ಕೊಯ್ಲು ಪೂರ್ಣ ಗೊಳಿಸಿಕೊಂಡರೆ ಒಳಿತು ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾ ಪಕ ಟಿ.ಗೊವೀಂದರಾಜು ತಿಳಿಸಿದರು.

Translate »